ಮುಂಬೈ: ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ(Raj Kundra) ಅವರನ್ನು ಪೊಲೀಸರು ಇಂದು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ನೀಲಿ ಚಿತ್ರಗಳನ್ನು ತಯಾರಿಸಿ ಅದನ್ನು ಹಂಚಿದ ಆರೋಪ ಅವರ ಮೇಲಿದೆ. ಈ ಹಿಂದೆ ಮುಂಬೈ ನ್ಯಾಯಾಲಯವು ರಾಜ್ ಕುಂದ್ರಾರನ್ನು ಜುಲೈ 23ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲು ಅನುಮತಿ ನೀಡಿತ್ತು. ಆ ಅವಧಿ ಇಂದು ಮುಗಿಯಲಿದ್ದು ರಾಜ್ ಕುಂದ್ರಾರ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ. ರಾಜ್ ಕುಂದ್ರಾ ಇದುವರೆಗೂ ತಮ್ಮ ತಪ್ಪನ್ನು ಒಪ್ಪಿಕೊಳ್ಳದೇ, ತಾವು ತಯಾರಿಸಿರುವುದು ನೀಲಿ ಚಿತ್ರಗಳನ್ನಲ್ಲ; ಅವು ಕೇವಲ ಶೃಂಗಾರ ಚಿತ್ರಗಳು(Erotica) ಎನ್ನುತ್ತಿದ್ದಾರೆ. ಜೊತೆಗೆ ಅವರು ತನಿಖೆಗೆ ಸಹಕಾರ ನೀಡದ ಕಾರಣ ಕಸ್ಟಡಿ ಮುಂದುವರೆಸಲು ಪೊಲೀಸರು ಅನುಮತಿ ಕೇಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವರದಿಗಳ ಪ್ರಕಾರ, ನಟಿ ಶಿಲ್ಪಾ ಶೆಟ್ಟಿಯವರಿಗೆ ಸಮನ್ಸ್ ನೀಡುವ ಸಾಧ್ಯತೆ ಇಲ್ಲ. ರಾಜ್ ಕುಂದ್ರಾ ಮಾಲಿಕರಾಗಿರುವ ವಿಯಾನ್ ಇಂಡಸ್ಟ್ರೀಸ್ಗೆ ನಟಿ ಶಿಲ್ಪಾ ಶೆಟ್ಟಿ ಸಹ ಸಂಬಂಧಿಸಿರುವುದರಿಂದ ಅವರನ್ನೂ ಪ್ರಶ್ನಿಸಬಹುದು ಎಂದು ಈ ಹಿಂದೆ ಹೇಳಲಾಗುತ್ತಿತ್ತು. ಆದರೆ ಈಗ ಆ ಸಾಧ್ಯತೆಯಿಲ್ಲ ಎನ್ನಲಾಗಿದೆ. ಈ ನಡುವೆ ಪೊಲೀಸರ ತನಿಖೆ ವಿಯಾನ್ ಇಂಡಸ್ಟ್ರೀಸ್ ಇಂದ ‘ಕೆನ್ರಿನ್’ ಕಂಪನಿಯತ್ತ ತಿರುಗಿದ್ದು, ‘ಹಾಟ್ಶಾಟ್ಸ್’ ಮಾಲೀಕತ್ವ ಹೊಂದಿದ್ದ ಅದರ ಕುರಿತು ತನಿಖೆ ನಡೆಸಲಾಗುತ್ತಿದೆ.
ರಾಜ್ ಕುಂದ್ರಾ ವಿರುದ್ಧ ನಟಿಯರ ಆರೋಪ ಮುಂದುವರೆದಿದ್ದು ಗೆಹಾನಾ ವಸಿಷ್ಠ ಹೊರತಾಗಿ ಮತ್ತೆಲ್ಲರೂ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇತ್ತೀಚೆಗಷ್ಟೇ ಮೌನ ಮುರಿದಿದ್ದ ಶೆರ್ಲಿನ್ ಚೋಪ್ರಾ ತಾನೇ ಮೊದಲು ಪೊಲೀಸರಿಗೆ ರಾಜ್ ಕುಂದ್ರಾ ವಿರುದ್ಧ ಹೇಳಿಕೆಗಳನ್ನು ನೀಡಿದ್ದಾಗಿ ತಿಳಿಸಿದ್ದರು. ಪೂನಮ್ ಪಾಂಡೆ ಸಹ ರಾಜ್ ಕುಂದ್ರಾ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದು, ಹಾಟ್ಶಾಟ್ಸ್ ಸೀರೀಸ್ಗೆ ರಾಜ್ ಕುಂದ್ರಾ ನಟಿಸಲು ಕೇಳಿದ್ದರು. ತಾನು ನಿರಾಕರಿಸಿದ್ದಕ್ಕೆ ತನ್ನ ಫೋನ್ ನಂಬರ್ ಅನ್ನು ಲೀಕ್ ಮಾಡಿದ್ದರು ಎಂದು ಆರೋಪಿಸಿದ್ದರು.
ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವಾರು ಸಾಕ್ಷಿಗಳನ್ನು ಕಲೆಹಾಕಿದ್ದು ಅವುಗಳು ರಾಜ್ ಕುಂದ್ರಾ ಕೈವಾಡವನ್ನು ಸ್ಪಷ್ಟೀಕರಿಸುತ್ತಿವೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ ಕುಂದ್ರಾರ ಮುಂದಿನ ಭವಿಷ್ಯ ಕುತೂಹಲ ಮೂಡಿಸಿದೆ.
ಇದನ್ನೂ ಓದಿ:
Raj Kundra: ಆ ಒಂದು ‘ಬಂಗಲೆ’ಯಿಂದಾಗಿ ರಾಜ್ ಕುಂದ್ರಾ ಸಿಕ್ಕಿ ಹಾಕಿಕೊಂಡರಾ? ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ
‘ವಿಕ್ರಾಂತ್ ರೋಣ’ ಚಿತ್ರದ ನಟಿ ಜಾಕ್ವೆಲಿನ್ ಹಾಟ್ ಫೋಟೋ ವೈರಲ್
ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಭರ್ಜರಿ ಡಾನ್ಸ್!
(Jail or Bail- today court will decide Raj Kundra’s Future)
Published On - 12:18 pm, Fri, 23 July 21