Karan Johar Birthday: ‘ನಿಮ್ಮ ಸಹೋದರನೊಂದಿಗೆ ಮಲಗುತ್ತೀರಾ’ ಎಂದು ಆ್ಯಂಕರ್​ಗೆ ಕೇಳಿದ್ದ ಕರಣ್ ಜೋಹರ್

Karan Johar Birthday: ಕರಣ್ ಜೋಹರ್ ‘ಗೇ’ ಎನ್ನುವುದು ಅನೇಕರ ಅಭಿಪ್ರಾಯ. ಈ ವಿಚಾರದಲ್ಲಿ ಸಾಕಷ್ಟು ಚರ್ಚೆ ಕೂಡ ನಡೆದಿದೆ. ಶಾರುಖ್​ಗೂ ಕರಣ್​​ಗೂ ಸಂಬಂಧ ಕಲ್ಪಿಸಲಾಗಿತ್ತು.

Karan Johar Birthday: ‘ನಿಮ್ಮ ಸಹೋದರನೊಂದಿಗೆ ಮಲಗುತ್ತೀರಾ’ ಎಂದು ಆ್ಯಂಕರ್​ಗೆ ಕೇಳಿದ್ದ ಕರಣ್ ಜೋಹರ್
ಕರಣ್ ಜೋಹರ್

Updated on: May 25, 2023 | 10:53 AM

ಬಾಲಿವುಡ್​ನ ಫೇಮಸ್ ನಿರ್ಮಾಪಕ ಕರಣ್ ಜೋಹರ್ (Karan Johar) ಅವರಿಗೆ ಇಂದು (ಮೇ 25) ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಕರಣ್ ಜೋಹರ್ ಅವರು ಸಾಕಷ್ಟು ಫೇಮಸ್. ಸ್ಟಾರ್ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸುವುದರಲ್ಲಿ ಅವರು ಸದಾ ಮುಂದಿರುತ್ತಾರೆ. ಚಿತ್ರರಂಗದಲ್ಲಿ ಸ್ಟಾರ್ ಮಕ್ಕಳಿಗೆ ಮಾತ್ರ ಅವರು ಬೆಂಬಲ ನೀಡುತ್ತಾರೆ ಎನ್ನುವ ಆರೋಪ ಮೊದಲಿನಿಂದಲೂ ಇದೆ. ಈ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ. ಕರಣ್ ಜೋಹರ್ ಹಾಗೂ ಶಾರುಖ್ ಖಾನ್ (Shah Rukh Khan) ನಡುವೆ ನಡುವೆ ಬೇರೆ ರೀತಿಯ ಸಂಬಂಧ ಇದೆ ಎನ್ನುವ ವದಂತಿ ಈ ಮೊದಲು ಹುಟ್ಟಿಕೊಂಡಿತ್ತು. ಇದಕ್ಕೆ ಕರಣ್ ಸ್ಪಷ್ಟನೆ ನೀಡಿದ್ದರು.

ಕರಣ್ ಜೋಹರ್ ‘ಗೇ’ ಎನ್ನುವುದು ಅನೇಕರ ಅಭಿಪ್ರಾಯ. ಈ ವಿಚಾರದಲ್ಲಿ ಸಾಕಷ್ಟು ಚರ್ಚೆ ಕೂಡ ನಡೆದಿದೆ. ಶಾರುಖ್​ಗೂ ಕರಣ್​​ಗೂ ಸಂಬಂಧ ಕಲ್ಪಿಸಲಾಗಿತ್ತು. ಶಾರುಖ್ ಖಾನ್ ಹಲವು ಸಿನಿಮಾಗಳಲ್ಲಿ ಒಂದಾಗಿ ಕೆಲಸ ಮಾಡಿದ್ದಾರೆ. ಇವರ ನಡುವೆ ಒಳ್ಳೆಯ ಗೆಳೆತನ​ ಇದೆ. ಆದರೆ, ಇದನ್ನು ಕೆಲವರು ಬೇರೆಯದೇ ರೀತಿಯಲ್ಲಿ ಅರ್ಥೈಸಿ ಹೇಳಿದ್ದರು. ಇದು ಶಾರುಖ್ ಕಿವಿಗೂ ಬಿದ್ದಿತ್ತು. ಈ ವದಂತಿಗಳ ಬಗ್ಗೆ ಶಾರುಖ್​ ಅಷ್ಟಾಗಿ ಯೋಚಿಸಲಿಲ್ಲ. ಆದರೆ, ಕರಣ್ ಜೋಹರ್ ಅವರು ಹೆಚ್ಚು ದಿನ ಇದನ್ನು ಸಹಿಸಿಕೊಳ್ಳಲಿಲ್ಲ. ಈ ಬಗ್ಗೆ ಅವರು ಮೌನ ಮುರಿದಿದ್ದರು.

ಕರಣ್ ಜೋಹರ್ ಆಟೋಬಯೋಗ್ರಫಿ ಬರೆದಿದ್ದಾರೆ. ಈ ಪುಸ್ತಕದಲ್ಲಿ ಒಂದಷ್ಟು ಸಾಲುಗಳನ್ನು ಅವರು ಈ ವಿಚಾರದ ಬಗ್ಗೆ ಬರೆಯಲು ಮೀಸಲಿಟ್ಟಿದ್ದರು. ‘ಇಂದು ಪ್ರಪಂಚದಲ್ಲಿರುವ ಎಲ್ಲ ಲೈಂಗಿಕತೆಯನ್ನು ಹೊಂದಲು ನನ್ನ ಬಳಿ ಮಾರ್ಗಗಳಿವೆ ಎಂದು ಜನರು ಭಾವಿಸುತ್ತಾರೆ. ಆದರೆ ಹಾಗಲ್ಲ. ನನಗೆ ಸೆಕ್ಸ್ ಎಂಬುದು ತುಂಬಾ ವೈಯಕ್ತಿಕ ಭಾವನೆ. ಇದು ಕ್ಯಾಶ್ಯುವಲ್ ಆಗಿ ಮಾಡುವ ವಿಷಯವಲ್ಲ. ನನ್ನ ಬಗ್ಗೆ ಕೇಳಿ ಬಂದ ವದಂತಿಗಳನ್ನು ನಾನು ಯಾವಾಗಲೂ ನಿಭಾಯಿಸಿದ್ದೇನೆ’ ಎನ್ನುವ ಮೂಲಕ ಪರೋಕ್ಷವಾಗಿ ಎಲ್ಲದಕ್ಕೂ ಅವರು ತೆರೆ ಎಳೆದಿದ್ದರು.

ಇದನ್ನೂ ಓದಿ: ನಷ್ಟ ಆಗದಂತೆ ಸಿನಿಮಾ ನಿರ್ಮಾಣ ಮಾಡುವುದು ಹೇಗೆ? ಕರಣ್ ಜೋಹರ್ ಪಾಲಿಸುವ ಸೂತ್ರವಿದು

‘ನನ್ನ ಲೈಂಗಿಕತೆಯ ಬಗ್ಗೆ ತುಂಬಾ ಊಹಾಪೋಹಗಳಿವೆ. ಶಾರುಖ್ ಮತ್ತು ನನ್ನ ಬಗ್ಗೆಯೂ ಸಾಕಷ್ಟು ವದಂತಿಗಳು ಹುಟ್ಟಿಕೊಂಡಿವೆ. ನಾನು ಅದರಿಂದ ಆಘಾತಕ್ಕೊಳಗಾಗಿದ್ದೆ. ಹಿಂದಿ ವಾಹಿನಿಯೊಂದರ ಶೋನಲ್ಲಿ ಶಾರುಖ್ ಬಗ್ಗೆ ನನ್ನಲ್ಲಿ ಕೇಳಲಾಯಿತು. ‘ನಿಮ್ಮಿಬ್ಬರ ಸಂಬಂಧ ಹೇಗಿದೆ’ ಎಂದು ಅವರು ಪ್ರಶ್ನೆ ಮಾಡಿದರು. ನನಗೆ ಕೋಪ ಬಂತು. ‘ನೀವು ನಿಮ್ಮ ಸಹೋದರನೊಂದಿಗೆ ಮಲಗುತ್ತೀರಾ ಎಂದು ನಾನು ನಿಮ್ಮನ್ನು ಕೇಳಿದರೆ ನಿಮಗೆ ಹೇಗೆ ಅನಿಸುತ್ತದೆ?’ ಎಂದು ಅವರನ್ನು ಪ್ರಶ್ನಿಸಿದೆ. ಶಾರುಖ್​ ನನಗೆ ಓರ್ವ ತಂದೆ, ಓರ್ವ ಅಣ್ಣ ಇದ್ದ ಹಾಗೆ’ ಎಂದು ಬರೆದುಕೊಂಡಿದ್ದರು ಕರಣ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:50 am, Thu, 25 May 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us