
ಬಾಲಿವುಡ್ಗೆ ರಿಮೇಕ್ ಹೊಸದಲ್ಲ. ದಕ್ಷಿಣದಲ್ಲಿ ಹಿಟ್ ಆದ ಅನೇಕ ಚಿತ್ರಗಳನ್ನು ಬಾಲಿವುಡ್ಗೆ (Bollywood) ರಿಮೇಕ್ ಮಾಡಲಾಗಿದೆ. ಈ ಪೈಕಿ ಕೆಲವೇ ಕೆಲವು ಚಿತ್ರಗಳು ಗೆಲುವು ಕಂಡಿವೆ. ನವೆಂಬರ್ 18ರಂದು ರಿಲೀಸ್ ಆದ ‘ದೃಶ್ಯಂ 2’ ಸಿನಿಮಾ ಗೆಲ್ಲುವ ಸೂಚನೆ ಕೊಟ್ಟಿದೆ. ಅಜಯ್ ದೇವಗನ್ (Ajay Devgn) ನಟನೆಯ ಈ ಚಿತ್ರ ಒಳ್ಳೆಯ ಪ್ರತಿಕ್ರಿಯೆ ಪಡೆದಿದ್ದು, ಮೊದಲ ದಿನವೇ ಬಂಗಾರದ ಬೆಳೆ ತೆಗೆದಿದೆ. ಈ ಚಿತ್ರದಿಂದ ಬಾಲಿವುಡ್ಗೆ ಹೊಸ ಚೇತರಿಕೆ ಬರುವ ಸಾಧ್ಯತೆ ದಟ್ಟವಾಗಿದೆ.
ಮಲಯಾಳಂನಲ್ಲಿ ‘ದೃಶ್ಯಂ’ ಚಿತ್ರ ಹಿಟ್ ಆಯಿತು. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಈ ಸಿನಿಮಾ ಮೂಡಿ ಬಂದಿತ್ತು. ಇದನ್ನು ಹಿಂದಿಗೂ ರಿಮೇಕ್ ಮಾಡಲಾಗಿತ್ತು. ಆ ಚಿತ್ರ ಗೆದ್ದಿತ್ತು. ನಂತರ ಮಲಯಾಳಂನಲ್ಲಿ ‘ದೃಶ್ಯಂ 2’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಲಾಗಿದೆ. ಅಜಯ್ ದೇವಗನ್, ಇಶಿತಾ ದತ್, ಅಕ್ಷಯ್ ಖನ್ನಾ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ. ನವೆಂಬರ್ 18ರಂದು ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು.
ಮೊದಲ ದಿನ ‘ದೃಶ್ಯಂ 2’ ಚಿತ್ರ 15.38 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಅಕ್ಷಯ್ ಕುಮಾರ್ ನಟನೆಯ ‘ರಾಮ್ ಸೇತು’ ಚಿತ್ರದ ಮೊದಲ ದಿನದ ಗಳಿಕೆಯನ್ನು ಈ ಸಿನಿಮಾ ಹಿಂದಿಕ್ಕಿದೆ. ಇಂದು (ನವೆಂಬರ್ 19) ಹಾಗೂ ನಾಳೆ (ನವೆಂಬರ್ 20) ಚಿತ್ರ ಒಳ್ಳೆಯ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. ಈ ಚಿತ್ರದಿಂದ ಬಾಲಿವುಡ್ಗೆ ಹೊಸ ಚೈತನ್ಯ ಸಿಗುವ ಸೂಚನೆ ಸಿಕ್ಕಿದೆ.
ಒಂದು ಕೊಲೆ ನಡೆಯುತ್ತದೆ. ಕಥಾ ನಾಯಕ ಆ ಕೊಲೆಯನ್ನು ಮುಚ್ಚಿ ಹಾಕುತ್ತಾನೆ. ಎರಡನೇ ಪಾರ್ಟ್ನಲ್ಲಿ ಈ ಕೊಲೆ ಪ್ರಕರಣ ರೀ-ಓಪನ್ ಆಗುತ್ತದೆ. ಅದರಿಂದ ಹೀರೋ ಹೇಗೆ ತಪ್ಪಿಸಿಕೊಳ್ಳುತ್ತಾನೆ ಅನ್ನೋದು ದ್ವಿತೀಯಾರ್ಧದ ಹೈಲೈಟ್. ಚಿತ್ರವನ್ನು ನೋಡಿದ ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಸಾಲು ಸಾಲು ಬಾಲಿವುಡ್ ಸಿನಿಮಾಗಳು ಸೋಲು ಕಾಣುತ್ತಿವೆ. ಬೆರಳೆಣಿಕೆ ಚಿತ್ರಗಳು ಗೆದ್ದಿವೆ. ‘ಬ್ರಹ್ಮಾಸ್ತ್ರ’ ಸೇರಿ ಕೆಲವೇ ಕೆಲವು ಚಿತ್ರಗಳು ನೂರು ಕೋಟಿ ರೂಪಾಯಿ ಕ್ಲಬ್ ಸೇರಿವೆ. ಈಗ ‘ದೃಶ್ಯಂ 2’ ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿದರೆ ಸಿನಿಮಾ ಒಳ್ಳೆಯ ಗಳಿಕೆ ಮಾಡುವ ಸೂಚನೆ ಸಿಕ್ಕಿದೆ.