ಒಂದೇ ಸಿನಿಮಾದಲ್ಲಿ ಸಲ್ಮಾನ್​ ಖಾನ್​, ಕಮಲ್​ ಹಾಸನ್ ನಟನೆ; ಇದು ಅಟ್ಲಿ ಪ್ಲ್ಯಾನ್

‘ಜವಾನ್​’ ಮೂಲಕ ಶಾರುಖ್​ ಖಾನ್​ಗೆ ದೊಡ್ಡ ಗೆಲುವು ತಂದುಕೊಟ್ಟಿದ್ದ ನಿರ್ದೇಶಕ ಅಟ್ಲಿ ಈಗ ಸಲ್ಮಾನ್​ ಖಾನ್​ ಜೊತೆ ಕೈ ಜೋಡಿಸಿದ್ದಾರೆ. ಅವರ ಹೊಸ ಸಿನಿಮಾದಲ್ಲಿ ಕಮಲ್​ ಹಾಸನ್​ ಕೂಡ ನಟಿಸುತ್ತಾರೆ ಎಂಬ ಮಾಹಿತಿ ಕೇಳಿಬಂದಿದೆ. ಸಲ್ಮಾನ್​ ಖಾನ್​ ಮತ್ತು ಕಮಲ್ ಹಾಸನ್​ ಅವರನ್ನು ಒಟ್ಟಿಗೆ ತೆರೆಮೇಲೆ ನೋಡಲು ಅಭಿಮಾನಿಗಳಲ್ಲಿ ಕಾತರ ಹೆಚ್ಚಿದೆ.

ಒಂದೇ ಸಿನಿಮಾದಲ್ಲಿ ಸಲ್ಮಾನ್​ ಖಾನ್​, ಕಮಲ್​ ಹಾಸನ್ ನಟನೆ; ಇದು ಅಟ್ಲಿ ಪ್ಲ್ಯಾನ್
ಕಮಲ್​ ಹಾಸನ್​, ಸಲ್ಮಾನ್​ ಖಾನ್​
Follow us
|

Updated on: Sep 02, 2024 | 9:35 PM

ನಿರ್ದೇಶಕ ಅಟ್ಲಿ ಅವರು ದಕ್ಷಿಣ ಭಾರತದ ಚಿತ್ರರಂಗದ ಜೊತೆಗೆ ಬಾಲಿವುಡ್​ನಲ್ಲೂ ಸಖತ್ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಶಾರುಖ್​ ಖಾನ್​ ನಟನೆಯ ‘ಜವಾನ್​’ ಸಿನಿಮಾಗೆ ನಿರ್ದೇಶನ ಮಾಡುವ ಮೂಲಕ ಹಿಂದಿ ಚಿತ್ರಕ್ಕೆ ಕಾಲಿಟ್ಟ ಅಟ್ಲಿ ಅವರು ಬ್ಲಾಕ್​ ಬಸ್ಟರ್​ ಹಿಟ್​ ನೀಡಿದರು. ಈಗ ಅವರ ಮುಂದಿನ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ನಟಿಸುವುದು ಕನ್ಫರ್ಮ್​ ಆಗಿದೆ ಎಂಬ ಸುದ್ದಿ ಕೇಳಿಬಂದಿದೆ. ಅಷ್ಟೇ ಅಲ್ಲದೇ, ಇದೇ ಸಿನಿಮಾದಲ್ಲಿ ಮತ್ತೊರ್ವ ಸೂಪರ್​ ಸ್ಟಾರ್​ ನಟ ಕಮಲ್ ಹಾಸನ್​ ಕೂಡ ಅಭಿನಯಿಸುತ್ತಾರೆ ಎಂದು ಹೇಳಲಾಗುತ್ತಿದೆ.

ಸಲ್ಮಾನ್​ ಖಾನ್​ ಮತ್ತು ಅಟ್ಲಿ ಅವರು ಜೊತೆಯಾಗಿ ಸಿನಿಮಾ ಮಾಡುತ್ತಾರೆ ಎಂಬ ಬಗ್ಗೆ ಹಲವು ದಿನಗಳಿಂದ ಸುದ್ದಿ ಕೇಳಿಬರುತ್ತಲೇ ಇತ್ತು. ಈವರೆಗೂ ಸಲ್ಮಾನ್​ ಖಾನ್​ ಅವರಾಗಲೀ, ಅಟ್ಲಿ ಅವರಾಗಲೀ ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಆದರೆ ಇಬ್ಬರ ನಡುವೆ ಅಗ್ರಿಮೆಂಟ್​ ಸೈನ್​ ಆಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಆಗಿದೆ. ಈ ಸುದ್ದಿ ಕೇಳಿದ ಬಳಿಕ ಸಲ್ಮಾನ್​ ಖಾನ್​ ಅವರ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ.

ಅಟ್ಲಿ ನಿರ್ದೇಶನ ಮಾಡಲಿರುವ ಸಿನಿಮಾದಲ್ಲಿ ಇಬ್ಬರು ಹೀರೋಗಳು ಇರಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಸಲ್ಮಾನ್​ ಖಾನ್​ ಜೊತೆ ಎರಡನೇ ಲೀಡ್​ ಆಗಿ ನಟಿಸಲು ಯಾವ ಹೀರೋ ಒಪ್ಪಿಕೊಳ್ಳುತ್ತಾರೆ ಎಂಬ ಪ್ರಶ್ನೆ ಇಷ್ಟು ದಿನಗಳ ತನಕ ಫ್ಯಾನ್ಸ್​ ಮನದಲ್ಲಿ ಕೊರೆಯುತ್ತಿತ್ತು. ಈಗ ಕಮಲ್​ ಹಾಸನ್​ ಅವರ ಹೆಸರು ಕೇಳಿಬಂದಿದ್ದು, ಈ ಪ್ರಾಜೆಕ್ಟ್​ ಬಗ್ಗೆ ಇನ್ನಷ್ಟು ಹೈಪ್​ ಹೆಚ್ಚುವಂತಾಗಿದೆ.

ಇದನ್ನೂ ಓದಿ: 1.4 ಕೋಟಿ ರೂಪಾಯಿ ಬೆಲೆಯ ಕಾರು ಖರೀದಿಸಿದ ಸಲ್ಮಾನ್​ ಖಾನ್​ ಬಾಡಿಗಾರ್ಡ್​ ಶೇರಾ

ಕಮಲ್​ ಹಾಸನ್​ ಅವರಿಗೆ ಬಾಲಿವುಡ್​ನಲ್ಲೂ ಡಿಮ್ಯಾಂಡ್​ ಇದೆ. ಹಾಗಾಗಿ ಸಲ್ಮಾನ್​ ಖಾನ್​ ಮತ್ತು ಕಮಲ್​ ಹಾಸನ್​ ಅವರ ಕಾಂಬಿನೇಷನ್​ನಲ್ಲಿ ಮೂಡಿಬರಲಿರುವ ಸಿನಿಮಾ ಸೂಪರ್​ ಹಿಟ್​ ಆಗಲಿದೆ ಎಂದು ಸಿನಿಪ್ರಿಯರು ಭವಿಷ್ಯ ನುಡಿಯುತ್ತಿದ್ದಾರೆ. ಸದ್ಯಕ್ಕೆ ಈ ಸಿನಿಮಾಗೆ ಪ್ರೀ-ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. 2025ರ ಜನವರಿಯಲ್ಲಿ ಚಿತ್ರಕ್ಕೆ ಶೂಟಿಂಗ್​ ಆರಂಭ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಲಿ ಎಂದು ಇಬ್ಬರೂ ನಟರ ಅಭಿಮಾನಿಗಳು ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.