Kangana Ranaut: ಕಂಗನಾ ರಣಾವತ್​ರ ಭದ್ರತಾ ಸಿಬ್ಬಂದಿ ಜೊತೆ ನಟಿ ಸೋಫಿ ಚೌಧರಿ ವಾಗ್ವಾದ

ನಟಿ ಸೋಫಿ ಚೌಧರಿ, ಕಂಗನಾ ರಣಾವತ್​ರ ಭದ್ರತಾ ಸಿಬ್ಬಂದಿಯೊಬ್ಬರ ಜೊತೆಗೆ ವಾಗ್ವಾದ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದ್ದು.  ಕಂಗನಾರ ಭದ್ರತಾ ಸಿಬ್ಬಂದಿಯನ್ನು ಅಪಾರ್ಟ್​ಮೆಂಟ್​ನಿಂದ ಹೊರಗೆ ಹೋಗುವಂತೆ ಸೋಫಿ ಸೂಚಿಸಿದ್ದಾರೆ.

Kangana Ranaut: ಕಂಗನಾ ರಣಾವತ್​ರ ಭದ್ರತಾ ಸಿಬ್ಬಂದಿ ಜೊತೆ ನಟಿ ಸೋಫಿ ಚೌಧರಿ ವಾಗ್ವಾದ
ಕಂಗನಾ ರಣಾವತ್-ಸೋಫಿ ಚೌಧರಿ
Follow us
ಮಂಜುನಾಥ ಸಿ.
|

Updated on: Feb 27, 2023 | 3:04 PM

ನಟಿ ಕಂಗನಾ ರಣಾವತ್ (Kangana Ranaut) ನಟನೆ ಜೊತೆಗೆ ಕಟು ಮಾತುಗಳಿಗೂ ಪ್ರಖ್ಯಾತರು. ಬಿಜೆಪಿಯೇತರ ರಾಜಕಾರಣಿಗಳು, ಬಾಲಿವುಡ್​ನ ಕೆಲವು ಸೆಲೆಬ್ರಿಟಿಗಳ ಮೇಲೆ ಸರಣಿ ಆರೋಪಗಳನ್ನು ಮಾಡಿ ವಿವಾದಕ್ಕೆ ಸಿಲುಕಿದ ಬಳಿಕ ನಟಿಗೆ ಗೃಹ ಇಲಾಖೆಯು ಭದ್ರತೆ ಹೆಚ್ಚಿಸಿತ್ತು. ಆದರೆ ಈಗ ನಟಿಯೊಬ್ಬರು ಕಂಗನಾ ರಣಾವತ್​ರ ಭದ್ರತಾ ಸಿಬ್ಬಂದಿ ಜೊತೆ ಜಗಳವಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

ನಟಿ, ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್ ಸೋಫಿ ಚೌಧರಿ (Sophie Choudry), ಕಂಗನಾ ರಣಾವತ್​ರ ಭದ್ರತಾ ಸಿಬ್ಬಂದಿಯೊಬ್ಬರ ಜೊತೆಗೆ ವಾಗ್ವಾದ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದ್ದು.  ಕಂಗನಾರ ಭದ್ರತಾ ಸಿಬ್ಬಂದಿಯನ್ನು ಅಪಾರ್ಟ್​ಮೆಂಟ್​ನಿಂದ ಹೊರಗೆ ಹೋಗುವಂತೆ ಸೋಫಿ ಸೂಚಿಸಿದ್ದಾರೆ.

ಕಂಗನಾ ರಣಾವತ್ ಡ್ಯಾನ್ಸ್ ಕ್ಲಾಸ್​ಗೆ ಸೇರಿಕೊಂಡಿದ್ದು, ಆ ಡ್ಯಾನ್ಸ್ ಕ್ಲಾಸ್ ಮುಂಬೈನ ಐಶಾರಾಮಿ ಅಪಾರ್ಟ್​ಮೆಂಟ್ ಒಳಗೆ ಇದೆ. ಡ್ಯಾನ್ಸ್ ಕ್ಲಾಸ್ ಇರುವ ಅದೇ ಅಪಾರ್ಟ್​ಮೆಂಟ್​ನಲ್ಲಿ ನಟಿ ಸೋಫಿ ವಾಸಿಸುತ್ತಿದ್ದಾರೆ. ನಟಿ ಮಲೈಕಾ ಅರೋರಾ ಸಹ ಅದೇ ಅಪಾರ್ಟ್​ಮೆಂಟ್​ನ ವಾಸಿಯಾಗಿದ್ದಾರೆ.

ಇಂದು (ಫೆಬ್ರವರಿ 27) ಎಂದಿನಂತೆ ನಟಿ ಕಂಗನಾ ನೃತ್ಯ ತರಬೇತಿಗೆ ಡ್ಯಾನ್ಸ್ ಕ್ಲಾಸ್​ಗೆ ಹೋದಾಗ ಅವರ ಭದ್ರತಾ ಸಿಬ್ಬಂದಿ ಹೊರಗೆ ಅಪಾರ್ಟ್​ಮೆಂಟ್​ನ ಲಾಬಿ ಏರಿಯಾದಲ್ಲಿ ನಿಂತಿದ್ದರು. ಆಗ ಅಲ್ಲಿಗೆ ಬಂದ ನಟಿ ಸೋಫಿ ಚೌಧರಿ, ”ನೀವು ಒಂದೋ ಬಿಲ್ಡಿಂಗ್​ನ ಹೊರಗೆ ನಿಲ್ಲಿ ಅಥವಾ ನಿಮಗೆ ಕಂಗನಾರನ್ನು ಫಾಲೋ ಮಾಡಲೇ ಬೇಕು ಎಂದಾದರೆ ನೀವು ಸಹ ಡ್ಯಾನ್ಸ್ ಕ್ಲಾಸ್​ ಒಳಗೆ ಹೋಗಿ” ಎಂದಿದ್ದಾರೆ.

ಅದಕ್ಕೆ ಉತ್ತರಿಸಿರುವ ಕಂಗನಾ ಭದ್ರತೆಗೆ ನಿಯೋಜಿಸಲಾಗಿರುವ ಸಿಆರ್​ಪಿಎಫ್ ಯೋಧ, ”ನಾವು ಅಪಾರ್ಟ್​ಮೆಂಟ್ ಒಳಗೆ ಹೋಗಲು ಅನುಮತಿ ಕೇಳಿದ್ದೇವೆ. ಅನುಮತಿ ಬಂದ ಬಳಿಕ ನಾವು ಒಳಗೆ ಹೋಗುತ್ತೇವೆ” ಎಂದಿದ್ದಾರೆ. ಅದಕ್ಕೆ ಸೋಫಿ, ”ಸರಿ ನಾನು ಈ ವಿಷಯವಾಗಿ ಕಂಗನಾ ಬಳಿ ಮಾತನಾಡುತ್ತೇನೆ” ಎಂದಿದ್ದಾರೆ. ಆಗ ಆ ಯೋಧ, ”ಬೇಡ, ನೀವು ಅವರೊಟ್ಟಿಗೆ ಮಾತನಾಡುವ ಅವಶ್ಯಕತೆ ಏನೂ ಇಲ್ಲ” ಎಂದಿದ್ದಾರೆ.

ನಟಿ ಕಂಗನಾ ರಣಾವತ್​ಗೆ ವೈ ಪ್ಲಸ್ ಭದ್ರತೆ ಒದಗಿಸಲಾಗಿದ್ದು, ಕೆಲವು ಸಿಆರ್​ಪಿಎಫ್ ಯೋಧರನ್ನು ಕಂಗನಾರ ಭದ್ರತೆಗೆ ನಿಯೋಜಿಸಲಾಗಿದೆ. ಕಂಗನಾ ಹೋದಲ್ಲೆಲ್ಲ ಭದ್ರತಾ ಸಿಬ್ಬಂದಿ ಅವರ ಹಿಂದಿರುತ್ತಾರೆ. ಮಹರಾಷ್ಟ್ರ ಸರ್ಕಾರವನ್ನು, ಸಿಎಂ, ಸಚಿವರನ್ನು ಹಿಗ್ಗಾ ಮುಗ್ಗ ಟೀಕಿಸಿ ಶಿವಸೇನಾ ಕಾರ್ಯಕರ್ತರನ್ನು ಎದುರು ಹಾಕಿಕೊಂಡಿದ್ದ ಕಂಗನಾಗೆ ಕೇಂದ್ರ ಗೃಹ ಇಲಾಖೆ ಭದ್ರತೆ ಹೆಚ್ಚಿಸಿತ್ತು.

ಸಿನಿಮಾ ವಿಷಯಕ್ಕೆ ಮರಳುವುದಾದರೆ ಕಂಗನಾ ರಣಾವತ್, ತುರ್ತು ಪರಿಸ್ಥಿತಿ ಆಧರಿಸಿದ ‘ಎಮರ್ಜೆನ್ಸಿ ‘ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ನಿರ್ಮಾಣವೂ ಅವರದ್ದೇ. ಅದರ ಹೊರತಾಗಿ ನವಾಜುದ್ದೀನ್ ಸಿದ್ಧಿಕಿ ಜೊತೆಗೆ ‘ಟೀಕು ವೆಡ್ಸ್ ಶೇರು’, ‘ಸೀತಾ’ ಹಾಗೂ ‘ತೇಜಸ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ