ನಟಿ ಕಂಗನಾ ರಣಾವತ್ (Kangana Ranaut) ಅವರದ್ದು ಡಿಫರೆಂಟ್ ವ್ಯಕ್ತಿತ್ವ. ಬಾಲಿವುಡ್ನ ಇತರೆ ಹೀರೋಯಿನ್ಗಳ ರೀತಿ ಕೇವಲ ಹೀರೋ ಜೊತೆ ಮರ ಸುತ್ತುವ ಪಾತ್ರಕ್ಕೆ ಅವರು ಸೀಮಿತವಾಗಿಲ್ಲ. ಸೋಲು-ಗೆಲುವು ಏನೇ ಇದ್ದರೂ ತಮಗೆ ಅನಿಸಿದ್ದನ್ನೇ ದಿಟ್ಟತನದಿಂದ ಮಾಡುವುದು ಕಂಗನಾ ರಣಾವತ್ ಸ್ವಭಾವ. ಈಗ ಅವರು ‘ಎಮರ್ಜೆನ್ಸಿ’ ಸಿನಿಮಾ (Emergency Movie) ಮಾಡುತ್ತಿದ್ದಾರೆ. ಈ ಚಿತ್ರದ ಮೇಲೆ ಅವರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮುಖ್ಯ ಪಾತ್ರ ನಿಭಾಯಿಸುವುದರ ಜೊತೆಗೆ ನಿರ್ದೇಶನ ಮತ್ತು ನಿರ್ಮಾಣದ ಹೊಣೆಯನ್ನೂ ಅವರು ಹೊತ್ತುಕೊಂಡಿದ್ದಾರೆ. ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ (Indira Gandhi) ಕುರಿತು ‘ಎಮರ್ಜೆನ್ಸಿ’ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರದ ಶೂಟಿಂಗ್ ಪೂರ್ಣಗೊಳಿಸಲು ಕಂಗನಾ ರಣಾವತ್ ಅವರು ತಮ್ಮ ಆಸ್ತಿ ಅಡವಿಟ್ಟಿದ್ದಾರೆ!
ಕಂಗನಾ ರಣಾವತ್ ನಟಿಸಿದ್ದ ‘ಧಾಕಡ್’ ಸಿನಿಮಾ ಕಳೆದ ವರ್ಷ ಹೀನಾಯವಾಗಿ ಸೋತಿತು. ಆದರೂ ಅವರು ಧೃತಿಗೆಟ್ಟಿಲ್ಲ. ‘ಎಮರ್ಜೆನ್ಸಿ’ ಸಿನಿಮಾದ ಮೇಲೆ ಸಂಪೂರ್ಣ ನಂಬಿಕೆ ಇಟ್ಟು ಕೆಲಸ ಮುಂದುವರಿಸಿದ್ದಾರೆ. ಈ ಸಿನಿಮಾವನ್ನು ನಿರ್ಮಾಣ ಮಾಡುವಲ್ಲಿ ಅವರು ಸಾಕಷ್ಟು ಕಷ್ಟಪಡುತ್ತಿದ್ದಾರೆ. ಇರುವ ಆಸ್ತಿಯನ್ನೆಲ್ಲ ಅಡಿವಿಟ್ಟು, ಅದರಿಂದ ತಂದ ಸಾಲದಲ್ಲಿ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ.
ಇದನ್ನೂ ಓದಿ: ‘ಸಿನಿಮಾ ಅಂದ್ರೆ ಇದು’; ‘ಕಾಂತಾರ’ ನೋಡಿ ಹ್ಯಾಂಗೋವರ್ಗೆ ಹೋದ ನಟಿ ಕಂಗನಾ ರಣಾವತ್
‘ಎಮರ್ಜೆನ್ಸಿ’ ಚಿತ್ರದ ಚಿತ್ರೀಕರಣ ಮುಕ್ತಾಯವಾದ ಖುಷಿಯಲ್ಲಿ ಕಂಗನಾ ರಣಾವತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ. ಶೂಟಿಂಗ್ ವೇಳೆ ಡೆಂಗ್ಯೂ ಬಂದಿದ್ದರಿಂದ ತುಂಬ ಕಷ್ಟ ಆಗಿತ್ತು ಎಂಬುದನ್ನು ಕೂಡ ಅವರ ತಿಳಿಸಿದ್ದಾರೆ. ಎಷ್ಟೇ ಅಡೆತಡೆಗಳು ಬಂದರೂ ಕೂಡ ಅದನ್ನೆಲ್ಲ ಧೈರ್ಯವಾಗಿ ಎದುರಿಸಿ ಅವರು ಮುನ್ನುಗ್ಗುತ್ತಿದ್ದಾರೆ.
ಇದನ್ನೂ ಓದಿ: Kangana Ranaut: ಕಂಗನಾ ರಣಾವತ್ ಬಿಜೆಪಿ ಸೇರ್ಪಡೆ ಆಗ್ತಾರಾ? ರಾಜಕೀಯದ ಆಸಕ್ತಿ ಬಗ್ಗೆ ಬಾಯ್ಬಿಟ್ಟ ನಟಿ
ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿ ಕುರಿತು ‘ಎಮರ್ಜೆನ್ಸಿ’ ಸಿನಿಮಾ ತಯಾರಾಗುತ್ತಿದೆ. ಕೆಲವು ತಿಂಗಳ ಹಿಂದೆ ಈ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಆಗಿತ್ತು. ಅದರಲ್ಲಿ ಕಂಗನಾ ರಣಾವತ್ ಅವರ ಲುಕ್ ನೋಡಿ ಎಲ್ಲರಿಗೂ ಅಚ್ಚರಿ ಆಗಿತ್ತು. ಪಕ್ಕಾ ಇಂದಿರಾ ಗಾಂಧಿ ರೀತಿ ಕಾಣುವಂತೆ ಕಂಗನಾಗೆ ಮೇಕಪ್ ಮಾಡಲಾಗಿದೆ. ಆದಷ್ಟು ಬೇಗ ಈ ಚಿತ್ರ ಬಿಡುಗಡೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
‘ಎಮರ್ಜೆನ್ಸಿ’ ಚಿತ್ರಕ್ಕೆ ಶೂಟಿಂಗ್ ಮುಗಿದಿದೆ ಎಂಬುದನ್ನು ಅಭಿಮಾನಿಗಳಿಗೆ ತಿಳಿಸಲು ಕೆಲವು ಮೇಕಿಂಗ್ ಸ್ಟಿಲ್ಗಳನ್ನು ಕಂಗನಾ ರಣಾವತ್ ಅವರು ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಶ್ರೇಯಸ್ ತಲ್ಪಡೆ, ಅನುಪಮ್ ಖೇರ್, ಮಿಲಿಂದ್ ಸೋಮನ್, ಸತೀಶ್ ಕೌಶಿಕ್, ಮಹಿಮಾ ಚೌಧರಿ ಮುಂತಾದವರು ನಟಿಸುತ್ತಿದ್ದಾರೆ. 1975ರ ಕಾಲಘಟದ ನೈಜ ಘಟನೆಗಳನ್ನು ಆಧರಿಸಿ ‘ಎಮರ್ಜೆನ್ಸಿ’ ಚಿತ್ರ ಮೂಡಿಬರುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:10 pm, Sat, 21 January 23