ಬಾಲಿವುಡ್ನಲ್ಲಿ ಈಗಾಗಲೇ ‘ಬ್ಯಾಂಗ್ ಬ್ಯಾಂಗ್’, ‘ವಾರ್’ ಮೊದಲಾದ ಆಕ್ಷನ್ ಚಿತ್ರಗಳಿಂದ ಹೆಸರು ಮಾಡಿರುವ ನಿರ್ದೇಶಕ ಸಿದ್ಧಾರ್ಥ್ ಆನಂದ್, ‘ಫೈಟರ್’ ಚಿತ್ರದ ಮೂಲಕ ಮತ್ತೊಂದು ಅದ್ದೂರಿ ಬಜೆಟ್ನ ಮೈ ನವಿರೇಳಿಸುವ ಆಕ್ಷನ್ ಚಿತ್ರವನ್ನು ಉಣಬಡಿಸಲು ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ನ ಖ್ಯಾತ ನಟ ಹೃತಿಕ್ ರೋಷನ್ ಹಾಗೂ ನಟಿ ದೀಪಿಕಾ ಪಡುಕೋಣೆ ಮೊದಲ ಬಾರಿಗೆ ತೆರೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಭಾರತದ ಚಿತ್ರರಂಗದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ವೈಮಾನಿಕ ಸಾಹಸಗಳನ್ನು ಒಳಗೊಂಡ ಚಿತ್ರ ಇದಾಗಿರಲಿದೆ ಎಂದು ಈ ಹಿಂದೆ ಚಿತ್ರತಂಡ ತಿಳಿಸಿತ್ತು. ಇಂದು ಚಿತ್ರಬಿಡುಗಡೆಯ ದಿನಾಂಕವನ್ನು ಚಿತ್ರತಂಡ ನಿಗದಿಪಡಿಸಿದೆ. ಅದಾಗ್ಯೂ ಅಭಿಮಾನಿಗಳಿಗೆ ಬೇಸರವಾಗಿದೆ.
ಫೈಟರ್ ಚಿತ್ರವನ್ನು 2023ರ ಗಣಾಜ್ಯೋತ್ಸವದಂದು ಅಂದರೆ ಜನವರಿನ 26ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಇಂದು ಘೋಷಣೆ ಮಾಡಿದೆ. ಈ ಮೊದಲು ಚಿತ್ರತಂಡ ತಿಳಿಸಿದ್ದ ಮಾಹಿತಿಯ ಪ್ರಕಾರ 2022ರಲ್ಲಿ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣಗಳಿಂದಾಗಿ ಚಿತ್ರೀಕರಣ ಪ್ರಾರಂಭ ಮುಂದೂಡಲಾಗಿತ್ತು. ಇದೀಗ ಚಿತ್ರೀಕರಣ ಪ್ರಾರಂಭಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಚಿತ್ರಕ್ಕೆ ತಯಾರಾಗುತ್ತಿರುವ ಕುರಿತು ಇತ್ತೀಚೆಗೆ ಹೃತಿಕ್ ರೋಷನ್ ಚಿತ್ರವನ್ನು ಹಂಚಿಕೊಂಡಿದ್ದರು.
ಹೃತಿಕ್ ಹಂಚಿಕೊಂಡ ಚಿತ್ರ:
ಅದ್ದೂರಿ ಬಜೆಟ್ನ, ಮೈ ನವಿರೇಳಿಸುವ ಆಕ್ಷಬನ್ ದೃಶ್ಯಗಳಿರುವ ‘ಫೈಟರ್’ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದರೂ ಫ್ಯಾನ್ಸ್ಗೆ ತುಸು ಬೇಸರವಾಗಿದೆ. ಕಾರಣ, ಅಭಿಮಾನಿಗಳು ಚಿತ್ರ 2022ರಲ್ಲಿ ತೆರೆಗೆ ಬರುತ್ತದೆ ಎಂದು ಭಾವಿಸಿದ್ದರು. ಆದರೆ ಈಗ 2023ರಲ್ಲಿ ಎಂದಾಗ ಮತ್ತಷ್ಟು ದಿನ ಕಾಯಬೇಕಲ್ಲಾ ಎಂದು ಬೇಸರವಾಗಿದ್ದಾರೆ. ಹೃತಿಕ್, ದೀಪಿಕಾ ಮೊದಲ ಬಾರಿಗೆ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಹಾಗೂ ವೈಮಾನಿಕ ಸಾಹಸ ದೃಶ್ಯಗಳಿವೆ ಎಂಬ ಸುದ್ದಿಗಳಿಂದಾಗಿ ಅಭಿಮಾನಿಗಳಿಗೆ ಈ ಚಿತ್ರದ ಕುರಿತು ಬಹಳಷ್ಟು ನಿರೀಕ್ಷೆ ಇದೆ.
ಚಿತ್ರವನ್ನು ವಯೊಕಾಮ್ 18 ಸ್ಟುಡಿಯೋಸ್ ನಿರ್ಮಾಣ ಮಾಡುತ್ತಿದೆ. ಈ ಹಿಂದೆ ಅಂದಾಧುನ್, ಭಾಗ್ ಮಿಲ್ಖಾ ಭಾಗ್, ಸ್ಪೆಷಲ್ ಛಬ್ಬೀಸ್ ಮೊದಲಾದ ಖ್ಯಾತ ಹಿಟ್ ಚಿತ್ರಗಳನ್ನು ವಯೊಕಾಮ್ 18 ನಿರ್ಮಾಣ ಮಾಡಿತ್ತು. ‘ಫೈಟರ್’ ಚಿತ್ರದಲ್ಲಿ ಭಾರತದ ಚಿತ್ರರಂಗದಲ್ಲಿ ಹಿಂದೆಂದೂ ಕಾಣದಂತಹ ಸಾಹಸ ದೃಶ್ಯಗಳನ್ನು ಸಂಯೋಜಿಸಲಾಗುವುದು. ಆ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದುಮಾಡುವಂತೆ ಚಿತ್ರ ನಿರ್ಮಿಸಲಾಗುವುದು ಎಂದು ಈ ಹಿಂದೆ ನಿರ್ದೇಶಕ ಸಿದ್ಧಾರ್ಥ್ ಆನಂದ್ ಮಾಧ್ಯಮವೊಂದಕ್ಕೆ ತಿಳಿಸಿದ್ದರು.
ಇದನ್ನೂ ಓದಿ:
ದುನಿಯಾ ವಿಜಯ್ ನಟನೆಯ ಸಲಗ ರಿಲೀಸ್ ಡೇಟ್ ಬಗ್ಗೆ ಇಲ್ಲಿದೆ ಲೇಟೆಸ್ಟ್ ನ್ಯೂಸ್
(Hrithik Roshan and Deepika Padukone starring Fighter Movie will release on Republic day of 2023)