AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dunki OTT: ‘ಡಂಕಿ’ ಒಟಿಟಿ ಹಕ್ಕುಗಳಿಗೆ ಭರ್ಜರಿ ಬೇಡಿಕೆ; 155 ಕೋಟಿಗೆ ಶಾರುಖ್​ ಖಾನ್​ ಸಿನಿಮಾ ಸೇಲ್​?

Shah Rukh Khan: ಡಿಸೆಂಬರ್​ 22ರಂದು ಚಿತ್ರಮಂದಿರಗಳಲ್ಲಿ ‘ಡಂಕಿ’ ಸಿನಿಮಾ ಬಿಡುಗಡೆ ಆಗಲಿದೆ. ಆದರೆ ಒಟಿಟಿ ಡೀಲ್​ ಈಗಲೇ ಮುಗಿದಿದೆ. ಇದರಿಂದ ನಿರ್ಮಾಪಕರಿಗೆ ಭರ್ಜರಿ ಲಾಭ ಆಗಿದೆ.

Dunki OTT: ‘ಡಂಕಿ’ ಒಟಿಟಿ ಹಕ್ಕುಗಳಿಗೆ ಭರ್ಜರಿ ಬೇಡಿಕೆ; 155 ಕೋಟಿಗೆ ಶಾರುಖ್​ ಖಾನ್​ ಸಿನಿಮಾ ಸೇಲ್​?
‘ಡಂಕಿ’ ಪೋಸ್ಟರ್​, ಶಾರುಖ್​ ಖಾನ್​
ಮದನ್​ ಕುಮಾರ್​
|

Updated on: Jul 09, 2023 | 9:22 AM

Share

ದಿನದಿಂದ ದಿನಕ್ಕೆ ಶಾರುಖ್​ ಖಾನ್​ (Shah Rukh Khan) ಅವರ ಬೇಡಿಕೆ ಹೆಚ್ಚಾಗುತ್ತಿದೆ. ‘ಪಠಾಣ್​’ ಸಿನಿಮಾ ಬಳಿಕ ಅವರ ಚಾರ್ಮ್​ ಹೆಚ್ಚಿದೆ. ಶಾರುಖ್​ ಜೊತೆ ಸಿನಿಮಾ ಮಾಡಲು ದೊಡ್ಡ ದೊಡ್ಡ ನಿರ್ಮಾಪಕರು ಮತ್ತು ನಿರ್ದೇಶಕರು ಕಾಯುತ್ತಿದ್ದಾರೆ. ಆದರೆ ಸಿನಿಮಾ ಒಪ್ಪಿಕೊಳ್ಳುವಲ್ಲಿ ಶಾರುಖ್​ ಅವಸರ ಮಾಡುತ್ತಿಲ್ಲ. ಈಗ ಅವರು ನಿರ್ದೇಶಕ ರಾಜ್​ಕುಮಾರ್​ ಹಿರಾನಿ (Rajkumar Hirani) ಜೊತೆ ‘ಡಂಕಿ’ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಒಟಿಟಿ ರೈಟ್ಸ್​ ಮಾರಾಟದ ಬಗ್ಗೆ ಒಂದು ಗಾಸಿಪ್​ ಹರಿದಾಡುತ್ತಿದೆ. ‘ಬಾಲಿವುಡ್​ ಹಂಗಾಮಾ’ ವರದಿ ಮಾಡಿರುವ ಪ್ರಕಾರ ಶೂಟಿಂಗ್​ ಮುಗಿಯುವುದಕ್ಕೂ ಮುನ್ನವೇ ‘ಡಂಕಿ’ (Dunki Movie) ಚಿತ್ರದ ಒಟಿಟಿ ಹಕ್ಕುಗಳು ಸೇಲ್​ ಆಗಿವೆ. ಅದು ಕೂಡ ಬರೋಬ್ಬರಿ 155 ಕೋಟಿ ರೂಪಾಯಿಗೆ ಎಂದು ಹೇಳಲಾಗುತ್ತಿದೆ.

ಒಟಿಟಿ ಸಂಸ್ಥೆಗಳ ನಡುವೆ ಪೈಪೋಟಿ ಹೆಚ್ಚಿದೆ. ಪ್ರೇಕ್ಷಕರಿಗೆ ಹೊಸ ಸಿನಿಮಾಗಳನ್ನು ನೀಡಲು ‘ಜಿಯೋ ಸಿನಿಮಾ’ ಸಂಸ್ಥೆ ಎಲ್ಲಿಲ್ಲದ ಪ್ರಯತ್ನ ನಡೆಸುತ್ತಿದೆ. ಶಾರುಖ್​ ಖಾನ್​ ನಟನೆಯ ‘ಡಂಕಿ’ ಚಿತ್ರದ ಒಟಿಟಿ ಹಕ್ಕುಗಳು ಈ ಸಂಸ್ಥೆಯ ಪಾಲಾಗಿದೆ ಎಂಬ ಮಾತು ಕೇಳಿಬಂದಿದೆ. 155 ಕೋಟಿ ರೂಪಾಯಿ ನೀಡಿ ಒಟಿಟಿ ಪ್ರಸಾರ ಹಕ್ಕುಗಳನ್ನು ಖರೀದಿಸಲಾಗಿದೆ. ಆದರೆ ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಸದ್ಯಕ್ಕೆ ಇದು ಅಂತೆ-ಕಂತೆಗಳ ಹಂತದಲ್ಲೇ ಇದೆ.

ಇದನ್ನೂ ಓದಿ: ಅಪಘಾತದ ವದಂತಿ ಬೆನ್ನಲ್ಲೇ ಶಾರುಖ್​ ಖಾನ್​ ಬಗ್ಗೆ ಇನ್ನೊಂದು ಗಾಸಿಪ್​; ಕೂಡಲೇ ಸ್ಪಷ್ಟನೆ ನೀಡಿದ ಕರಣ್​ ಜೋಹರ್​

ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಕ್ಲಾಸ್​ ಸಿನಿಮಾಗಳನ್ನು ಮಾಡಿ ಅವರು ಅಪಾರ ಖ್ಯಾತಿ ಗಳಿಸಿದ್ದಾರೆ. ‘ಮುನ್ನಾಭಾಯ್​ ಎಂಬಿಬಿಎಸ್​​’, ‘3 ಈಡಿಯಟ್ಸ್​’, ‘ಪಿಕೆ’, ‘ಸಂಜು’ ಚಿತ್ರಗಳ ಮೂಲಕ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ. ಮೊದಲ ಬಾರಿಗೆ ‘ಡಂಕಿ’ ಸಿನಿಮಾದಲ್ಲಿ ಶಾರುಖ್​ ಖಾನ್​ ಜೊತೆ ರಾಜ್​ಕುಮಾರ್​ ಹಿರಾನಿ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: ಶೂಟಿಂಗ್​​ ವೇಳೆ ಅವಘಡ; ಶಾರುಖ್​​​​ ಖಾನ್​​​ ಆಸ್ಪತ್ರೆಗೆ ದಾಖಲು

ಈ ವರ್ಷ ಡಿಸೆಂಬರ್​ 22ರಂದು ಚಿತ್ರಮಂದಿರಗಳಲ್ಲಿ ‘ಡಂಕಿ’ ಸಿನಿಮಾ ಬಿಡುಗಡೆ ಆಗಲಿದೆ. ಆದರೆ ಒಟಿಟಿ ಡೀಲ್​ ಈಗಲೇ ಮುಗಿದಿದೆ. ಇದರಿಂದ ನಿರ್ಮಾಪಕರಿಗೆ ಭರ್ಜರಿ ಲಾಭ ಆಗಿದೆ. ಇನ್ನು, ನಿರ್ದೇಶಕ ಅಟ್ಲಿ ಜೊತೆ ಶಾರುಖ್​ ಖಾನ್ ಅವರು ‘ಜವಾನ್​’ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ ಸೆಪ್ಟೆಂಬರ್​ 7ರಂದು ಬಿಡುಗಡೆ ಆಗಲಿದೆ. ಬಾಕ್ಸ್​ ಆಫೀಸ್​ನಲ್ಲಿ ‘ಜವಾನ್​’ ಕೂಡ ಭರ್ಜರಿ ಕಮಾಯಿ ಮಾಡುವ ಸೂಚನೆ ಸಿಕ್ಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ