ಜಿಯಾ ಖಾನ್​ ಕೇಸ್​ನಲ್ಲಿ ಸೂರಜ್​​​ ಪಾಂಚೋಲಿ ನಿರಪರಾಧಿ; ಮಹತ್ವದ ತೀರ್ಪು ನೀಡಿದ ನ್ಯಾಯಾಲಯ

|

Updated on: Apr 28, 2023 | 1:04 PM

Jiah Khan Case Verdict: ಜಿಯಾ ಖಾನ್​ ಮತ್ತು ಸೂರಜ್​ ಪಾಂಚೋಲಿ ಅವರು ರಿಲೇಶನ್​ಶಿಪ್​ನಲ್ಲಿ ಇದ್ದರು. 2013ರ ಜೂನ್​ 3ರಂದು ಜಿಯಾ ಖಾನ್​ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು.

ಜಿಯಾ ಖಾನ್​ ಕೇಸ್​ನಲ್ಲಿ ಸೂರಜ್​​​ ಪಾಂಚೋಲಿ ನಿರಪರಾಧಿ; ಮಹತ್ವದ ತೀರ್ಪು ನೀಡಿದ ನ್ಯಾಯಾಲಯ
ಸೂರಜ್ ಪಾಂಚೋಲಿ, ಜಿಯಾ ಖಾನ್
Follow us on

ನಟಿ ಜಿಯಾ ಖಾನ್​ ಸಾವಿನ (Jiah Khan Death Case) ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿದ್ದ ಸೂರಜ್​ ಪಾಂಚೋಲಿ ಅವರು ನಿರಪರಾಧಿ ಎಂಬುದು ಸಾಬೀತಾಗಿದೆ. ನಟಿಯ ಸಾವಿನ ಕೇಸ್​ನಲ್ಲಿ ಬರೋಬ್ಬರಿ 10 ವರ್ಷಗಳ ಬಳಿಕ ಸಿಬಿಐ ವಿಶೇಷ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ. ಜಿಯಾ ಖಾನ್​ ಮತ್ತು ಸೂರಜ್​ ಪಾಂಚೋಲಿ (Sooraj Pancholi) ಅವರು ರಿಲೇಶನ್​ಶಿಪ್​ನಲ್ಲಿ ಇದ್ದರು. 2013ರ ಜೂನ್​ 3ರಂದು ಜಿಯಾ ಖಾನ್​ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಬಳಿಕ ಸೂರಜ್​ ಪಾಂಚೋಲಿ ವಿರುದ್ಧ ಕೇಸ್​ ದಾಖಲಾಗಿತ್ತು. ಪೊಲೀಸರಿಗೆ ಜಿಯಾ ಖಾನ್​ ಮನೆಯಲ್ಲಿ ಡೆತ್​ ನೋಟ್​ ಕೂಡ ಪತ್ತೆ ಆಗಿತ್ತು. ಸೂರಜ್​ ಪಾಂಚೋಲಿ ಜೊತೆಗಿನ ಸಂಬಂಧದಿಂದ ತಾವು ಅನುಭವಿಸಿದ ಕಷ್ಟಗಳನ್ನು ಅವರು ಡೆತ್​ ನೋಟ್​ನಲ್ಲಿ ಎಳೆಎಳೆಯಾಗಿ ವಿವರಿಸಿದ್ದರು. ಆದರೆ ಅಂತಿಮ ವಿಚಾರಣೆಯಲ್ಲಿ ಸೂರಜ್​ ಪಾಂಚೋಲಿ ನಿರಪರಾಧಿ ಎಂದು ತೀರ್ಪು ಬಂದಿದೆ.

ಜಿಯಾ ಖಾನ್ ಕೇಸ್​ ಹಿನ್ನಲೆ:

ಅದು 2013ರ ಸಮಯ. ಜಿಯಾ ಖಾನ್​ ಅವರು ಆಗತಾನೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಆರಂಭಿಸಿದ್ದರು. ‘ನಿಶಬ್ದ್​’ ಚಿತ್ರದಲ್ಲಿನ ನಟನೆಗೆ ಅವರಿಗೆ ಫಿಲ್ಮ್​ಫೇರ್​ ಪ್ರಶಸ್ತಿ ಸಿಕ್ಕಿತ್ತು. ‘ಘಜಿನಿ’, ‘ಹೌಸ್​ಫುಲ್​’ ಸಿನಿಮಾಗಳಲ್ಲೂ ನಟಿಸಿ ಅವರು ಗಮನ ಸೆಳೆದಿದ್ದರು. ಚಿತ್ರರಂಗದಲ್ಲಿ ಬಾಳಿ ಬದುಕಬೇಕಾಗಿದ್ದ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ ಆಗಿದ್ದು ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ತೀವ್ರ ಆಘಾತ ಉಂಟು ಮಾಡಿತ್ತು.

ಜಿಯಾ ಖಾನ್​ ಅವರದ್ದು ಆತ್ಮಹತ್ಯೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂತು. ಆದರೆ ಅವರ ಕುಟುಂಬದವರು ಈ ವಾದವನ್ನು ಒಪ್ಪಲಿಲ್ಲ. ನಟ ಸೂರಜ್​ ಪಾಂಚೋಲಿ ಜೊತೆಗೆ ಜಿಯಾ ಖಾನ್​ ಅವರಿಗೆ ಪ್ರೀತಿ ಚಿಗುರಿತ್ತು. ಆದರೆ ಈ ರಿಲೇಶನ್​ಶಿಪ್​ನಲ್ಲಿ ಜಿಯಾ ಖಾನ್​ ತೀವ್ರ ನೋವು ಅನುಭವಿಸಿದ್ದರು ಹಾಗೂ ಅವರ ಸಾವಿಗೆ ಸೂರಜ್​ ಪಾಂಚೋಲಿ ಕಾರಣ ಎಂಬುದು ಜಿಯಾ ಖಾನ್​ ತಾಯಿ ಆರೋಪ ಮಾಡಿದ್ದರು.

ಇದನ್ನೂ ಓದಿ: Jiah Khan: ನಟಿ ಜಿಯಾ ಖಾನ್​ ನಿಧನವಾದ ದಿನದಿಂದ ಇಲ್ಲಿಯವರೆಗೆ ಏನೆಲ್ಲಾ ಆಯ್ತು? ಇಲ್ಲಿದೆ ಪೂರ್ತಿ ವಿವರ

2015ರ ಜೂನ್​ ತಿಂಗಳಲ್ಲಿ ಸೂರಜ್​ ಪಾಂಚೋಲಿ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದರು. ಬಳಿಕ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಲ್ಲಿ ಅವರ ವಿರುದ್ಧ ಸಪ್ಲಿಮೆಂಟರಿ ಚಾರ್ಜ್​ಶೀಟ್​ ದಾಖಲಿಸಲಾಯಿತು. ಆದರೆ ತನಿಖೆ ಬಳಿಕ ಜಿಯಾ ಖಾನ್​ ಅವರ ಕೊಲೆ ನಡೆದಿರುವ ಸಾಧ್ಯತೆ ಕಡಿಮೆ ಇದೆ ಹಾಗೂ ಇದು ಆತ್ಮಹತ್ಯೆ ಎಂದು 2016ರಲ್ಲಿ ಸಿಬಿಐ ಹೇಳಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:42 pm, Fri, 28 April 23