ಅಟ್ಲಿ ಬಣ್ಣದ ಬಗ್ಗೆ ಕಪಿಲ್ ಶರ್ಮಾ ಟೀಕೆ; ನಗದೆ ಖಡಕ್ ಉತ್ತರ ಕೊಟ್ಟ ನಿರ್ದೇಶಕ

ಕಪಿಲ್ ಶರ್ಮಾ ಅವರು ತಮ್ಮ ಶೋದಲ್ಲಿ ನಿರ್ದೇಶಕ ಅಟ್ಲಿ ಅವರ ದೇಹದ ಬಣ್ಣದ ಬಗ್ಗೆ ಅನುಚಿತ ಪ್ರಶ್ನೆ ಕೇಳಿದ್ದಕ್ಕೆ ಅಟ್ಲಿ ಬಲವಾದ ಉತ್ತರ ನೀಡಿದ್ದಾರೆ. ಅಟ್ಲಿ ಅವರ ಉತ್ತರ ವೈರಲ್ ಆಗಿದ್ದು, ಕಪಿಲ್ ಶರ್ಮಾ ಅವರನ್ನು ಅನೇಕರು ಟೀಕಿಸಿದ್ದಾರೆ. ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಬಣ್ಣದ ಆಧಾರದ ಮೇಲೆ ಯಾರನ್ನೂ ನಿರ್ಣಯಿಸಬಾರದು ಎಂದು ಅಟ್ಲಿ ಒತ್ತಿ ಹೇಳಿದ್ದಾರೆ.

ಅಟ್ಲಿ ಬಣ್ಣದ ಬಗ್ಗೆ ಕಪಿಲ್ ಶರ್ಮಾ ಟೀಕೆ; ನಗದೆ ಖಡಕ್ ಉತ್ತರ ಕೊಟ್ಟ ನಿರ್ದೇಶಕ
ಅಟ್ಲಿ- ಕಪಿಲ್ ಶರ್ಮಾ

Updated on: Dec 17, 2024 | 2:30 PM

ಅಟ್ಲಿ ಅವರು ಖ್ಯಾತ ನಿರ್ದೇಶಕರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ಅವರ ಖ್ಯಾತಿ ಹೆಚ್ಚುತ್ತಲೇ ಇದೆ. ಅವರು ಈಗ ಬಾಲಿವುಡ್​ನಲ್ಲೂ ಹೆಸರು ಮಾಡಿದ್ದಾರೆ. ಈಗ ಅಟ್ಲಿ ಅವರ ದೇಹದ ಬಣ್ಣವನ್ನು ಇಟ್ಟುಕೊಂಡು ಕಪಿಲ್ ಶರ್ಮಾ ಅವರು ಟೀಕೆ ಮಾಡಿದ್ದಾರೆ. ಇದಕ್ಕೆ ನಗದೆ ಅಟ್ಲಿ ಅವರು ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಅಟ್ಲಿ ಅವರು ಇತ್ತೀಚೆಗೆ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ಗೆ ಆಗಮಿಸಿದ್ದರು. ಈ ವೇಳೆ ಪ್ರಶ್ನೆ ಕೇಳುವ ಭರದಲ್ಲಿ ಕಪಿಲ್ ಅವರು ಒಂದು ಎಡವಟ್ಟು ಮಾಡಿಕೊಂಡಿದ್ದಾರೆ. ‘ಯಾವುದಾದರೂ ಸ್ಟಾರ್​ನ ಮೊದಲ ಬಾರಿ ಭೇಟಿ ಮಾಡಲು ಹೋದಾಗ ಅಟ್ಲಿ ಎಲ್ಲಿ ಎಂದು ಕೇಳಿದ ಉದಾಹರಣೆ ಇದೆಯೇ’ ಎಂದು ಕೇಳುತ್ತ ನಕ್ಕರು ಕಪಿಲ್ ಶರ್ಮಾ. ಆದರೆ, ಅಟ್ಲಿ ನಗಲಿಲ್ಲ.

‘ನೀವು ಯಾವ ಅರ್ಥದಲ್ಲಿ ಪ್ರಶ್ನೆ ಕೇಳಿದಿರಿ ಎಂಬುದು ನನಗೆ ಅರ್ಥವಾಯಿತು. ನಾನು ಉತ್ತರಿಸಲು ಪ್ರಯತ್ನಿಸುತ್ತೇನೆ. ನಾನು ಎಆರ್​ ಮುರುಗದಾಸ್​ಗೆ ಧನ್ಯವಾದ ಹೇಳಬೇಕು. ಅವರೇ ನನ್ನ ಮೊದಲ ಸಿನಿಮಾನ ನಿರ್ಮಾಣ ಮಾಡಿದ್ದು. ಅವರು ಸ್ಕ್ರಿಪ್ಟ್ ಕೇಳಿದರು. ನಾನು ಹೇಗಿದ್ದೇನೆ ಎಂದು ನೋಡಿಲ್ಲ. ಅವರು ನನ್ನ ಸ್ಕ್ರಿಪ್ಟ್ ನರೇಷನ್ ಕೇಳಿ ಇಷ್ಟಪಟ್ಟರು. ನಾವು ಹೇಗೆ ಕಾಣುತ್ತೇವೆ ಎಂಬುದರ ಮೇಲೆ ಜಡ್ಜ್ ಮಾಡಬಾರದು. ನಮ್ಮ ಮನಸ್ಸನ್ನು ನೋಡಿ ಜಡ್ಜ್ ಮಾಡಬೇಕು’ ಎಂದು ಅಟ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಒಂದೇ ಸಿನಿಮಾದಲ್ಲಿ ಸಲ್ಮಾನ್​ ಖಾನ್​, ಕಮಲ್​ ಹಾಸನ್ ನಟನೆ; ಇದು ಅಟ್ಲಿ ಪ್ಲ್ಯಾನ್

ಅನೇಕರು ಈ ವಿಡಿಯೋನ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕಪಿಲ್ ಶರ್ಮಾ ಕೇಳಿದ ಪ್ರಶ್ನೆಯನ್ನು ಅನೇಕರು ಟೀಕೆ ಮಾಡಿದ್ದಾರೆ. ಅಟ್ಲಿ ಅವರ ಬಣ್ಣ ನೋಡಿ ಈ ರೀತಿಯಲ್ಲಿ ಟೀಕೆ ಮಾಡೋದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು, ‘ಕಪಿಲ್ ಶರ್ಮಾ ಕಡೆಯಿಂದ ಈ ರೀತಿಯ ಪ್ರಶ್ನೆಗಳು ಬರುತ್ತವೆ ಎಂದಾಗ ಅದರಲ್ಲಿ ಅಚ್ಚರಿ ಏನಿಲ್ಲ’ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ಅವರು ಕ್ಷಮೆ ಕೇಳಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us