
ನಟಿ ಆಲಿಯಾ ಭಟ್ (Alia Bhatt) ಹಾಗೂ ರಣಬೀರ್ ಕಪೂರ್ (Ranbir Kapoor) ಮನೆಗೆ ಹೊಸ ಸದಸ್ಯನ ಆಗಮನವಾಗುತ್ತಿದೆ. ಮದುವೆ ಆಗಿ ಕೇವಲ ಎರಡೂವರೆ ತಿಂಗಳಲ್ಲಿ ಈ ದಂಪತಿ ಸಿಹಿ ಸುದ್ದಿ ನೀಡಿದೆ. ತಾವು ತಾಯಿ ಆಗುತ್ತಿರುವ ವಿಚಾರವನ್ನು ಆಲಿಯಾ ಘೋಷಿಸಿದ್ದು ಅಭಿಮಾನಿಗಳಿಗೆ ಖುಷಿ ನೀಡಿದೆ. ಆಲಿಯಾಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳ ಕಡೆಯಿಂದ ಶುಭಾಶಯ ಹರಿದು ಬರುತ್ತಿದೆ. ಎಲ್ಲರೂ ಆಲಿಯಾ ಹಾಗೂ ರಣಬೀರ್ ದಂಪತಿ ಬಗ್ಗೆ ಸಂತಸದ ಮಾತುಗಳನ್ನು ಆಡುತ್ತಿದ್ದಾರೆ. ಈ ದಂಪತಿಗೆ ಕಾಂಡೋಮ್ ಕಂಪನಿ ಡ್ಯುರೆಕ್ಸ್ ಕೂಡ ಶುಭಾಶಯ ತಿಳಿಸಿದೆ. ಫನ್ನಿಯಾಗಿ ಟ್ವೀಟ್ ಮಾಡಿದೆ. ಈ ಟ್ವೀಟ್ ಸಖತ್ ವೈರಲ್ ಆಗುತ್ತಿದೆ.
ಆಲಿಯಾ ಭಟ್ ಅವರು ಇಂದು (ಜೂನ್ 27) ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಆಸ್ಪತ್ರೆಯಲ್ಲಿದ್ದಾರೆ. ರಣಬೀರ್ ಕಪೂರ್ ಕೂಡ ಆಲಿಯಾ ಜತೆ ಇದ್ದಾರೆ. ‘ಶೀಘ್ರವೇ ನಮ್ಮ ಮಗು ಬರಲಿದೆ’ ಎಂದು ಆಲಿಯಾ ಕ್ಯಾಪ್ಶನ್ ನೀಡಿದ್ದಾರೆ. ಈ ಪೋಸ್ಟ್ಗೆ ಎಲ್ಲರೂ ಶುಭಾಶಯ ತಿಳಿಸಿದ್ದರು. ಡ್ಯುರೆಕ್ಸ್ ಕಂಪನಿ ಕೂಡ ಈ ದಂಪತಿಗೆ ಶುಭಾಶಯ ತಿಳಿಸಿ ವಿಶೇಷ ಪೋಸ್ಟ್ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಡ್ಯುರೆಕ್ಸ್, ‘ನಿಮ್ಮ ಖುಷಿಯ ಕ್ಷಣದಲ್ಲಿ ನಾವು ಖಂಡಿತವಾಗಿಯೂ ಇರಲಿಲ್ಲ’ ಎಂದು ಬರೆದುಕೊಂಡಿದೆ. ಜತೆಗೆ ಶೀಘ್ರವೇ ತಂದೆ-ತಾಯಿ ಆಗುತ್ತಿರುವ ಈ ದಂಪತಿಗೆ ಶುಭಾಶಯ ತಿಳಿಸಿದೆ.
ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಏಪ್ರಿಲ್ 14ರಂದು ಮುಂಬೈನಲ್ಲಿ ವಿವಾಹವಾದರು. ಅವರ ದಾಂಪತ್ಯ ಜೀವನಕ್ಕೆ ಎಲ್ಲರೂ ವಿಶ್ ತಿಳಿಸಿದ್ದರು. ಈ ಸಂದರ್ಭದಲ್ಲೂ ಡ್ಯುರೆಕ್ಸ್ ಕಂಪೆನಿಯವರು ಟ್ವೀಟ್ ಒಂದನ್ನು ಮಾಡಿದ್ದರು. ‘ಪ್ರೀತಿಯ ರಣಬೀರ್ ಹಾಗೂ ಆಲಿಯಾ, ನಿಮ್ಮ ಖುಷಿಯ ಕ್ಷಣದಲ್ಲಿ ನಾವು ಇಲ್ಲ ಎಂದರೆ ಫನ್ ಇರುವುದಿಲ್ಲ’ ಎಂದು ಡ್ಯುರೆಕ್ಸ್ನವರು ಬರೆದಿದ್ದರು.
ಡ್ಯುರೆಕ್ಸ್ನವರು ಈಗ ಮಾಡಿದ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಕಂಪನಿಯ ಮಾರ್ಕೆಟಿಂಗ್ ತಂತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಟ್ರೋಲ್ ಪೇಜ್ಗಳಲ್ಲೂ ಈ ಪೋಸ್ಟ್ ಬಳಕೆ ಆಗುತ್ತಿದೆ.
ಇದನ್ನೂ ಓದಿ: ‘ಬ್ರಹ್ಮಾಸ್ತ್ರ’ ಟ್ರೇಲರ್ನಲ್ಲಿ ಗಮನ ಸೆಳೆದ ಪಾತ್ರವರ್ಗ; ಆಲಿಯಾ, ರಣಬೀರ್ ಜತೆ ಬಚ್ಚನ್, ನಾಗಾರ್ಜುನ ಮಿಂಚಿಂಗ್
ಆಲಿಯಾ ಭಟ್ ಪ್ರೆಗ್ನೆಂಟ್; ರಣಬೀರ್ ಕಪೂರ್ ಜತೆ ಮದುವೆ ಆಗಿ ಎರಡೂವರೆ ತಿಂಗಳಲ್ಲಿ ಗುಡ್ ನ್ಯೂಸ್