ರಾಜಮೌಳಿಯನ್ನು ಟೀಕಿಸಿದ ಬಲಪಂಥೀಯರಿಗೆ ಖಡಕ್ ಎಚ್ಚರಿಕೆ ನೀಡಿದ ಕಂಗನಾ ರಣಾವತ್

ನ್ಯೂಯಾರ್ಕರ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ರಾಜಮೌಳಿ ಅವರು, ‘ಧರ್ಮವು ಮೂಲಭೂತವಾಗಿ ಒಂದು ರೀತಿಯ ಶೋಷಣೆಯಾಗಿದೆ' ಎಂದು ಹೇಳಿದ್ದರು.

ರಾಜಮೌಳಿಯನ್ನು ಟೀಕಿಸಿದ ಬಲಪಂಥೀಯರಿಗೆ ಖಡಕ್ ಎಚ್ಚರಿಕೆ ನೀಡಿದ ಕಂಗನಾ ರಣಾವತ್
ಕಂಗನಾ-ರಾಜಮೌಳಿ
Follow us
ರಾಜೇಶ್ ದುಗ್ಗುಮನೆ
|

Updated on: Feb 18, 2023 | 6:21 PM

ನಟಿ ಕಂಗನಾ ರಣಾವತ್ (Kangana Ranaut) ಅವರು ಸದಾ ಎಲ್ಲರನ್ನೂ ಟೀಕೆ ಮಾಡುತ್ತಾ ಇರುತ್ತಾರೆ. ಚಿತ್ರರಂಗದ ಬಹುತೇಕರನ್ನು ಕಂಡರೆ ಅವರಿಗೆ ಆಗುವುದಿಲ್ಲ. ಈಗ ಕಂಗನಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ರಾಜಮೌಳಿ ಅವರು ಮಾತನಾಡುತ್ತಾ ಧರ್ಮದ ಬಗ್ಗೆ ಮಾತನಾಡಿದ್ದರು. ತಾವು ಧರ್ಮದಿಂದ ದೂರ ಇರುವುದಾಗಿ ಹೇಳಿದ್ದರು. ಈ ವಿಚಾರದಲ್ಲಿ ಅನೇಕರು ಅವರನ್ನು ಟೀಕೆ ಮಾಡಿದ್ದರು. ಈಗ ಕಂಗನಾ ರಣಾವತ್ ಅವರು ರಾಜಮೌಳಿ ಪರ ಬ್ಯಾಟ್ ಬೀಸಿದ್ದಾರೆ.

ನ್ಯೂಯಾರ್ಕರ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ರಾಜಮೌಳಿ ಅವರು, ‘ಧರ್ಮವು ಮೂಲಭೂತವಾಗಿ ಒಂದು ರೀತಿಯ ಶೋಷಣೆಯಾಗಿದೆ’ ಎಂದು ಹೇಳಿದ್ದರು. ಇದನ್ನು ಅನೇಕರು ಟೀಕೆ ಮಾಡಿದ್ದರು. ಈಗ ಕಂಗನಾ ಅವರು ರಾಜಮೌಳಿ ಪರ ಮಾತನಾಡಿದ್ದಾರೆ. ಇದು ಅನೇಕರಿಗೆ ಅಚ್ಚರಿಮೂಡಿಸಿದೆ.

‘ಇದಕ್ಕೆ ಅತಿಯಾಗಿ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಎಲ್ಲ ಕಡೆ ಕೇಸರಿ ಬಾವುಟ ತೆಗೆದುಕೊಂಡು ಹೋಗದೇ ಇದ್ದರೆ ತೊಂದರೆ ಏನಿಲ್ಲ. ಮಾತಿಗಿಂತ ನಮ್ಮ ಕೆಲಸ ದೊಡ್ಡದಾಗಿ ಕಾಣುತ್ತದೆ. ನಾವು ಎಲ್ಲರಿಗೋಸ್ಕರ ಸಿನಿಮಾ ಮಾಡುತ್ತೇವೆ. ನಾವು ಕಲಾವಿದರು ದುರ್ಬಲರಾಗಿದ್ದೇವೆ. ವಿಶೇಷವಾಗಿ ಬಲಪಂಥೀಯರು ಎಂದು ಕರೆಯುವವರಿಂದ ನಮಗೆ ಯಾವುದೇ ಬೆಂಬಲ ಸಿಗದ ಕಾರಣ, ನಾವು ಸಂಪೂರ್ಣವಾಗಿ ನಮ್ಮ ಕಾಲ ಮೇಲೆ ನಿಂತಿದ್ದೇವೆ. ದಯವಿಟ್ಟು ಕುಳಿತುಕೊಳ್ಳಿ, ಧೈರ್ಯ ಮಾಡಬೇಡಿ. ಮಳೆಯಲ್ಲಿ ಜ್ವಾಲೆಯಂತಿರುವ ರಾಜಮೌಳಿ ವಿರುದ್ಧ ಮಾತನಾಡಿದರೆ ನಾನು ಏನನ್ನೂ ಸಹಿಸುವುದಿಲ್ಲ. ಅವರು ಒಬ್ಬ ಮೇಧಾವಿ ಮತ್ತು ರಾಷ್ಟ್ರವಾದಿ. ಅವರು ನಮ್ಮ ಜೊತೆ ಇರೋದು ನಮ್ಮ ಅದೃಷ್ಟ’ ಎಂದು ಕಂಗನಾ ಹೇಳಿದ್ದಾರೆ.

ರಾಜಮೌಳಿ ಹೇಳಿದ್ದೇನು?

‘ನಾನು ನಿಧಾನವಾಗಿ ಧರ್ಮದಿಂದ ದೂರ ಸರಿಯಲು ಪ್ರಾರಂಭಿಸಿದೆ. ಆ ಕಾಲದಲ್ಲಿ ಮಹಾಭಾರತ ಅಥವಾ ರಾಮಾಯಣದಂತಹ ಕಥೆಗಳ ಮೇಲಿನ ಪ್ರೀತಿ ಕಡಿಮೆಯಾಗಿರಲಿಲ್ಲ. ನಾನು ಅವುಗಳ ಧಾರ್ಮಿಕ ಅಂಶಗಳಿಂದ ದೂರ ತಳ್ಳಲು ಪ್ರಾರಂಭಿಸಿದೆ. ಆದರೆ ನನ್ನೊಂದಿಗೆ ಉಳಿದುಕೊಂಡಿದ್ದು ಹೇಗೆ ಕಥೆ ಹೇಳಬೇಕು ಎನ್ನುವುದು’ ಎಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು