‘ಪಠಾಣ್​’ ಚಿತ್ರದಿಂದ ನಿರ್ಮಾಪಕರಿಗೆ ಆದ ಲಾಭ ಇಷ್ಟೊಂದಾ? ಇಲ್ಲಿದೆ ಲೆಕ್ಕಾಚಾರ

Pathaan Movie Collection: ಜನವರಿ 25ರಂದು ‘ಪಠಾಣ್​’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ಮೊದಲ ವೀಕೆಂಡ್​ನಲ್ಲಿ ಅಬ್ಬರದ ಕಲೆಕ್ಷನ್ ಮಾಡಿತು. ಭಾರತದಲ್ಲಿ ಈ ಚಿತ್ರ 500+ ಕೋಟಿ ರೂಪಾಯಿ ಕಮಾಯಿ ಮಾಡಿದೆ.

‘ಪಠಾಣ್​’ ಚಿತ್ರದಿಂದ ನಿರ್ಮಾಪಕರಿಗೆ ಆದ ಲಾಭ ಇಷ್ಟೊಂದಾ? ಇಲ್ಲಿದೆ ಲೆಕ್ಕಾಚಾರ
ಶಾರುಖ್​, ಜಾನ್ ಅಬ್ರಹಾಂ- ಆದಿತ್ಯ ಚೋಪ್ರಾ
Follow us
ರಾಜೇಶ್ ದುಗ್ಗುಮನೆ
|

Updated on: Feb 27, 2023 | 7:58 AM

‘ಪಠಾಣ್​’ ಸಿನಿಮಾ (Pathaan Movie) ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುತ್ತಿದೆ. ಈ ಸಿನಿಮಾ ರಿಲೀಸ್ ಆಗಿ ಒಂದು ತಿಂಗಳು ಕಳೆದರೂ ಬಾಕ್ಸ್ ಆಫೀಸ್​ನಲ್ಲಿ ಚಿತ್ರದ ಗಳಿಕೆ ಮುಂದುವರಿದಿದೆ. ಹಲವು ವರ್ಷಗಳಿಂದ ಸೋಲನ್ನೇ ಕಾಣುತ್ತಾ ಸೊರಗಿದ್ದ ಶಾರುಖ್ ಖಾನ್ (Shah Rukh Khan) ಅವರು ಗೆದ್ದು ಬೀಗಿದ್ದಾರೆ. ವಿಶ್ವ ಬಾಕ್ಸ್ ಆಫೀಸ್​ನಲ್ಲಿ 1000 ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡಿದ ಈ ಚಿತ್ರದಿಂದ ಯಶ್ ರಾಜ್ ಫಿಲ್ಮ್ಸ್​​ನ ಮಾಲೀಕ ಆದಿತ್ಯ ಚೋಪ್ರಾಗೆ ದೊಡ್ಡ ಲಾಭ ಆಗಿದೆ. ಹಾಗಾದರೆ, ಈ ಸಿನಿಮಾದ ಗಳಿಕೆಯಿಂದ ಆದ ಲಾಭ ಎಷ್ಟು ಎನ್ನುವ ಬಗ್ಗೆ ಇಲ್ಲಿದೆ ವಿವರ.

ಪಠಾಣ್ ಗಳಿಕೆ

ಜನವರಿ 25ರಂದು ‘ಪಠಾಣ್​’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ಮೊದಲ ವೀಕೆಂಡ್​ನಲ್ಲಿ ಅಬ್ಬರದ ಕಲೆಕ್ಷನ್ ಮಾಡಿತು. ಈ ಚಿತ್ರ ಹಿಂದಿ ಬಾಕ್ಸ್ ಆಫೀಸ್​ನಲ್ಲಿ ಯಶ್ ನಟನೆಯ ‘ಕೆಜಿಎಫ್ 2’ ಮಾಡಿದ ದಾಖಲೆಗಳನ್ನು ಮುರಿದು ಹಾಕಿತು. ಭಾರತದಲ್ಲಿ ಈ ಚಿತ್ರ 500+ ಕೋಟಿ ರೂಪಾಯಿ ಕಮಾಯಿ ಮಾಡಿದೆ. ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಚಿತ್ರದ ಗಳಿಕೆ 1000 ಕೋಟಿ ರೂಪಾಯಿ ದಾಟಿದೆ.

ಲಾಭ ಎಷ್ಟು?

‘ಪಠಾಣ್​’ ಚಿತ್ರದಿಂದ ಆದಿತ್ಯ ಚೋಪ್ರಾಗೆ 662 ಕೋಟಿ ರೂಪಾಯಿ ಲಾಭ ಆಗಿದೆ ಎಂದು ವರದಿ ಆಗಿದೆ. ಬಾಲಿವುಡ್ ಇತಿಹಾಸದಲ್ಲಿ ಇಷ್ಟು ದೊಡ್ಡ ಮೊತ್ತದ ಲಾಭ ಕಂಡ ಏಕೈಕ ನಿರ್ಮಾಪಕ ಎಂಬ ಹೆಗ್ಗಳಿಕೆಗೆ ಆದಿತ್ಯ ಚೋಪ್ರಾ ಪಾತ್ರರಾಗಿದ್ದಾರೆ. ಈ ಮೊದಲು ‘ದಂಗಲ್​’ ಚಿತ್ರದಿಂದ ನಿರ್ಮಾಪಕ ಆಮಿರ್ ಖಾನ್​ಗೆ 600 ಕೋಟಿ ರೂಪಾಯಿ ಲಾಭ ಆಗಿತ್ತು.

ಇದನ್ನೂ ಓದಿ: ಬಾಲಿವುಡ್​ಗೆ ಜೀವ ತುಂಬಲಿದೆಯೇ ಪಠಾಣ್ ಗೆಲುವು? 1000 ಕೋಟಿ ಕಲೆಕ್ಷನ್, ಎಲ್ಲೆಲ್ಲಿ, ಎಷ್ಟೆಷ್ಟು?

ಎಲ್ಲಿಂದ ಎಷ್ಟೆಷ್ಟು?

‘ಪಠಾಣ್​’ ಹಿಂದಿ ವರ್ಷನ್​ 500 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದರಲ್ಲಿ ನಿರ್ಮಾಪಕರಿಗೆ 255 ಕೋಟಿ ರೂಪಾಯಿ ಉಳಿದಿದೆ. ಡಬ್ ಆದ ವರ್ಷನ್​ನಿಂದ 9 ಕೋಟಿ ರೂಪಾಯಿ ಲಾಭ ಬಂದಿದೆ. ಮುಂದಿನ ದಿನಗಳಲ್ಲಿ ಭಾರತದ ಬಾಕ್ಸ್ ಆಫೀಸ್​ನಲ್ಲಿ ಈ ಚಿತ್ರ 5 ಕೋಟಿ ರೂಪಾಯಿ ಲಾಭ ಕಾಣಬಹುದು ಎಂದು ಅಂದಾಜಿಸಲಾಗಿದೆ. ಈ ಮೂಲಕ ಭಾರತದ ಬಾಕ್ಸ್ ಆಫೀಸ್​​ನಿಂದ 269 ಕೋಟಿ ರೂಪಾಯಿ ಲಾಭ ಕಂಡಂತಾಗಲಿದೆ. ವಿದೇಶಗಳಲ್ಲಿ ಸಿನಿಮಾದ ಒಟ್ಟಾರೆ ಕಲೆಕ್ಷನ್ 397 ಕೋಟಿ ರೂಪಾಯಿ ಆಗಲಿದೆ. ಇದರಲ್ಲಿ 168 ಕೋಟಿ ರೂಪಾಯಿ ಉಳಿಯಲಿದೆ. ಸೆಟಲೈಟ್, ಡಿಜಿಟಲ್ ಹಾಗೂ ಮ್ಯೂಸಿಕ್ ಹಕ್ಕುಗಳಿಂದ ಚಿತ್ರಕ್ಕೆ ಬಂದ ಹಣ 225 ಕೋಟಿ ರೂಪಾಯಿ. ಹೀಗಾಗಿ, ಚಿತ್ರದಿಂದ ಆದ ಒಟ್ಟಾರೆ ಲಾಭ 662 ಕೋಟಿ ರೂಪಾಯಿ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ