Katrina Kaif: ಮದುವೆಗೂ ಮುನ್ನ ವಿಕ್ಕಿ ಕೌಶಲ್​ಗೆ ಒಂದೇ ಒಂದು ಷರತ್ತು ವಿಧಿಸಿದ್ದರಂತೆ ಕತ್ರಿನಾ; ಏನದು?

Vicky kaushal: ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಜೋಡಿ ಸದ್ಯ ಎಲ್ಲರ ಮನಗೆದ್ದಿದೆ. ಆದರೆ ಮದುವೆಗೂ ಮುನ್ನ ಕತ್ರಿನಾ ಒಂದೇ ಒಂದು ಷರತ್ತನ್ನು ಹಾಕಿದ್ದರಂತೆ. ಏನದು?

Katrina Kaif: ಮದುವೆಗೂ ಮುನ್ನ ವಿಕ್ಕಿ ಕೌಶಲ್​ಗೆ ಒಂದೇ ಒಂದು ಷರತ್ತು ವಿಧಿಸಿದ್ದರಂತೆ ಕತ್ರಿನಾ; ಏನದು?
ವಿಕ್ಕಿ ಕೌಶಲ್, ಕತ್ರಿನಾ ಕೈಫ್
Updated By: shivaprasad.hs

Updated on: Dec 15, 2021 | 12:19 PM

ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಜೋಡಿ ಸದ್ಯ ಎಲ್ಲರ ನೆಚ್ಚಿನ ಜೋಡಿಗಳಲ್ಲಿ ಒಂದಾಗಿದೆ. ಅಲ್ಲದೇ ಮದುವೆಯ ಸಂದರ್ಭದ ಸುಂದರ ಚಿತ್ರಗಳು, ಈರ್ವರೂ ಪರಸ್ಪರ ಗೌರವದಿಂದ ಕಾಣುತ್ತಿರುವುದು, ಕತ್ರಿನಾ ಕುಟುಂಬ.. ಈ ಎಲ್ಲಾ ಕಾರಣದಿಂದ ಈ ಜೋಡಿ ಕೇವಲ ಯುವಕರಲ್ಲದೇ ಹಿರಿಯರಿಗೂ ಪ್ರಿಯವಾಗಿದೆ. ಎಲ್ಲರೂ ಈ ಜೋಡಿ ನೂರ್ಕಾಲ ಬಾಳಲಿ ಎಂದು ಹಾರೈಸುತ್ತಿದ್ದಾರೆ. ವಾಸ್ತವವಾಗಿ ಕತ್ರಿನಾಗೆ ಜೀವನದ ಈ ಹೊಸ ಘಟ್ಟಕ್ಕೆ ತೆರೆದುಕೊಳ್ಳುವುದು ಅಷ್ಟು ಸುಲಭದ್ದಾಗಿರಲಿಲ್ಲವಂತೆ. ಈ ಕುರಿತು ಅವರ ಆಪ್ತರೊಬ್ಬರು ಮಾತನಾಡಿದ್ದು, ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ವಿವಾಹಕ್ಕೂ ಮುನ್ನ ಕತ್ರಿನಾ ವಿಕ್ಕಿ ಕೌಶಲ್​ಗೆ ಒಂದೇ ಒಂದು ಷರತ್ತನ್ನು ವಿಧಿಸಿದ್ದರು. ಅದನ್ನು ಒಪ್ಪಿದರೆ ಮಾತ್ರ ಮುಂದಿನ ಯೋಚನೆ ಎಂದಿದ್ದರಂತೆ. ವಿಕ್ಕಿ ಕೌಶಲ್ ಅದನ್ನು ಒಪ್ಪಿದ್ದೂ ಅಲ್ಲದೇ, ಶಹಬ್ಬಾಸ್ ಎನ್ನುವಂತೆ ಮಾತನ್ನು ಪೂರೈಸಿದ್ದಾರೆ. ಆದ್ದರಿಂದಲೇ ಕತ್ರಿನಾ ಬಹಳಷ್ಟು ಖುಷಿಯಾಗಿದ್ದಾರೆ ಎಂದಿದ್ದಾರೆ ಆಪ್ತಮೂಲಗಳು. ಹಾಗಾದರೆ ಕತ್ರಿನಾ ವಿಧಿಸಿದ್ದ ಷರತ್ತೇನು? ಮುಂದೆ ಓದಿ.

ಖಾಸಗಿ ಮಾಧ್ಯಮವೊಂದು ಕತ್ರಿನಾ ಆಪ್ತರ ಮಾತುಗಳನ್ನು ಉಲ್ಲೇಖಿಸಿದೆ. ಕತ್ರಿನಾ ಜೊತೆ ಎರಡು ತಿಂಗಳು ಸುತ್ತಾಡಿದಾಗಲೇ ವಿಕ್ಕಿಗೆ ತಾನು ಮುಂದಿನ ಜೀವನವನ್ನು ಅವರೊಂದಿಗೇ ಕಳೆಯಬೇಕು ಎಂದು ಸ್ಪಷ್ಟವಾಗಿ ಅನಿಸಿತ್ತಂತೆ. ಆದರೆ ಕತ್ರಿನಾ ಇನ್ನೂ ಆ ಬಗ್ಗೆ ಗಂಭೀರವಾಗಿ ಯೋಚಿಸಿರಲಿಲ್ಲವಂತೆ. ರಣಬೀರ್ ಕಪೂರ್ ಜೊತೆಗಿನ ಬ್ರೇಕಪ್ ಆಕೆಯನ್ನು ಸಾಕಷ್ಟು ಘಾಸಿಗೊಳಿಸಿತ್ತು. ಆದ್ದರಿಂದಲೇ ವಿಕ್ಕಿಯನ್ನು ಇಷ್ಟಪಟ್ಟರೂ, ಕತ್ರಿನಾ ಸಮಯ ತೆಗೆದುಕೊಳ್ಳಲು ಬಯಸಿದ್ದರು ಎಂದು ಕತ್ರಿನಾ ಆಪ್ತರು ಹೇಳಿದ್ದಾರೆ.

ಆದರೆ ವಿಕ್ಕಿ ಕೌಶಲ್ ಪಟ್ಟು ಬಿಡಲೇ ಇಲ್ಲ. ಕತ್ರಿನಾರ ಒಪ್ಪಿಗೆಗೆ ಅನವರತ ಪ್ರಯತ್ನಪಟ್ಟರು. ಕೊನೆಗೆ ಕತ್ರಿನಾ ‘ಎಸ್’ ಅನ್ನುವ ಮುನ್ನ ಒಂದೇ ಒಂದು ಕಂಡೀಷನ್ ಮುಂದಿಟ್ಟರು. ಅದೇನೆಂದರೆ ‘ಕತ್ರಿನಾ ಕುಟುಂಬದೊಂದಿಗೆ ಕೂಡ ಅವರೊಂದಿಗೆ ನಡೆದುಕೊಳ್ಳುವಷ್ಟೇ ಗೌರವ, ಪ್ರೀತಿಯೊಂದಿಗೆ ನಡೆದುಕೊಳ್ಳಬೇಕು’ ಎಂದು. ಇದಕ್ಕೆ ಸಂಪೂರ್ಣ ಒಪ್ಪಿದ ವಿಕ್ಕಿ ಕೌಶಲ್, ಕತ್ರಿನಾ ಕುಟುಂಬದೊಂದಿಗೆ ಸಂಪೂರ್ಣ ಬೆರೆತರು.

ವಿಕ್ಕಿ ಕತ್ರಿನಾ ಕುಟುಂಬಕ್ಕೆ ಎಷ್ಟು ಆಪ್ತರಾದರೆಂದರೆ, ಮದುವೆಗೂ ಹೆಚ್ಚಿನವರನ್ನು ಭೇಟಿಯಾಗದಿದ್ದರೂ, ಎಲ್ಲರೂ ಮೊದಲಿನಿಂದಲೂ ಪರಿಚಯವೇನೋ ಅನ್ನುವಷ್ಟು ಗೌರವ, ಪ್ರೀತಿಯಿಂದ ನಡೆದುಕೊಂಡರು. ಇದು ಕತ್ರಿನಾಗೆ ಬಹಳ ಸಂತಸ ತಂದಿದೆ ಎಂದು ಕತ್ರಿನಾ ಆಪ್ತರು ತಿಳಿಸಿದ್ದಾರೆ. ಈ ಜೋಡಿ ಪರಸ್ಪರ ಗೌರವ ಹಾಗೂ ಪ್ರೀತಿಯಿಂದ ಇರುವುದನ್ನು ನೋಡಿದ ಅಭಿಮಾನಿಗಳೂ ಸಖತ್ ಖುಷಿಯಾಗಿದ್ದಾರೆ.

ಇದನ್ನೂ ಓದಿ:

ನಾಲ್ಕೇ ದಿನಕ್ಕೆ ಹನಿಮೂನ್​ ಮುಗಿಸಿ ವಾಪಸ್​ ಬಂದ ವಿಕ್ಕಿ ಕೌಶಲ್​-ಕತ್ರಿನಾ ಕೈಫ್​; ಕಾರಣ ಏನು?

ಬಾಲಿವುಡ್​ ನಟಿ ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ ಪ್ರೀವೆಡ್ಡಿಂಗ್​ ಫೋಟೋಗಳು ಇಲ್ಲಿವೆ