ಅನುಷ್ಕಾ ಶರ್ಮಾ ಏಕೋ ಇತ್ತೀಚೆಗೆ ಚಿತ್ರರಂಗದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಅವರು ಮಕ್ಕಳ ಆರೈಕೆಯಲ್ಲಿ ಬ್ಯುಸಿ ಇದ್ದಾರೆ. ಅವರು ‘ಯೇ ದಿಲ್ ಹೇ ಮುಷ್ಕಿಲ್’ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾನ ನಿರ್ದೇಶನ ಮಾಡಿದ್ದು ಕರಣ್ ಜೋಹರ್. ಈ ಚಿತ್ರದಲ್ಲಿ ಅವರು ರಣಬೀರ್ ಕಪೂರ್, ಐಶ್ವರ್ಯಾ ರೈ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರಿ. ‘ಕಾಫಿ ವಿತ್ ಕರಣ್’ ವೇದಿಕೆ ಮೇಲೆ ಕರಣ್ ಜೋಹರ್ ಅವರು ಒಂದು ಶಾಕಿಂಗ್ ವಿಚಾರ ಹೇಳಿದ್ದರು. ‘ಯೇ ದಿಲ್ ಹೇ ಮುಷ್ಕಿಲ್’ ಚಿತ್ರದ ಶೂಟ್ ವೇಳೆ ಅನುಷ್ಕಾ ಮೇಲೆ ಕ್ರಶ್ ಆಗಿತ್ತು ಎಂದು ಹೇಳಿಕೊಂಡಿದ್ದರು.
ಕತ್ರಿನಾ, ಅನುಷ್ಕಾ ‘ಕಾಫಿ ವಿತ್ ಕರಣ್’ ಶೋಗೆ ಬಂದಿದ್ದರು. ಈ ವೇಳೆ ಕರಣ್ ಅವರು ಈ ವಿಚಾರ ಹೇಳಿದರು. ಇದನ್ನು ಕೇಳಿದ ಅನುಷ್ಕಾ ಶಾಕ್ ಆದರು. ‘ನನ್ನ ಮೇಲೆ ಕ್ರಶ್ ಇದೆ ಎಂದು ಹೇಳಿದ್ರಾ’ ಎಂಬುದಾಗಿ ಕರಣ್ ಜೋಹರ್ ಬಳಿ ಅನುಷ್ಕಾ ಮತ್ತೊಮ್ಮೆ ಕೇಳಿದರು. ‘ಹೌದು, ಸಿನಿಮಾ ಮಾಡುವಾಗ ಸಂಪೂರ್ಣ ನಿಮ್ಮ ಮೇಲೆ ಕ್ರಶ್’ ಇತ್ತು ಎಂದಿದ್ದರು.
‘ಇದನ್ನು ಕೇಳಿ ಖುಷಿ ಆಯಿತು. ಇದನ್ನು ಹೇಳಲೇಬೇಕು. ನನ್ನಿಂದಾಗಿ ಒಬ್ಬರ ಮೇಲೆ ಕ್ರಶ್ ಆಗುತ್ತದೆಯಲ್ಲ’ ಎಂದು ಅನುಷ್ಕಾ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಕರಣ್ ಜೋಹರ್ಗೆ ಎಷ್ಟೇ ಕ್ರಶ್ ಆದರೂ ಅವರು ಮದುವೆ ಆಗುತ್ತಿಲ್ಲ. ಇದಕ್ಕೆ ಕಾರಣ ಗೊತ್ತಿಲ್ಲ.
ಇದನ್ನೂ ಓದಿ:ಕರಣ್ ಜೋಹರ್ ನಿರ್ಮಾಣದ ಸಿನಿಮಾದಲ್ಲಿ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್
ಅನುಷ್ಕಾ ಅವರು ಸಿನಿಮಾಗಳಿಂದ ದೂರ ಇದ್ದು ಸ್ವಲ್ಪ ಸಮಯ ಕಳೆದಿದೆ. 2017ರ ಡಿಸೆಂಬರ್ನಲ್ಲಿ ಇವರು ವಿವಾಹ ಆದರು. 2021ರಲ್ಲಿ ವಮಿಕಾ ಜನಿಸಿದಳು. ಈಗ ಗಂಡು ಮಗು ಜನಿಸಿದ್ದು, ಅಕಾಯ್ ಎಂದು ನಾಮಕರಣ ಮಾಡಲಾಗಿದೆ. ಅನುಷ್ಕಾ ಶರ್ಮಾ ಅವರು ‘ಚಕ್ದಾ ಎಕ್ಸ್ಪ್ರೆಸ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಜಿಲಾನ್ ಗೋಸ್ವಾಮಿ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಈ ವರ್ಷ ನೆಟ್ಫ್ಲಿಕ್ಸ್ ಮೂಲಕ ಪ್ರಸಾರ ಕಾಣಬೇಕಿದೆ. ಈ ಸಿನಿಮಾ ನಿರ್ಮಾಣ ಮಾಡಿದ್ದು ಅನುಷ್ಕಾ ಶರ್ಮಾ ಸಹೋದರ ಕರ್ಣೇಶ್ ಶರ್ಮಾ. ನೆಟ್ಫ್ಲಿಕ್ಸ್ ಹಾಗೂ ಕರ್ಣೇಶ್ ಮಧ್ಯೆ ಕಿರಿಕ್ ಆಗಿದೆ ಎನ್ನಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:19 pm, Wed, 2 October 24