Shah Rukh Khan: ಬಿಡುಗಡೆಗೂ ಮುನ್ನವೇ ‘ಜವಾನ್​’ ಚಿತ್ರವನ್ನು ಬ್ಲಾಕ್​ ಬಸ್ಟರ್​ ಎಂದು ಘೋಷಿಸಿದ ಕರಣ್​ ಜೋಹರ್​

Jawan Movie Prevue: ಶಾರುಖ್​ ಖಾನ್​ ನಟನೆಯ ‘ಜವಾನ್’ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳ ವಲಯದಲ್ಲೂ ಹೈಪ್​ ಸೃಷ್ಟಿ ಆಗಿದೆ.

Shah Rukh Khan: ಬಿಡುಗಡೆಗೂ ಮುನ್ನವೇ ‘ಜವಾನ್​’ ಚಿತ್ರವನ್ನು ಬ್ಲಾಕ್​ ಬಸ್ಟರ್​ ಎಂದು ಘೋಷಿಸಿದ ಕರಣ್​ ಜೋಹರ್​
ಕರಣ್​ ಜೋಹರ್​, ಶಾರುಖ್​ ಖಾನ್​

Updated on: Jul 10, 2023 | 3:59 PM

ಬಾಲಿವುಡ್​ ನಟ ಶಾರುಖ್​ ಖಾನ್​ ಅವರ ಅಭಿಮಾನಿಗಳಿಗೆ ಇಂದು (ಜುಲೈ 10) ಹಬ್ಬ. ಯಾಕೆಂದರೆ, ‘ಜವಾನ್​’ ಸಿನಿಮಾದ ಪ್ರಿವ್ಯೂ (Jawan Prevue) ವಿಡಿಯೋ ಬಿಡುಗಡೆ ಆಗಿ ಧೂಳೆಬ್ಬಿಸುತ್ತಿದೆ. ಈ ವಿಡಿಯೋದಲ್ಲಿ ಭರ್ಜರಿ ಆ್ಯಕ್ಷನ್​ ಕಾಣಿಸಿದೆ. ಖಡಕ್​ ಡೈಲಾಗ್​ಗಳು ಕೇಳಿಸಿವೆ. ಶಾರುಖ್​ ಖಾನ್​ (Shah Rukh Khan) ಜೊತೆ ದೊಡ್ಡ ದೊಡ್ಡ ಕಲಾವಿದರು ಕಾಣಿಸಿಕೊಂಡಿದ್ದಾರೆ. ಯೂಟ್ಯೂಬ್​ನಲ್ಲಿ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಮಿಲಿಯನ್​ಗಟ್ಟಲೆ ವೀಕ್ಷಣೆ ಕಂಡಿದೆ. ನಿರ್ದೇಶಕ ಅಟ್ಲಿ ಅವರ ಕೆಲಸಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಶಾರುಖ್​ ಖಾನ್​ ಅವರ ಆಪ್ತರಾದ ಕರಣ್​ ಜೋಹರ್​ (Karan Johar) ಅವರಿಗೂ ‘ಜವಾನ್​’ ಪ್ರಿವ್ಯೂ ವಿಡಿಯೋ ಇಷ್ಟ ಆಗಿದೆ. ಹಾಗಾಗಿ ಅವರು ಈ ಚಿತ್ರವನ್ನು ಬ್ಲಾಕ್​ ಬಸ್ಟರ್​ ಎಂದು ಕರೆದಿದ್ದಾರೆ.

ಶಾರುಖ್​ ಖಾನ್​ ಅವರಿಗೆ ಒಂದಷ್ಟು ವರ್ಷಗಳ ಕಾಲ ಗೆಲುವು ಎಂಬುದು ಮರೀಚಿಕೆ ಆಗಿತ್ತು. ಆದರೆ ಈ ವರ್ಷ ಆರಂಭದಲ್ಲಿ ‘ಪಠಾಣ್​’ ಸಿನಿಮಾ ಮೂಲಕ ಅವರು ಭರ್ಜರಿಯಾಗಿ ಕಮ್​ಬ್ಯಾಕ್​ ಮಾಡಿದರು. ಆ ಗೆಲುವನ್ನು ಮುಂದುವರಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಆ ಕೆಲಸವನ್ನು ‘ಜವಾನ್’ ಸಿನಿಮಾ ಮಾಡಲಿದೆ ಎಂಬ ಭರವಸೆ ಮೂಡಿದೆ. ಶಾರುಖ್​ ಖಾನ್​ ಅವರ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾದಿದ್ದಾರೆ. ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳ ವಲಯದಲ್ಲೂ ಹೈಪ್​ ಸೃಷ್ಟಿ ಆಗಿದೆ. ಅದಕ್ಕೆ ಕರಣ್​ ಜೋಹರ್​ ಅವರ ಮಾತೇ ಸಾಕ್ಷಿ.

‘ಜವಾನ್​’ ಸಿನಿಮಾದ ಪ್ರಿವ್ಯೂ ನೋಡಿ ಖುಷಿಪಟ್ಟಿರುವ ಕರಣ್​ ಜೋಹರ್​ ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಭಾಯ್​.. ಇದು ದೊಡ್ಡ ಬ್ಲಾಕ್​ ಬಸ್ಟರ್​ ಆಗಲಿದೆ. ಅಟ್ಲಿ ಅವರೇ.. ನೀವು ಮತ್ತೆ ಸಾಧಿಸಿದ್ದೀರಿ. ವಾವ್​.. ಕಾತುರ ತಾಳಲಾಗುತ್ತಿಲ್ಲ’ ಎಂದು ಕರಣ್​ ಜೋಹರ್​ ಬರೆದುಕೊಂಡಿದ್ದಾರೆ. ಕರಣ್​ ಜೋಹರ್​ ಮತ್ತು ಶಾರುಖ್​ ಖಾನ್​ ನಡುವೆ ಹಲವು ವರ್ಷಗಳಿಂದ ಸ್ನೇಹ ಇದೆ. ಇಬ್ಬರೂ ಜೊತೆಯಾಗಿ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.

Karan Johar: ‘ನೀವು ಸಲಿಂಗ ಕಾಮಿ ತಾನೇ?’: ನೇರ ಪ್ರಶ್ನೆಗೆ ಉತ್ತರ ನೀಡಿದ ಕರಣ್​ ಜೋಹರ್​

ಶಾರುಖ್​ ಖಾನ್​ ಜೊತೆ ‘ಜವಾನ್​’ ಸಿನಿಮಾದಲ್ಲಿ ನಯನತಾರಾ, ದೀಪಿಕಾ ಪಡುಕೋಣೆ, ವಿಜಯ್​ ಸೇತುಪತಿ ಮುಂತಾದವರು ನಟಿಸಿದ್ದಾರೆ. ಪ್ರಿವ್ಯೂ ವಿಡಿಯೋದಲ್ಲಿ ಶಾರುಖ್​ ಅವರ ಲುಕ್​ಗಳು ಹೈಲೈಟ್​ ಆಗಿವೆ. ಬೋಳು ತಲೆಯ ಗೆಟಪ್​ನಲ್ಲೂ ಅವರು ಗಮನ ಸೆಳೆಯುತ್ತಿದ್ದಾರೆ. ಈ ಚಿತ್ರದಲ್ಲಿ ಅವರಿಗೆ ನೆಗೆಟಿವ್​ ಶೇಡ್​ನ ಪಾತ್ರ ಇದೆ ಎಂಬುದಕ್ಕೆ ಪ್ರಿವ್ಯೂ ವಿಡಿಯೋದಲ್ಲಿ ಸುಳಿವು ಸಿಕ್ಕಿದೆ. ಸೆಪ್ಟೆಂಬರ್​ 7ರಂದು ‘ಜವಾನ್​’ ಸಿನಿಮಾ ರಿಲೀಸ್​ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:58 pm, Mon, 10 July 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us