Hrithik Roshan: ಪ್ರೇಯಸಿ ತುಟಿಗೆ ಹೃತಿಕ್​​ ರೋಷನ್​ ಕಿಸ್;​ ಜೂಮ್​ ಹಾಕಿ ವಿಡಿಯೋ ಮಾಡಿದ ಪಾಪರಾಜಿಗಳಿಗೆ ನೆಟ್ಟಿಗರ ಛೀಮಾರಿ

Hrithik Roshan | Saba Azad: ಹೃತಿಕ್​ ರೋಷನ್​ ಅವರನ್ನು ವಿಮಾನ ನಿಲ್ದಾಣದ ತನಕ ಬಿಡಲು ಸಬಾ ಆಜಾದ್ ಬಂದಿದ್ದರು. ಹೃತಿಕ್​ ಕಾರು ಇಳಿದು ಹೋಗುವುದಕ್ಕೂ ಮುನ್ನ ಸಬಾ ಆಜಾದ್​ ತುಟಿಗೆ ಕಿಸ್​ ಮಾಡಿದರು.

Hrithik Roshan: ಪ್ರೇಯಸಿ ತುಟಿಗೆ ಹೃತಿಕ್​​ ರೋಷನ್​ ಕಿಸ್;​ ಜೂಮ್​ ಹಾಕಿ ವಿಡಿಯೋ ಮಾಡಿದ ಪಾಪರಾಜಿಗಳಿಗೆ ನೆಟ್ಟಿಗರ ಛೀಮಾರಿ
ಹೃತಿಕ್ ರೋಷನ್, ಸಬಾ ಆಜಾದ್
Follow us
ಮದನ್​ ಕುಮಾರ್​
|

Updated on: Feb 28, 2023 | 7:00 AM

ಬಾಲಿವುಡ್​ ನಟ ಹೃತಿಕ್​ ರೋಷನ್​ (Hrithik Roshan) ಅವರು ಸಿನಿಮಾಗಳ ಜೊತೆಗೆ ಖಾಸಗಿ ಜೀವನದ ಕಾರಣದಿಂದಲೂ ಸಾಕಷ್ಟು ಸುದ್ದಿ ಆಗುತ್ತಾರೆ. ಮಾಜಿ ಪತ್ನಿ ಸುಸಾನೆ ಖಾನ್​ಗೆ ಅವರು 2014ರಲ್ಲಿ ವಿಚ್ಛೇದನ ನೀಡಿದರು. ಈಗ ಅವರು ನಟಿ ಸಬಾ ಆಜಾದ್ (Saba Azad) ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ. ಈ ವಿಚಾರ ಗುಟ್ಟಾಗಿ ಉಳಿದಿಲ್ಲ. ಅನೇಕ ಸಂದರ್ಭಗಳಲ್ಲಿ ಹೃತಿಕ್​ ರೋಷನ್​ ಮತ್ತು ಸಬಾ ಆಜಾದ್ ಅವರು ಒಟ್ಟಾಗಿ ಕಾಣಿಸಿಕೊಂಡಿದ್ದುಂಟು. ಇತ್ತೀಚೆಗೆ ವಿಮಾನ ನಿಲ್ದಾಣಕ್ಕೆ ಒಟ್ಟಿಗೆ ಬಂದಿದ್ದ ಅವರು ಕಾರಿನಲ್ಲಿ ಪರಸ್ಪರ ತುಟಿಗೆ ಕಿಸ್​ ಮಾಡಿಕೊಂಡರು. ಅದನ್ನು ಪಾಪರಾಜಿಗಳು (Paparazzi) ಜೂಮ್​ ಹಾಕಿ ಸೆರೆ ಹಿಡಿದಿದ್ದಾರೆ. ಆ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.

ಸೆಲೆಬ್ರಿಟಿಗಳು ಎಲ್ಲಿಯೇ ಹೋದರೂ ಪಾಪರಾಜಿಗಳು ಹಿಂಬಾಲಿಸುತ್ತಾರೆ. ಸ್ಟಾರ್​ ಕಲಾವಿದರ ಫೋಟೋ ಕ್ಲಿಕ್ಕಿಸಲು ಅವರು ಕಾಯುತ್ತಿರುತ್ತಾರೆ. ಆದರೆ ಅವರಿಗೂ ಕೆಲವು ಜವಾಬ್ದಾರಿಗಳು ಇರಬೇಕಾಗುತ್ತದೆ. ನಟ-ನಟಿಯರ ಖಾಸಗಿ ಬದುಕಿನ ಮೇಲೆ ದಾಳಿ ಮಾಡಬಾರದು. ತುಂಬ ಪರ್ಸನಲ್​ ಆದಂತಹ ಸಂಗತಿಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯದಿದ್ದರೆ ಒಳಿತು. ಆದರೆ ಕೆಲವೊಮ್ಮೆ ಪಾಪರಾಜಿಗಳು ಮಿತಿ ಮೀರಿ ವರ್ತಿಸುತ್ತಾರೆ. ಹೃತಿಕ್​ ರೋಷನ್​ ಮತ್ತು ಸಬಾ ಆಜಾದ್ ವಿಚಾರದಲ್ಲಿ ಹಾಗೆಯೇ ಆಗಿದೆ.

ಇದನ್ನೂ ಓದಿ
Image
‘ಕೆಜಿಎಫ್​ 3’ ಚಿತ್ರದಲ್ಲಿ ಹೃತಿಕ್​ ರೋಷನ್​ ಇರ್ತಾರಾ? ಊರ ತುಂಬ ಹಬ್ಬಿದೆ ಹೊಸ ಗಾಸಿಪ್​
Image
ಹೃತಿಕ್​ ರೋಷನ್​ಗೂ ಅಚ್ಚರಿ ಮೂಡಿಸಿತು 67 ವರ್ಷದ ನಟ ಅನುಪಮ್​ ಖೇರ್​ ಫಿಟ್ನೆಸ್​; ಇಲ್ಲಿದೆ ಫೋಟೋ
Image
‘ಹೃತಿಕ್​ ರೋಷನ್​ ಜತೆ ನೀವು ಡೇಟಿಂಗ್​ ಮಾಡ್ತಾ ಇದ್ದೀರಾ?’; ನೇರ ಪ್ರಶ್ನೆಗೆ ಸಬಾ ಉತ್ತರ ಏನಿತ್ತು?
Image
‘ಪ್ರೀತಿಯ ಆರ್ಯನ್​ ಖಾನ್​..’: ಶಾರುಖ್​ ಪುತ್ರನಿಗೆ ಹೃತಿಕ್​ ರೋಷನ್​ ಬಹಿರಂಗ ಪತ್ರ

ಇದನ್ನೂ ಓದಿ: ಅಭಿಮಾನಿಯ ಕಾಲು ಮುಟ್ಟಿ ನಮಸ್ಕಾರ ಮಾಡಿದ ಹೃತಿಕ್​ ರೋಷನ್​; ಇಲ್ಲಿದೆ ವೈರಲ್​ ವಿಡಿಯೋ

ಹೃತಿಕ್​ ರೋಷನ್​ ಅವರನ್ನು ವಿಮಾನ ನಿಲ್ದಾಣದ ತನಕ ಬಿಡಲು ಸಬಾ ಆಜಾದ್ ಬಂದಿದ್ದರು. ಹೃತಿಕ್​ ಕಾರು ಇಳಿದು ಹೋಗುವುದಕ್ಕೂ ಮುನ್ನ ಸಬಾ ಆಜಾದ್ ತುಟಿಗೆ ಕಿಸ್​ ಮಾಡಿದರು. ಕಾರಿನ ಒಳಗೆ ನಡೆದ ಈ ಚುಂಬನದ ಪ್ರಸಂಗವನ್ನು ಪಾಪರಾಜಿಗಳು ತಮ್ಮ ಕ್ಯಾಮೆರಾದಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಆ ವಿಡಿಯೋ ವೈರಲ್​ ಆಗಿದೆ.

View this post on Instagram

A post shared by Koimoi.com (@koimoi)

ಪಾಪರಾಜಿಗಳು ಈ ರೀತಿ ಮಾಡಿದ್ದು ಸರಿಯಲ್ಲ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. ಸೆಲೆಬ್ರಿಟಿಗಳು ನೀಡಿದ ಅವಕಾಶವನ್ನು ಪಾಪರಾಜಿಗಳು ದುರುಪಯೋಗ ಮಾಡಿಕೊಳ್ಳಬಾರದು ಎಂದು ನೆಟ್ಟಿಗರು ಕಿವಿ ಹಿಂಡುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ನಟಿ ಆಲಿಯಾ ಭಟ್​ ಕೂಡ ಪಾಪರಾಜಿಗಳಿಂದ ತಮ್ಮ ಖಾಸಗಿತನಕ್ಕೆ ಧಕ್ಕೆ ಆಗಿದೆ ಎಂದು ಗರಂ ಆಗಿದ್ದರು.

ಇದನ್ನೂ ಓದಿ: Kangana Ranaut: ಹೃತಿಕ್​ ರೋಷನ್​ಗೆ ನಟನೆ ಬರಲ್ಲ ಎಂದು ನೇರವಾಗಿ ಹೇಳಿದ ಕಂಗನಾ​; ತಿರುಗೇಟು ನೀಡಿದ ಫ್ಯಾನ್ಸ್​

ಸಿನಿಮಾ ವಿಚಾರಕ್ಕೆ ಬರೋದಾದರೆ ಹೃತಿಕ್​ ರೋಷನ್​ ನಟಿಸಿದ ‘ವಿಕ್ರಂ ವೇದ’ ಸಿನಿಮಾ 2022ರ ಸೆಪ್ಟೆಂಬರ್​ನಲ್ಲಿ ತೆರೆಕಂಡಿತು. ಸೈಫ್​ ಅಲಿ ಖಾನ್​ ಕೂಡ ಆ ಚಿತ್ರದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದರು. ಬಾಕ್ಸ್​ ಆಫೀಸ್​ನಲ್ಲಿ ‘ವಿಕ್ರಂ ವೇದ’ ಹೀನಾಯವಾಗಿ ಸೋತಿತು. ಈಗ ‘ಫೈಟರ್​’ ಸಿನಿಮಾದ ಕೆಲಸಗಳಲ್ಲಿ ಹೃತಿಕ್​ ರೋಷನ್​​ ಬ್ಯುಸಿ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್