ದೀಪಿಕಾಗಾಗಿ ಶೂಟಿಂಗ್ ಶೆಡ್ಯೂಲ್ ಬದಲಿಸಲಿರುವ ಅಲ್ಲು ಅರ್ಜುನ್, ಶಾರುಖ್ ಖಾನ್

Deepika Padukone: ದೀಪಿಕಾ ಪಡುಕೋಣೆ ಎರಡನೇ ಬಾರಿ ಗರ್ಭಿಣಿ ಆಗಿದ್ದು, ಅವರ ಅಭಿಮಾನಿಗಳು, ಹಲವಾರು ಮಂದಿ ಬಾಲಿವುಡ್ ಸೆಲೆಬ್ರಿಟಿಗಳು ದೀಪಿಕಾರಿಗೆ ಶುಭಾಶಯಗಳನ್ನು ಕೋರಿದ್ದಾರೆ. ದೀಪಿಕಾ ಅವರು ಮತ್ತೆ ತಾಯಿ ಆಗುತ್ತಿರುವುದು ಖುಷಿಯ ವಿಷಯವಾದರೂ ಎರಡು ಸಿನಿಮಾಗಳಿಗೆ ಇದರಿಂದ ತುಸು ಸಮಸ್ಯೆ ಆಗಿದೆ. ಅದುವೇ ಶಾರುಖ್ ಖಾನ್ ಅವರ ‘ಕಿಂಗ್’ ಮತ್ತು ಅಲ್ಲು ಅರ್ಜುನ್ ನಟನೆಯ ‘ರಾಕಾ’.

ದೀಪಿಕಾಗಾಗಿ ಶೂಟಿಂಗ್ ಶೆಡ್ಯೂಲ್ ಬದಲಿಸಲಿರುವ ಅಲ್ಲು ಅರ್ಜುನ್, ಶಾರುಖ್ ಖಾನ್
Deepika

Updated on: Apr 19, 2026 | 10:18 PM

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಇಂದು (ಏಪ್ರಿಲ್ 19) ಖುಷಿ ವಿಷಯ ಹಂಚಿಕೊಂಡಿದ್ದಾರೆ. ಈಗಾಗಲೇ ಮುದ್ದಾದ ಹೆಣ್ಣು ಮಗುವಿನ ತಾಯಿ ಆಗಿರುವ ದೀಪಿಕಾ ಪಡುಕೋಣೆ, ಇದೀಗ ಎರಡನೇ ಮಗುವನ್ನು ಸ್ವಾಗತಿಸಲು ಸಜ್ಜಾಗಿದ್ದು, ತಾವು ಗರ್ಭಿಣಿ ಆಗಿರುವ ವಿಷಯವನ್ನು ಹಂಚಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಅಭಿಮಾನಿಗಳು, ಹಲವಾರು ಮಂದಿ ಬಾಲಿವುಡ್ ಸೆಲೆಬ್ರಿಟಿಗಳು ದೀಪಿಕಾರಿಗೆ ಶುಭಾಶಯಗಳನ್ನು ಕೋರಿದ್ದಾರೆ. ದೀಪಿಕಾ ಅವರು ಮತ್ತೆ ತಾಯಿ ಆಗುತ್ತಿರುವುದು ಖುಷಿಯ ವಿಷಯವಾದರೂ ಎರಡು ಸಿನಿಮಾಗಳಿಗೆ ಇದರಿಂದ ತುಸು ಸಮಸ್ಯೆ ಆಗಿದೆ. ಅದುವೇ ಶಾರುಖ್ ಖಾನ್ ಅವರ ‘ಕಿಂಗ್’ ಮತ್ತು ಅಲ್ಲು ಅರ್ಜುನ್ ನಟನೆಯ ‘ರಾಕಾ’.

ದೀಪಿಕಾ ಪಡುಕೋಣೆ ಪ್ರಸ್ತುತ ಶಾರುಖ್ ಖಾನ್ ನಟನೆಯ ‘ಕಿಂಗ್’ ಮತ್ತು ಅಲ್ಲು ಅರ್ಜುನ್ ನಟಿಸಿ ಅಟ್ಲಿ ನಿರ್ದೇಶನ ಮಾಡುತ್ತಿರುವ ‘ರಾಕಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಎರಡೂ ಸಿನಿಮಾಗಳು ಆಕ್ಷನ್ ಕತೆಯನ್ನು ಹೊಂದಿದ್ದು, ಎರಡರಲ್ಲೂ ದೀಪಿಕಾ ಪಡುಕೋಣೆ ಮುಖ್ಯ ನಾಯಕಿ. ‘ಕಿಂಗ್’ ಸಿನಿಮಾದ ಚಿತ್ರೀಕರಣ ಅರ್ಧದಲ್ಲಿದ್ದರೆ, ‘ರಾಕಾ’ ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಶುರುವಾಗಿದೆ. ಎರಡೂ ಸಿನಿಮಾಗಳ ಚಿತ್ರೀಕರಣ ಸಾಕಷ್ಟು ಬಾಕಿ ಇರುವಾಗಲೇ ದೀಪಿಕಾ ಪ್ರೆಗ್ನೆನ್ಸಿ ಘೋಷಿಸಿದ್ದು ಇದು ಎರಡೂ ಸಿನಿಮಾಗಳಿಗೆ ತುಸು ಸಮಸ್ಯೆ ಆಗಿದೆ.

ಇದನ್ನೂ ಓದಿ:8 ಗಂಟೆ ಕೆಲಸದ ಶಿಫ್ಟ್ ವಿವಾದ: ದೀಪಿಕಾ ಪಡುಕೋಣೆ ಪರ ನಿಂತ ಕಂಗನಾ ರಣಾವತ್

ಎರಡೂ ಸಿನಿಮಾಗಳಲ್ಲಿ ದೀಪಿಕಾ ಪಡುಕೋಣೆ ಸಾಕಷ್ಟು ಆಕ್ಷನ್ ದೃಶ್ಯಗಳಲ್ಲಿ ಭಾಗವಹಿಸಬೆಕಿದೆ. ಎರಡೂ ಸಿನಿಮಾಗಳಲ್ಲಿ ಖುದ್ದು ದೀಪಿಕಾ ಪಡುಕೋಣೆ ಸಹ ಆಕ್ಷನ್​ ಸೀನ್​​ಗಳಲ್ಲಿ ಭಾಗಿ ಆಗಲಿದ್ದಾರೆ. ಹಾಗಾಗಿ ಎರಡೂ ಸಿನಿಮಾ ತಂಡದವರು ದೀಪಿಕಾ ಅವರು ನಟಿಸಲಿರುವ ಸೀನ್​​ಗಳ ಚಿತ್ರೀಕರಣವನ್ನು ಬೇಗನೆ ಮುಗಿಸಲು ಯೋಜನೆ ಹಾಕಿಕೊಂಡಿವೆ. ಅದರಲ್ಲೂ ದೀಪಿಕಾರ ಆಕ್ಷನ್ ಸೀನ್​​ಗಳ ಚಿತ್ರೀಕರಣವನ್ನು ಬೇಗನೆ ಮುಗಿಸಲು ಸಜ್ಜಾಗಿದ್ದು, ಇದಕ್ಕಾಗಿ ಇಡೀ ಶೂಟಿಂಗ್ ಶೆಡ್ಯೂಲ್ ಅನ್ನು ಬದಲಾವಣೆ ಮಾಡಲಿವೆ ಎನ್ನಲಾಗುತ್ತಿದೆ.

ದೀಪಿಕಾ ಪಡುಕೋಣೆ ಈ ಹಿಂದೆ ಸಹ ಗರ್ಭಿಣಿ ಆಗಿದ್ದಾಗ ಸಿನಿಮಾನಲ್ಲಿ ನಟಿಸಿದ್ದರು. ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ದೀಪಿಕಾ ಪಡುಕೋಣೆ ಗರ್ಭಿಣಿ ಆಗಿದ್ದರು. ಆ ಸಿನಿಮಾನಲ್ಲೂ ಸಹ ಅವರದ್ದು ಗರ್ಭಿಣಿ ಯುವತಿಯ ಪಾತ್ರ ಆಗಿತ್ತು. ಇದೀಗ ಮತ್ತೆ ಗರ್ಭಿಣಿ ಆಗಿದ್ದು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us