AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shah Rukh Khan: ಮೇಕಪ್ ಆರ್ಟಿಸ್ಟ್ ಹಂಚಿಕೊಂಡ ಫೋಟೋ ನೋಡಿ ಶಾರುಖ್ ಖಾನ್ ಫ್ಯಾನ್ಸ್ ಫಿದಾ; ಅಂಥದ್ದೇನಿದೆ?

ಪ್ರೀತಿಶೀಲ್ ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಭೂಮಿ ಪಡ್ನೇಕರ್, ಆಯುಷ್ಮಾನ್ ಖುರಾನಾ ಮೊದಲಾದವರ ಜತೆ ಅವರು ಕೆಲಸ ಮಾಡಿದ್ದಾರೆ. ಅವರು ಶಾರುಖ್ ಜೊತೆ ಇರುವ ಫೋಟೋ ಶೇರ್ ಮಾಡಿದ್ದಾರೆ.

Shah Rukh Khan: ಮೇಕಪ್ ಆರ್ಟಿಸ್ಟ್ ಹಂಚಿಕೊಂಡ ಫೋಟೋ ನೋಡಿ ಶಾರುಖ್ ಖಾನ್ ಫ್ಯಾನ್ಸ್ ಫಿದಾ; ಅಂಥದ್ದೇನಿದೆ?
ಶಾರುಖ್ ಖಾನ್ ಸಿಕ್ಸ್ ಪ್ಯಾಕ್ ಫೋಟೋ
ರಾಜೇಶ್ ದುಗ್ಗುಮನೆ
|

Updated on:Feb 21, 2023 | 10:10 AM

Share

ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್​’ ಸಿನಿಮಾ (Pathaan Movie) ಯಶಸ್ಸು ಕಂಡಿದೆ. ಈ ಚಿತ್ರದಿಂದ ಶಾರುಖ್ ಖಾನ್ ಅವರು ದೊಡ್ಡ ಗೆಲುವು ಕಂಡಿದ್ದಾರೆ. ಈ ಚಿತ್ರದಲ್ಲಿ ಶಾರುಖ್ ಅವರು ಸಿಕ್ಸ್​ಪ್ಯಾಕ್​ನಲ್ಲಿ ಮಿಂಚಿದ್ದರು. ಅವರ ಶರ್ಟ್​ಲೆಸ್ ಫೋಟೋ ವೈರಲ್ ಆಗಿತ್ತು. ಈಗ ಸೆಟ್​ನ ಫೋಟೋ ಅನ್ನು ಶಾರುಖ್ ಖಾನ್ ಅವರ ಮೇಕಪ್ ಆರ್ಟಿಸ್ಟ್​ ಪ್ರೀತಿಶೀಲ್ ಸಿಂಗ್ ಡಿಸೋಜಾ ಹಂಚಿಕೊಂಡಿದ್ದಾರೆ. ಶಾರುಖ್ ಅವರ ಆ್ಯಬ್ಸ್ ಫ್ಯಾನ್ಸ್ ಗಮನ ಸೆಳೆದಿದೆ.

ಪ್ರೀತಿಶೀಲ್ ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಭೂಮಿ ಪಡ್ನೇಕರ್, ಆಯುಷ್ಮಾನ್ ಖುರಾನಾ ಮೊದಲಾದವರ ಜತೆ ಅವರು ಕೆಲಸ ಮಾಡಿದ್ದಾರೆ. ಅವರು ಶಾರುಖ್ ಜೊತೆ ಇರುವ ಫೋಟೋ ಶೇರ್ ಮಾಡಿದ್ದಾರೆ. ‘ಬುದ್ಧಿವಂತ, ಫನ್ನಿ, ಚಿಂತನಾಶೀಲ, ಧೈರ್ಯಶಾಲಿ, ಉದಾರ.. ಇವರನ್ನು ವಿವರಿಸಲು ಶಬ್ದಗಳೇ ಸಾಲದು’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಶಾರುಖ್ ಖಾನ್ ಅವರ ಸಿಕ್ಸ್ ಪ್ಯಾಕ್ ಸಾಕಷ್ಟು ಗಮನ ಸೆಳೆದಿದೆ.

ಇದನ್ನೂ ಓದಿ
Image
Siddharth Anand: ಬಾಲಿವುಡ್​ಗೆ 2023ರ ಮೊದಲ ಬ್ಲಾಕ್​ ಬಸ್ಟರ್​​ ನೀಡಿದ ‘ಪಠಾಣ್​’ ನಿರ್ದೇಶಕ ಸಿದ್ದಾರ್ಥ್​ ಆನಂದ್​
Image
Kangana Ranaut: ‘ಪಠಾಣ್​’ ಸೂಪರ್​ ಹಿಟ್​; ‘ಚಿತ್ರರಂಗ ಇರೋದು ಹಣ ಮಾಡೋಕಲ್ಲ’ ಅಂತ ಕೊಂಕು ನುಡಿದ ಕಂಗನಾ
Image
Pathaan Review: ದೇಶಭಕ್ತಿಯಲ್ಲಿ ಮಿಂದೆದ್ದ ‘ಪಠಾಣ್​’; ಶಾರುಖ್​ ಫ್ಯಾನ್ಸ್​ಗೆ ಹಬ್ಬ, ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ
Image
Pathaan Movie Twitter Review: ‘ಹೈ ವೋಲ್ಟೇಜ್ ಆ್ಯಕ್ಷನ್ ಸಿನಿಮಾ’; ‘ಪಠಾಣ್​’ ನೋಡಿ ವಿಮರ್ಶೆ ತಿಳಿಸಿದ ನೆಟ್ಟಿಗರು

ಶಾರುಖ್ ಖಾನ್ ಅವರಿಗೆ ವಯಸ್ಸು 57. ಅವರು ಜಿಮ್​ನಲ್ಲಿ ಸಾಕಷ್ಟು ವರ್ಕೌಟ್ ಮಾಡುತ್ತಾರೆ. ಸಿಕ್ಸ್ ಪ್ಯಾಕ್ ಮಾಡಿಕೊಂಡು ಗಮನ ಸೆಳೆಯುತ್ತಾರೆ. ಫಿಟ್ನೆಸ್ ವಿಚಾರದಲ್ಲಿ ಅವರು ಅನೇಕರಿಗೆ ಮಾದರಿ. ಈ ಕಾರಣಕ್ಕೂ ಶಾರುಖ್ ಖಾನ್ ಅವರು ಇಷ್ಟವಾಗುತ್ತಾರೆ. ಪ್ರೀತಿಶೀಲ್ ಹಂಚಿಕೊಂಡಿರುವ ಫೋಟೋದಲ್ಲಿ ಫ್ಯಾನ್ಸ್ ಶಾರುಖ್ ವಯಸ್ಸಿನ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ‘ಶಾರುಖ್ ಖಾನ್​ಗೆ ನಿಜಕ್ಕೂ 57 ವರ್ಷ ಆಯಿತೇ? ನೋಡೋಕೆ ಹಾಗೆ ಕಾಣುವುದೇ ಇಲ್ಲ’ ಎಂದಿದ್ದಾರೆ.  ಇನ್ನೂ ಕೆಲವರು ‘ನಿಮ್ಮದೇ ಅದೃಷ್ಟ. ಅವರನ್ನು ಪದೇಪದೇ ಭೇಟಿ ಆಗಬಹುದು’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಒಂದೇ ಚಿತ್ರದಲ್ಲಿ ಪಠಾಣ್​-ಟೈಗರ್​; ಈ ಸಿನಿಮಾದಲ್ಲಿ ಇರಲಿದೆ ಭರಪೂರ ಆ್ಯಕ್ಷನ್

‘ಪಠಾಣ್​’ ಸಿನಿಮಾ ವಿಶ್ವಾದ್ಯಂತ ಸುಮಾರು ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಥಿಯೇಟರ್​ಗೆ ಬರಲು ಈ ಚಿತ್ರದ ಟಿಕೆಟ್ ಬೆಲೆಯನ್ನು ತಗ್ಗಿಸಲಾಗಿದ್ದು, ಇದು ಸಿನಿಮಾಗೆ ಸಹಕಾರಿ ಆಗಿದೆ. ಇತ್ತೀಚೆಗೆ ರಿಲೀಸ್ ಆದ ಕಾರ್ತಿಕ್ ಆರ್ಯನ್ ನಟನೆಯ ‘ಶೆಹಜಾದ’ ಸಿನಿಮಾ ರಿಲೀಸ್ ಆಯಿತು. ಈ ಸಿನಿಮಾ ಗೆಲ್ಲೋಕೆ ವಿಫಲವಾಗಿದೆ. ಇದು ಕೂಡ ‘ಪಠಾಣ್​’ ಚಿತ್ರಕ್ಕೆ ವರದಾನವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:10 am, Tue, 21 February 23