ಕಂಗನಾ ತಾಯಿ ಈಗೇನು ಮಾಡುತ್ತಿದ್ದಾರೆ? ಮಗಳ ಯಶಸ್ಸಿನಿಂದ ಬೀಗದ ಆಶಾ ಇನ್ನೂ ಹಳ್ಳಿಯಲ್ಲೇ ಇದ್ದಾರೆ

ಆಶಾ ಅವರು ಕಳೆದ 25 ವರ್ಷಗಳಿಂದ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಮಗಳ ಯಶಸ್ಸನ್ನು ಕಂಡು ಅವರು ಎಂದಿಗೂ ಬೀಗಿಲ್ಲ.

ಕಂಗನಾ ತಾಯಿ ಈಗೇನು ಮಾಡುತ್ತಿದ್ದಾರೆ? ಮಗಳ ಯಶಸ್ಸಿನಿಂದ ಬೀಗದ ಆಶಾ ಇನ್ನೂ ಹಳ್ಳಿಯಲ್ಲೇ ಇದ್ದಾರೆ

Updated on: Feb 28, 2023 | 9:36 AM

ನಟಿ ಕಂಗನಾ ರಣಾವತ್ (Kangana Ranaut) ಅವರು ಬಾಲಿವುಡ್​ನಲ್ಲಿ ಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಅವರು ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ನಿರ್ದೇಶನ, ನಿರ್ಮಾಣಕ್ಕೂ ಇಳಿದಿದ್ದಾರೆ. ಮರ ಸುತ್ತುವ ಪಾತ್ರದಿಂದ ದೂರವೇ ಇರುವ ಕಂಗನಾ, ಹಲವು ಪ್ರಯೋಗಾತ್ಮಕ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಬಯೋಪಿಕ್, ಆ್ಯಕ್ಷನ್ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಇಷ್ಟೆಲ್ಲ ಯಶಸ್ಸು ಪಡೆದರೂ ಅವರ ತಾಯಿ ಮಾತ್ರ ಹಳ್ಳಿಯಲ್ಲೇ ಇದ್ದಾರೆ. ಈ ಬಗ್ಗೆ ಕಂಗನಾ ಅವರು ಸರಣಿ ಟ್ವೀಟ್ ಮಾಡಿದ್ದಾರೆ. ಅವರ ತಾಯಿ ಆಶಾಗೆ (Kangana Ranaut Asha) ಈಗಲೂ ಹಳ್ಳಿಯ ಜೀವನ, ಕೃಷಿಯೇ ಇಷ್ಟವಂತೆ.

ಆಶಾ ಅವರು ಕಳೆದ 25 ವರ್ಷಗಳಿಂದ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಮಗಳ ಯಶಸ್ಸನ್ನು ಕಂಡು ಅವರು ಎಂದಿಗೂ ಬೀಗಿಲ್ಲ. ‘ನನ್ನ ತಾಯಿ ಶ್ರೀಮಂತೆ ಅಲ್ಲ. ನಾನು ರಾಜಕೀಯ, ಬಿಸ್ನೆಸ್ ಹಿನ್ನೆಲೆ ಇಂದ ಬಂದವನು. ನನ್ನ ತಾಯಿ ಕಳೆದ 25 ವರ್ಷಗಳಿಂದ ಶಿಕ್ಷಕಿ ಆಗಿದ್ದಾರೆ. ನನಗೆ ಇಷ್ಟೊಂದು ಆ್ಯಟಿಟ್ಯೂಡ್ ಎಲ್ಲಿಂದ ಬಂದಿದೆ, ನಾನೇಕೆ ಮದುವೆಗಳಲ್ಲಿ ಡ್ಯಾನ್ಸ್ ಮಾಡುವುದಿಲ್ಲ ಎಂಬುದನ್ನು ಫಿಲ್ಮ್ ಮಾಫಿಯಾ ಅರಿತುಕೊಳ್ಳಬೇಕು’ ಎಂದು ಕಂಗನಾ ಹೇಳಿದ್ದಾರೆ.

‘ನನ್ನ ತಾಯಿ ಏಳು ಗಂಟೆ ಕೃಷಿ ಮಾಡುತ್ತಾರೆ. ಯಾರಾದರೂ ಕಂಗನಾ ತಾಯಿ ಎಂದು ಭೇಟಿ ಮಾಡಲು ಬಂದರೆ ಅವರಿಗೆ ಚಹ ಹಾಗೂ ಸ್ನಾಕ್ಸ್ ಕೊಡುತ್ತಾರೆ. ‘ಕಂಗನಾ ತಾಯಿ ಇವರೇನಾ?’ ಎಂದು ಬಂದವರಿಗೆ ಶಾಕ್ ಆಗುತ್ತದೆ. ನೀವು ಏಕೆ ಚಹ ಮಾಡಿ ಕೊಡಬೇಕು ಎಂದು ನನ್ನ ತಾಯಿಗೆ ಒಮ್ಮೆ ಕೇಳಿದ್ದೆ. ನಿನ್ನನ್ನು ಪ್ರೀತಿ ಮಾಡುವವರ ಸೇವೆ ಮಾಡುವುದು ನನಗೆ ಸಿಕ್ಕ ಅದೃಷ್ಟ ಎಂದು ಹೇಳಿದ್ದರು’ ಎಂಬುದಾಗಿ ಕಂಗನಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ
Kangana Ranaut: ಉಗ್ರರಿಂದ ಹತ್ಯೆಯಾದ ಕಾಶ್ಮೀರಿ ಹುಡುಗಿ ಪಾತ್ರದಲ್ಲಿ ಕಂಗನಾ? ಸೆನ್ಸೇಷನ್​ ಸೃಷ್ಟಿಸಿದೆ ಹೊಸ ಸಿನಿಮಾ ಸುದ್ದಿ
Emergency: ‘ಇಂದಿರಾ ಗಾಂಧಿ ಈ ವಿಡಿಯೋದಲ್ಲಿ ಕಂಗನಾ ರೀತಿ ಮಾಡ್ತಿದ್ದಾರೆ’: ರಾಮ್​ ಗೋಪಾಲ್​ ವರ್ಮಾ
Emergency: ಇದು ಇಂದಿರಾ ಗಾಂಧಿ ಅಲ್ಲ, ಕಂಗನಾ ರಣಾವತ್! ಗಮನ ಸೆಳೆದ ‘ಎಮರ್ಜೆನ್ಸಿ’ ಫಸ್ಟ್​ ಲುಕ್​
Kangana Ranaut: ‘ಶಿವಸೇನೆ ಹನುಮಾನ್​ ಚಾಲೀಸ ಬ್ಯಾನ್​ ಮಾಡಿದ್ರೆ ಅವರನ್ನು ಶಿವ ಕೂಡ ಕಾಪಾಡಲ್ಲ’: ಕಂಗನಾ ರಣಾವತ್​

‘ನನ್ನ ತಾಯಿಗೆ ಮುಂಬೈ ಎಂದರೆ ಇಷ್ಟವಿಲ್ಲ. ವಿದೇಶಕ್ಕೆ ಹೋಗೋಕೆ ಅವರಿಗೆ ಮನಸ್ಸಿಲ್ಲ. ನಾವು ಒತ್ತಾಯ ಮಾಡಿದರೆ ಬೈಗುಳ ಪಡೆಯಬೇಕು. ಅವರಿಗೆ ಮನೆ ಊಟ ಎಂದರೆ ಇಷ್ಟ’ ಎಂದು ಕಂಗನಾ ಟ್ವಿಟರ್​ನಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ: Javed Akhtar: ‘ಕಂಗನಾ ರಣಾವತ್​ ಮುಖ್ಯವೇ ಅಲ್ಲ’: ನೇರವಾಗಿ ಟೀಕೆ ಮಾಡಿದ ಜಾವೇದ್​ ಅಖ್ತರ್​

ಕಂಗನಾ ಅವರು ‘ಎಮರ್ಜೆನ್ಸಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರ ನಿರ್ಮಾಣಕ್ಕಾಗಿ ಕಂಗನಾ ಇಷ್ಟು ವರ್ಷ ದುಡಿದ ಹಣವನ್ನೆಲ್ಲ ಹೂಡಿಕೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 9:23 am, Tue, 28 February 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us