AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pathaan: ಬಾಲಿವುಡ್​ಗೆ ಜೀವ ತುಂಬಲಿದೆಯೇ ಪಠಾಣ್ ಗೆಲುವು? 1000 ಕೋಟಿ ಕಲೆಕ್ಷನ್, ಎಲ್ಲೆಲ್ಲಿ, ಎಷ್ಟೆಷ್ಟು?

ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ವಿಶ್ವದೆಲ್ಲೆಡೆ 1000 ಕೋಟಿ ಕಲೆಕ್ಷನ್ ಮಾಡಿದೆ. ಹಿಟ್ ಸಿನಿಮಾಗಳಲ್ಲಿದೆ ಬಸವಳಿದಿದ್ದ ಬಾಲಿವುಡ್​ಗೆ ಪಠಾಣ್ ಸಿನಿಮಾ ಹೊಸ ಜೀವ ತುಂಬಿದ್ದು, ಪಠಾಣ್ ಸಿನಿಮಾದ ಅದ್ಭುತ ಯಶಸ್ಸನ್ನು ಸ್ಪೂರ್ತಿಯಾಗಿಸಿಕೊಂಡು ಮುನ್ನುಗ್ಗುವ ಉತ್ಸಾಹದಲ್ಲಿದೆ ಬಾಲಿವುಡ್.

Pathaan: ಬಾಲಿವುಡ್​ಗೆ ಜೀವ ತುಂಬಲಿದೆಯೇ ಪಠಾಣ್ ಗೆಲುವು? 1000 ಕೋಟಿ ಕಲೆಕ್ಷನ್, ಎಲ್ಲೆಲ್ಲಿ, ಎಷ್ಟೆಷ್ಟು?
ಪಠಾಣ್ ಸಿನಿಮಾ
ಮಂಜುನಾಥ ಸಿ.
|

Updated on: Feb 25, 2023 | 12:32 PM

Share

ಶಾರುಖ್ ಖಾನ್ (Shah Rukh Khan) ನಟನೆಯ ಪಠಾಣ್ (Pathaan) ಸಿನಿಮಾ ವಿಶ್ವದೆಲ್ಲೆಡೆ 1000 ಕೋಟಿ ಕಲೆಕ್ಷನ್ ಮಾಡಿದೆ. ಹಿಟ್ ಸಿನಿಮಾಗಳಲ್ಲಿದೆ ಬಸವಳಿದಿದ್ದ ಬಾಲಿವುಡ್​ಗೆ (Bollywood) ಪಠಾಣ್ ಸಿನಿಮಾ ಹೊಸ ಜೀವ ತುಂಬಿದ್ದು, ಪಠಾಣ್ ಸಿನಿಮಾದ ಅದ್ಭುತ ಯಶಸ್ಸನ್ನು ಸ್ಪೂರ್ತಿಯಾಗಿಸಿಕೊಂಡು ಮುನ್ನುಗ್ಗುವ ಉತ್ಸಾಹದಲ್ಲಿದೆ ಬಾಲಿವುಡ್.

ಕೋವಿಡ್ ಬಳಿಕ ಸಾಲು-ಸಾಲು ಹಿಂದಿ ಸಿನಿಮಾಗಳು ಬಿಡುಗಡೆ ಆದವಾದರೂ ಅವುಗಳಲ್ಲಿ ಗಮನಾರ್ಹ ಹಿಟ್ ಎನಿಸಿಕೊಂಡಿದ್ದು 2021 ರಲ್ಲಿ ಬಿಡುಗಡೆ ಆದ ಅಕ್ಷಯ್ ಕುಮಾರ್ ನಟನೆಯ ಸೂರ್ಯವಂಶಿ ಹಾಗೂ 2022 ರ ಅಂತ್ಯದಲ್ಲಿ ಬಿಡುಗಡೆ ಆದ ರಣ್ಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರ ಮಾತ್ರವೇ. ಭೂಲ್ ಭುಲಯ್ಯ 2, ದೃಶ್ಯಂ 2 ಸಿನಿಮಾಗಳು ಹಿಟ್ ಆದವಾದರೂ ಬಾಲಿವುಡ್​ಗೆ ಬೇಕಿದ್ದ ಬೂಸ್ಟ್ ನೀಡುವಲ್ಲಿ ಅವು ಯಶಸ್ವಿಯಾಗಲಿಲ್ಲ. ಇದೀಗ ಪಠಾಣ್ ಸಿನಿಮಾದ ಭರ್ಜರಿ ಹಿಟ್ ಮೂಲಕ ಬಾಲಿವುಡ್​ಗೆ ಪುನರ್ಜೀವ ಬಂತಂತಾಗಿದೆ.

ಜನವರಿ 25 ರಂದು ಬಿಡುಗಡೆ ಆಗಿದ್ದ ಪಠಾಣ್ ಸಿನಿಮಾ ಕೇವಲ 27 ದಿನಗಳಲ್ಲಿ ವಿಶ್ವದೆಲ್ಲಡೆ 1000 ಕೋಟಿ ಕಲೆಕ್ಷನ್ ಮಾಡಿದೆ. ಭಾರತದಲ್ಲಿ 550 ಕೋಟಿಗೂ ಹೆಚ್ಚು ಗಳಿಕೆ ಕಂಡಿರುವ ಈ ಸಿನಿಮಾ ವಿದೇಶದಲ್ಲಿಯೂ ಭಾರಿ ಮೊತ್ತವನ್ನು ಕಲೆ ಹಾಕಿದೆ. ಪಠಾಣ್ ಸಿನಿಮಾದ ಹಿಂದಿ ಆವೃತ್ತಿಯೊಂದೇ 500 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಈ ಮೊದಲು ಈ ದಾಖಲೆ ಮಾಡಿದ್ದ ದಂಗಲ್ ಹಾಗೂ ಬಾಹುಬಲಿ 2 ಹಾಗೂ ಕೆಜಿಎಫ್ 2 ಸಿನಿಮಾಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಪಠಾಣ್ ಸಿನಿಮಾ ಭಾರತದಲ್ಲಿ 500 ಕೋಟಿ ಮಾರ್ಕ್ ಮುಟ್ಟಿದೆ.

ವಿದೇಶದಲ್ಲಿಯೂ ಪಠಾಣ್ ಸಿನಿಮಾ ಮ್ಯಾಜಿಕ್ ಮಾಡಿದ್ದು ಅಮೆರಿಕ ಒಂದರಲ್ಲಿಯೇ 384 ಕೋಟಿಗೂ ಹೆಚ್ಚು ಕಲೆಕ್ಷನ್ ಅನ್ನು ಸಿನಿಮಾ ಮಾಡಿದೆ. ಅಮೆರಿಕದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಸಿನಿಮಾ ಎಂಬ ಖ್ಯಾತಿಗೂ ಈ ಸಿನಿಮಾ ಪಾತ್ರವಾಗಿದೆ. ಹಾಲಿವುಡ್​ನ ಹಲವು ಸಿನಿಮಾಗಳಿಗಿಂತಲೂ ಹೆಚ್ಚು ಕಲೆಕ್ಷನ್ ಮಾಡಿರುವ ಪಠಾಣ್, ಆಸ್ಕರ್ ನಾಮಿನೇಟ್ ಆಗಿರುವ ಟಾರ್, ವಿಮೆನ್ ಟಾಕಿಂಗ್ ಸಿನಿಮಾಗಳ ಕಲೆಕ್ಷನ್ ಅನ್ನು ಹಿಂದಿಕ್ಕಿದೆ.

Pathaan: ಬಾಂಗ್ಲಾದೇಶದಲ್ಲಿ ರಿಲೀಸ್​ ಆಗಲಿದೆ ‘ಪಠಾಣ್​’; 8 ವರ್ಷಗಳ ಬಳಿಕ ಭಾರತದ ಸಿನಿಮಾ ಪ್ರದರ್ಶನಕ್ಕೆ ಅವಕಾಶ

1000 ಕೋಟಿ ಗಳಿಸುವ ಮೂಲಕ ಈ ಸಾಧನೆ ಮಾಡಿದ ಐದನೇ ಭಾರತೀಯ ಸಿನಿಮಾ ಹಾಗೂ ಎರಡನೇ ಹಿಂದಿ ಸಿನಿಮಾ ಎಂಬ ಖ್ಯಾತಿಗೆ ಪಠಾಣ್ ಪಾತ್ರವಾಗಿದೆ. 2016 ರಲ್ಲಿ ಬಿಡುಗಡೆ ಆಗಿದ್ದ ಆಮಿರ್ ಖಾನ್ ನಟನೆಯ ದಂಗಲ್, 2017 ರಲ್ಲಿ ಬಿಡುಗಡೆ ಆಗಿದ್ದ ಬಾಹುಬಲಿ 2, ಕನ್ನಡದ ಕೆಜಿಎಫ್ 2, ಆರ್​ಆರ್​ಆರ್​ ಸಿನಿಮಾಗಳು ಮಾತ್ರವೇ ಈ ವರೆಗೂ 1000 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದವು. ಇದೀಗ ಈ ಪಟ್ಟಿಗೆ ಶಾರುಖ್ ಖಾನ್​ರ ಪಠಾಣ್ ಸಹ ಸೇರಿಕೊಂಡಿದೆ.

ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿ ಶಾರುಖ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ನಟಿಸಿರುವ ಪಠಾಣ್ ಸಿನಿಮಾ ಸ್ಪೈ ಥ್ರಿಲ್ಲರ್ ಆಗಿದ್ದು, ಭರಪೂರ ಆಕ್ಷನ್ ಮೂಲಕ ಪ್ರೇಕ್ಷಕರನ್ನು ಸೆಳೆದಿದೆ. ಸಿನಿಮಾ ಬಿಡುಗಡೆಗೆ ಮುಂಚಿನಿಂದಲೂ ಬೇಷರಮ್ ರಂಗ್ ಹಾಡಿನಿಂದಾಗಿ ಕೆಲವು ಪ್ರತಿಭಟನೆಗಳನ್ನು, ವಿರೋಧಗಳನ್ನು ಎದುರಿಸಿತ್ತಾದರೂ ಅದೆಲ್ಲವನ್ನೂ ಮೀರಿ ದೊಡ್ಡ ಹಿಟ್ ಆಗುವಲ್ಲಿ ಯಶಸ್ವಿಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ