ಗೋವಿನ ಚರ್ಮದ ಬ್ಯಾಗ್ ಹಿಡಿದು ಬಂದ್ರಾ ಕಂಗನಾ? ಶುರುವಾಗಿದೆ ಚರ್ಚೆ

ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಗೋವಿನ ಚರ್ಮದ ಹರ್ಮೆಸ್ ಬ್ಯಾಗ್ ಹಿಡಿದು ಸದ್ದು ಮಾಡಿದ್ದಾರೆ. ಬರೋಬ್ಬರಿ 5 ಲಕ್ಷ ರೂಪಾಯಿ ಬೆಲೆಯ ಈ ಬ್ಯಾಗ್‌ನ ಮೂಲ ವಸ್ತುವಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಅವರ ಅಭಿಮಾನಿಗಳು ಸಮರ್ಥನೆ ನೀಡುತ್ತಿದ್ದರೂ, ಈ ಬಗ್ಗೆ ಕಂಗನಾ ಸ್ಪಷ್ಟನೆ ನೀಡಬೇಕಿದೆ. ರಾಜಕೀಯ ಪ್ರಚಾರದ ನಡುವೆ ಈ ವಿವಾದ ಎದುರಾಗಿದೆ.

ಗೋವಿನ ಚರ್ಮದ ಬ್ಯಾಗ್ ಹಿಡಿದು ಬಂದ್ರಾ ಕಂಗನಾ? ಶುರುವಾಗಿದೆ ಚರ್ಚೆ
ಕಂಗನಾ

Updated on: Apr 22, 2026 | 7:55 AM

ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು (Kangana Ranaut) ಆಗಾಗ ವಿವಿಧ ಕಾರಣಕ್ಕೆ ಚರ್ಚೆ ಆಗುತ್ತಾ ಇರುತ್ತಾರೆ. ಅವರ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಾರೆ. ಅವರು ನಿಡುವ ಹೇಳಿಕೆ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತದೆ. ಈಗ ಅವರು ತೆಗೆದುಕೊಂಡು ಬಂದ ಬ್ಯಾಗ್ ಬಗ್ಗೆ ಚರ್ಚೆ ನಡೆದಿದೆ. ಅವರು ಗೋವಿನ ಚರ್ಮದ ಬ್ಯಾಗ್ ಹಿಡಿದು ಬಂದರೇ ಎಂಬ ಪ್ರಶ್ನೆ ಮೂಡಿದೆ.

ಕಂಗನಾ ರಣಾವತ್ ಅವರು ಸದ್ಯ ಪಶ್ಚಿಮ ಬಂಗಾಳದ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಹೀಗಿರುವಾಗಲೇ ಅವರ ಫೋಟೋ ಒಂದು ವೈರಲ್ ಆಗಿದೆ. ಇದರಲ್ಲಿ ಅವರು ಬ್ಯಾಗ್ ಒಂದನ್ನು ಹಿಡಿದು ನಿಂತಿದ್ದಾರೆ. ಬಿಳಿ ಬಣ್ಣದಲ್ಲಿ ಈ ಬ್ಯಾಗ್ ಇದೆ. ಇದು ಹೆರ್ಮ್ಸ್ ವಚೆ ಹಂಟರ್ ಕಂಪನಿಯ ಬ್ಯಾಗ್. ಈ ಬ್ಯಾಗ್​​ನ ಬೆಲೆ ಬರೋಬ್ಬರಿ 5 ಲಕ್ಷ ರೂಪಾಯಿ.

ಬ್ಯಾಗ್​​​ನ ಬೆಲೆ ಇಲ್ಲಿ ಅಷ್ಟಾಗಿ ಚರ್ಚೆ ಆಗುತ್ತಿಲ್ಲ. ಏಕೆಂದರೆ ಅನೇಕ ಸೆಲೆಬ್ರಿಟಿಗಳು ಲಕ್ಷಾಂತರ ರೂಪಾಯಿ ಬೆಲೆಯ ಬ್ಯಾಗ್ ಅನ್ನೇ ಹಿಡಿದು ಓಡಾಡುತ್ತಾರೆ. ಆದರೆ, ಇಲ್ಲಿ ಚರ್ಚೆ ಆಗುತ್ತಿರುವುದು ಕಂಗನಾ ಬ್ಯಾಗ್ ತಯಾರಿಸಲು ಬಳಕೆ ಮಾಡಿದ ವಸ್ತುವಿನ ಬಗ್ಗೆ. ಹೆರ್ಮ್ಸ್ ವಚೆ ಹಂಟರ್ ಕಂಪನಿಯವರು ತಯಾರಿಸುವ ಬ್ಯಾಗ್ ಗೋವಿನ ಚರ್ಮದ್ದು. ಇದು ಫ್ರಾನ್ಸ್ ಕಂಪನಿ ಆಗಿದೆ. ಈಗ ಕಂಗನಾ ಬ್ಯಾಗ್ ವಿಷಯ ಸಾಕಷ್ಟು ಚರ್ಚೆ ಆಗುತ್ತಿದೆ.

ಅಂದಹಾಗೆ ಇದು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆ. ಆ ಬ್ಯಾಗ್ ನಿಜಕ್ಕೂ ಹೆರ್ಮ್ಸ್ ವಚೆ ಹಂಟರ್ ಕಂಪನಿಯದ್ದೇನಾ ಅಥವಾ ಇದನ್ನು ಆ ರೀತಿ ಊಹಿಸಲಾಗಿದೆಯೇ ಎಂಬ ಬಗ್ಗೆ ಕಂಗನಾ ಅವರಿಂದಲೇ ಸ್ಪಷ್ಟನೆ ಸಿಗಬೇಕಿದೆ. ಅವರ ಅಭಿಮಾನಿಗಳು ಕಂಗನಾ ಪರ ಬ್ಯಾಟ್ ಬೀಸುತ್ತಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿಯ ಭಾಷಣವೇ ದೊಡ್ಡ ತಲೆನೋವು; ಕಂಗನಾ ರಣಾವತ್ ಟೀಕೆ

ಕಂಗನಾ ರಣಾವತ್ ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟ ಮೇಲೆ ಸಿನಿಮಾ ರಂಗ ತೊರೆಯೋದಾಗಿ ಹೇಳಿದ್ದರು. ಆದರೆ, ಈಗ ಅವರಿಗೆ ರಾಜಕೀಯವೇ ಸಾಕಾದಂತೆ ಇದೆ. ಮುಂದಿನ ದಿನಗಳಲ್ಲಿ ಅವರು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us