ದುಬೈನಲ್ಲಿ ಒಟ್ಟಾಗಿ ಸುತ್ತಾಡಿದ್ರಾ ಐಶ್ವರ್ಯಾ-ಅಭಿಷೇಕ್? ವೈರಲ್ ಆಯ್ತು ವಿಡಿಯೋ
ಐಶ್ವರ್ಯಾ ಹಾಗೂ ಅಭಿಷೇಕ್ ಕಳೆದ ವರ್ಷ ಯುಎಇಗೆ ತೆರಳಿದ್ದರು. ಅವರ ಮಗಳು ಆರಾಧ್ಯಾ ಕೂಡ ಇದ್ದರು. ಅವಾರ್ಡ್ ಕಾರ್ಯಕ್ರಮ ಒಂದಕ್ಕೆ ಈ ಜೋಡಿ ಅಲ್ಲಿಗೆ ಹೋಗಿತ್ತು. ಈ ವಿಡಿಯೋದಲ್ಲಿ ಐಶ್ವರ್ಯಾ ಅವರು ನಗುತ್ತಾ ಹೊರ ಬಂದಿದ್ದರು. ಇದನ್ನು ಕೆಲವರು ಈಗ ವೈರಲ್ ಮಾಡುತ್ತಿದ್ದಾರೆ.
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ವಿಚ್ಛೇದನ ವಿಚಾರ ಈ ಮೊದಲಿನಿಂದಲೂ ಚರ್ಚೆ ಆಗುತ್ತಿರುವ ವಿಚಾರ. ಇವರು ದೂರ ಆಗದೇ ಇರಲಿ ಎಂದು ಅವರ ಫ್ಯಾನ್ಸ್ ಕೋರಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಐಶ್ವರ್ಯಾ ಅವರು ಬಚ್ಚನ್ ಕುಟುಂಬದಿಂದ ದೂರ ಆಗಲಿ ಎಂದು ಬಯಸುತ್ತಿದ್ದಾರೆ. ಈಗ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ದುಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎಂಬ ವಿಡಿಯೋ ವೈರಲ್ ಆಗಿದೆ. ಇವರ ಜೊತೆ ಆರಾಧ್ಯಾ ಕೂಡ ಇದ್ದಾರೆ. ಆದರೆ, ಈ ವಿಡಿಯೋ ಹಳೆಯದು ಎನ್ನಲಾಗಿದೆ.
ಅಭಿಷೇಕ್ ಹಾಗೂ ಐಶ್ವರ್ಯಾ ಕಳೆದ ವರ್ಷ ಯುಎಇಗೆ ತೆರಳಿದ್ದರು. ಅವಾರ್ಡ್ ಕಾರ್ಯಕ್ರಮ ಒಂದಕ್ಕೆ ಈ ಜೋಡಿ ಅಲ್ಲಿಗೆ ಹೋಗಿತ್ತು. ಈ ವಿಡಿಯೋದಲ್ಲಿ ಐಶ್ವರ್ಯಾ ಅವರು ನಗುತ್ತಾ ಹೊರ ಬಂದಿದ್ದರು. ಇದನ್ನು ಕೆಲವರು ಈಗ ವೈರಲ್ ಮಾಡುತ್ತಿದ್ದಾರೆ. ‘ಅಭಿಷೇಕ್ ಹಾಗೂ ಐಶ್ವರ್ಯಾ ಮತ್ತೆ ಒಂದಾದರು’ ಎಂದು ಹೇಳುತ್ತಿದ್ದಾರೆ. ಆದರೆ, ವಿಡಿಯೋ ಅಸಲಿಯತ್ತು ಬೇರೆಯೇ ಇದೆ ಎಂಬುದು ಆ ಬಳಿಕ ಗೊತ್ತಾಗಿದೆ.
ಇನ್ನು, ಐಶ್ವರ್ಯಾ ರೈ ಅವರಿಂದ ಅಭಿಷೇಕ್ ದೂರ ಆಗಿದ್ದಾರೆ ಎಂದು ಸುದ್ದಿ ಹರಡಿದಾಗ ಅವರು ವಿವಾಹದ ರಿಂಗ್ ತೋರಿಸಿದ್ದರು. ಆದರೆ, ಇತ್ತೀಚೆಗೆ ಕಾಣಿಸಿಕೊಂಡಾಗ ಅವರ ಕೈ ಬೆರಳಲ್ಲಿ ಈ ರಿಂಗ್ ಕಾಣಿಸಿಲ್ಲ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ. ಈ ವಿಡಿಯೋ ಕೂಡ ವೈರಲ್ ಆಗುತ್ತಿದೆ. ಈ ಮೂಲಕ ಇದು ಮುಗಿದ ಅಧ್ಯಾಯ ಎಂದು ಹೇಳಲಾಗುತ್ತಿದೆ.
ಅಭಿಷೇಕ್ ಹಾಗೂ ಐಶ್ವರ್ಯಾ 2017ರಲ್ಲಿ ಮದುವೆ ಆದರು. ಇವರ ವಿವಾಹ ಸಂಬಂಧಕ್ಕೆ 17 ವರ್ಷ. ಅವರು ಈಗ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಯಾವುದೇ ಸಂದರ್ಭದಲ್ಲಿ ಅವರು ಮಾಧ್ಯಮಗಳ ಎದುರು ಬಂದು ಮಾತನಾಡಿಲ್ಲ. ಈ ಬಗ್ಗೆ ಅವರು ಸ್ಪಷ್ಟನೆ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
View this post on Instagram
ಇದನ್ನೂ ಓದಿ: ನಿಜಕ್ಕೂ ಐಶ್ವರ್ಯಾ ರೈ ವಿರುದ್ಧ ದ್ವೇಷ ಸಾಧಿಸಿದ್ದರಾ ಸಲ್ಲು? ತಮ್ಮ ಕೊಟ್ಟಿದ್ದ ಸ್ಪಷ್ಟನೆಯಲ್ಲಿ ಏನಿತ್ತು?
ಸದ್ಯ ಐಶ್ವರ್ಯಾ ರೈ ಅವರು ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಪೊನ್ನಿಯಿನ್ ಸೆಲ್ವನ್ 2’ ಚಿತ್ರದಲ್ಲಿ. ಅವರ ಗ್ಲಾಮರ್ ಇತ್ತೀಚೆಗೆ ಕಡಿಮೆ ಆಗಿದೆ. ಇನ್ನು ಅಭಿಷೇಕ್ ಬಚ್ಚನ್ ಅವರು ವಿಲನ್ ಪಾತ್ರ ಒಪ್ಪಿಕೊಳ್ಳುತ್ತಿದ್ದಾರಂತೆ. ಶಾರುಖ್ ಖಾನ್ ಹಾಗೂ ಸುಹಾನಾ ಖಾನ್ ನಟನೆಯ ‘ಕಿಂಗ್’ ಚಿತ್ರದಲ್ಲಿ ಅವರು ವಿಲನ್ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.