Salman Khan: ಸಲ್ಲುನ ಓಡಿ ಬಂದು ತಬ್ಬಿದ ಅಭಿಮಾನಿ; ನಟನ ರಿಯಾಕ್ಷನ್ ಹೇಗಿತ್ತು?

ಸಲ್ಮಾನ್ ಖಾನ್ ಅವರಿಗೆ ಭದ್ರತೆ ಹೆಚ್ಚಿಸಲಾಗಿದೆ. ಅವರನ್ನು ಕೊಲ್ಲುವುದಾಗಿ ನಿರಂತರವಾಗಿ ಬೆದರಿಕೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಅವರು ಹೋದಲ್ಲಿ ಬಂದಲ್ಲಿ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ.

Salman Khan: ಸಲ್ಲುನ ಓಡಿ ಬಂದು ತಬ್ಬಿದ ಅಭಿಮಾನಿ; ನಟನ ರಿಯಾಕ್ಷನ್ ಹೇಗಿತ್ತು?
ಸಲ್ಮಾನ್ ಖಾನ್

Updated on: May 25, 2023 | 11:29 AM

ನಟ ಸಲ್ಮಾನ್ ಖಾನ್​ಗೆ (Salman Khan) ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಇದರ ಮಧ್ಯೆಯೂ ಬಾಲಕನೋರ್ವ ಬಂದು ಸಲ್ಮಾನ್ ಖಾನ್ ಅವರನ್ನು ತಬ್ಬಿಕೊಂಡ ಘಟನೆ ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಒಳ್ಳೆಯ ಮೂಡ್​ನಲ್ಲಿದ್ದ ಸಲ್ಮಾನ್ ಖಾನ್ ಅವರು ಬಾಲಕನಿಗೆ ಹಗ್ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಸಲ್ಮಾನ್ ಖಾನ್ ಭದ್ರತಾ ಸಿಬ್ಬಂದಿಗಳು ಕೊಂಚ ಚಿಂತೆಗೆ ಒಳಗಾದಂತೆ ಕಂಡು ಬಂತು. ಸಲ್ಲುನ ತಬ್ಬಿಕೊಂಡ ಅಭಿಮಾನಿ ಸಾಕಷ್ಟು ಖುಷಿಪಟ್ಟಿದ್ದಾನೆ. ಈ ವಿಡಿಯೋಗೆ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಈ ಮೊದಲು ಕೂಡ ಈ ರೀತಿ ಅನೇಕರು ಸೆಲ್ಫಿ ತೆಗೆದುಕೊಳ್ಳಲು ಬಂದಿದ್ದರು. ರಂಜಾನ್ ಆಚರಿಸಲು ಸಲ್ಮಾನ್ ಖಾನ್ ಅವರು ದುಬೈಗೆ ತೆರಳಿದ್ದರು. ಅಲ್ಲಿನ ಅಭಿಮಾನಿಗಳ ಜೊತೆ ಸಲ್ಲು ಹಬ್ಬ ಆಚರಿಸಿದ್ದರುಈ ಹಬ್ಬ ಪೂರ್ಣಗೊಂಡ ಬಳಿಕ ಅವರು ಮುಂಬೈಗೆ ಮರಳಿದ್ದರು. ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅನೇಕರು ಮುಗಿಬಿದ್ದಿದ್ದರು.

ಸಲ್ಮಾನ್ ಖಾನ್ ಅವರು ನಡೆದು ಬರುತ್ತಿದ್ದರು. ಭದ್ರತಾ ಸಿಬ್ಬಂದಿ ಅವರನ್ನು ಸುತ್ತುವರಿದಿದ್ದರಿಂದ ಯಾರಿಗೂ ಸಲ್ಲುನ ಟಚ್ ಮಾಡೋಕೆ ಸಾಧ್ಯ ಆಗುತ್ತಿರಲಿಲ್ಲ. ಆಗ ಅಭಿಮಾನಿಯೋರ್ವ ಕೈ ಚಾಚಿದ್ದ. ಹ್ಯಾಂಡ್​ಶೇಕ್ ಮಾಡುವಂತೆ ಕೋರಿದ್ದ. ಹಿಂದಕ್ಕೆ ಹೋಗುವಂತೆ ಸಲ್ಮಾನ್ ಖಾನ್ ಸೂಚಿಸಿದರೂ ಅಭಿಮಾನಿ ಪ್ರಯತ್ನ ನಿಲ್ಲಿಸಿಲ್ಲ. ಆಗ ಸಲ್ಮಾನ್ ಖಾನ್ ಬಾಡಿ ಗಾರ್ಡ್ ಶೇರಾ ಅವರು ಅಭಿಮಾನಿಯನ್ನು ಹಿಂದಕ್ಕೆ ತಳ್ಳಿದ್ದ.

ಸಲ್ಮಾನ್ ಖಾನ್ ಅವರಿಗೆ ಭದ್ರತೆ ಹೆಚ್ಚಿಸಲಾಗಿದೆ. ಅವರನ್ನು ಕೊಲ್ಲುವುದಾಗಿ ನಿರಂತರವಾಗಿ ಬೆದರಿಕೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಅವರು ಹೋದಲ್ಲಿ ಬಂದಲ್ಲಿ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ. ಅವರು ಬುಲೆಟ್​ಪ್ರೂಫ್ ಕಾರನ್ನು ಕೂಡ ಖರೀದಿಸಿದ್ದಾರೆ. ಹೀಗಿರುವಾಗಲೇ ಅವರ ಅಭಿಮಾನಿ ಬಂದು ಶೇಕ್​​ಹ್ಯಾಂಡ್ ಮಾಡಿದ್ದಾನೆ.


ಇದನ್ನೂ ಓದಿ: 19 ಅಂತಸ್ತಿನ ಐಷಾರಾಮಿ ಹೋಟೆಲ್ ನಿರ್ಮಿಸಲಿದ್ದಾರೆ ಸಲ್ಮಾನ್ ಖಾನ್? ಇಲ್ಲಿದೆ ಸಂಪೂರ್ಣ ವಿವರ

ಸಲ್ಮಾನ್ ಖಾನ್ ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಈದ್ ಪ್ರಯಕ್ತ ಏಪ್ರಿಲ್ 21ರಂದು ರಿಲೀಸ್ ಆಗಿದೆ. ಈ ಸಿನಿಮಾದ ಕಲೆಕ್ಷನ್ 100 ಕೋಟಿ ರೂಪಾಯಿ ಗಳಿಸಿದೆ. ಈ ಚಿತ್ರ ಶೀಘ್ರವೇ ಒಟಿಟಿಗೆ ಕಾಲಿಡುವ ಸೂಚನೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ