Alia Bhatt: ಮೊದಲ ಬಾರಿಗೆ ಅಮೆರಿಕದ ಫ್ಯಾಷನ್ ಹಬ್ಬದಲ್ಲಿ ಮಿಂಚಿದ ಆಲಿಯಾ ಭಟ್; ಪ್ರೀತಿ ಕಂಡು ನಟಿ ಭಾವುಕ

Met Gala 2023: ಮೆಟ್​ ಗಾಲಾ ಎಂಬುದು ಪ್ರತಿ ವರ್ಷ ನ್ಯೂಯಾರ್ಕ್​ನಲ್ಲಿ ನಡೆಯುವ ಒಂದು ಫ್ಯಾಷನ್​ ಹಬ್ಬ. ಈ ಸಮಾರಂಭದಲ್ಲಿ ಜಗತ್ತಿನ ಹಲವು ಖ್ಯಾತ ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ. ಇಲ್ಲಿ ಆಲಿಯಾ ಭಟ್  ಕ್ಯೂಟ್ ಆಗಿ ಕಾಣಿಸಿಕೊಂಡರು.

Alia Bhatt: ಮೊದಲ ಬಾರಿಗೆ ಅಮೆರಿಕದ ಫ್ಯಾಷನ್ ಹಬ್ಬದಲ್ಲಿ ಮಿಂಚಿದ ಆಲಿಯಾ ಭಟ್; ಪ್ರೀತಿ ಕಂಡು ನಟಿ ಭಾವುಕ
ಆಲಿಯಾ

Updated on: May 02, 2023 | 8:00 AM

ಮುಖ್ಯಾಂಶಗಳು

  • ಅದ್ದೂರಿಯಾಗಿ ನಡೆದ ಮೆಟ್​ ಗಲಾ 2023
  • ಸಮಾರಂಭದಲ್ಲಿ ಮಿಂಚಿದ ಆಲಿಯಾ ಭಟ್
  • ಫೋಟೋ ಕಂಡು ಫಿದಾ ಆದ ಫ್ಯಾನ್ಸ್

ನಟಿ ಆಲಿಯಾ ಭಟ್ (Alia Bhatt) ಅವರು ಹಲವು ವರ್ಷಗಳಿಂದ ಬಾಲಿವುಡ್​ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ವೇದಿಕೆ ಮೇಲೆ ಅವರು ಮಿಂಚಿದ್ದಾರೆ. ಇದೇ ಮೊದಲ ಬಾರಿಗೆ ಮೆಟ್​ ಗಾಲಾ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ಮೆಟ್​ ಗಾಲಾ (Met Gala) ಕಾರ್ಯಕ್ರಮ ಮೇ 1ರಂದು ಅಮೆರಿಕದ ನ್ಯೂಯಾರ್ಕ್ (New York) ​ ನಗರದಲ್ಲಿ ನಡೆದಿದೆ. ಹೀಗಾಗಿ, ಅವರಿಗೆ ಇದು ತುಂಬಾನೇ ವಿಶೇಷ ಎನಿಸಿತ್ತು. ಎಲ್ಲರೂ ಪ್ರೀತಿಯಿಂದ ‘ಆಲಿಯಾ ಆಲಿಯಾ’ ಎಂದು ಕೂಗುವಾಗ ಅವರು ಭಾವುಕರಾದರು. ಈ ವಿಡಿಯೋ ವೈರಲ್ ಆಗಿದೆ. ಆಲಿಯಾ ಡ್ರೆಸ್ ಅನೇಕರಿಗೆ ಇಷ್ಟ ಆಗಿದೆ.

ಮೆಟ್​ ಗಾಲಾ ಎಂಬುದು ಪ್ರತಿ ವರ್ಷ ನ್ಯೂಯಾರ್ಕ್​ನಲ್ಲಿ ನಡೆಯುವ ಒಂದು ಫ್ಯಾಷನ್​ ಹಬ್ಬ. ಈ ಸಮಾರಂಭದಲ್ಲಿ ಜಗತ್ತಿನ ಹಲವು ಖ್ಯಾತ ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ. ಈ ಬಾರಿ ಅದ್ದೂರಿಯಾಗಿಯೇ ಮೆಟ್​ ಗಾಲಾ ಆಯೋಜನೆಗೊಂಡಿದೆ. ಈ ಉತ್ಸವದಲ್ಲಿ ಸೆಲೆಬ್ರಿಟಿಗಳು ಧರಿಸುವ ಕಾಸ್ಟ್ಯೂಮ್​ಗಳು ಸಖತ್​ ಗಮನ ಸೆಳೆಯುತ್ತವೆ. ಇಲ್ಲಿ ಚಿತ್ರ ವಿಚಿತ್ರ ಬಟ್ಟೆಗಳನ್ನು ಧರಿಸಿ ಸೆಲೆಬ್ರಿಟಿಗಳು ಹೆಜ್ಜೆ ಹಾಕುತ್ತಾರೆ. ಆಲಿಯಾ ಭಟ್  ಕ್ಯೂಟ್ ಆಗಿ ಕಾಣಿಸಿಕೊಂಡರು.

ಆಲಿಯಾ ಭಟ್ ಅವರನ್ನು ನೋಡುತ್ತಿದ್ದಂತೆ ಅಲ್ಲಿದ್ದ ಅಭಿಮಾನಿಗಳು ‘ಆಲಿಯಾ ಐ ಲವ್​ ಯೂ’ ಎಂದು ಕೂಗಿದ್ದಾರೆ. ಇದಕ್ಕೆ ಆಲಿಯಾ ಭಟ್ ಉತ್ತರಿಸಿದ್ದಾರೆ. ಫ್ಲೈಯಿಂಗ್ ಕಿಸ್ ಕೊಟ್ಟ ಅವರು, ‘ಐ ಲವ್​ ಯೂ ಟೂ’ ಎಂದಿದ್ದಾರೆ. ಈ ವಿಡಿಯೋ ಕೂಡ ವೈರಲ್ ಆಗುತ್ತಿದೆ. ಆ ಕ್ಷಣ ಆಲಿಯಾಗೆ ತುಂಬಾ ವಿಶೇಷವಾಗಿತ್ತು.


ಆಲಿಯಾ ಭಟ್ ಅವರು ಈಗ ಬಾಲಿವುಡ್​ಗೆ ಮಾತ್ರ ಸೀಮಿತ ಆಗಿಲ್ಲ. ಅವರು ಹಾಲಿವುಡ್ ಚಿತ್ರ ಕೂಡ ಮಾಡಿದ್ದಾರೆ. ‘ಹಾರ್ಟ್ ಆಫ್​ ಸ್ಟೋನ್’ ಹೆಸರಿನ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿ ಬಂದಿದ್ದಾರೆ. ಈ ಸಿನಿಮಾ ಶೀಘ್ರದಲ್ಲೇ ರಿಲೀಸ್ ಆಗಲಿದೆ.

ಇದನ್ನೂ ಓದಿ: ಫಿಲ್ಮ್​ಫೇರ್​ನಲ್ಲಿ ಹತ್ತು ಪ್ರಶಸ್ತಿ ಬಾಚಿದ ಆಲಿಯಾ ಭಟ್ ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ’

ಮದುವೆ, ಮಗು ಆದ ಬಳಿಕ ನಟಿಯರಿಗೆ ಅವಕಾಶ ಸಿಗುವುದಿಲ್ಲ ಎನ್ನುವ ಮಾತಿದೆ. ಕೆಲವರು ಇದನ್ನು ಒಪ್ಪುತ್ತಾರೆ. ಇನ್ನೂ ಕೆಲವರು ಇದನ್ನು ಸುಳ್ಳು ಮಾಡಿ ತೋರಿಸಿದ್ದಾರೆ. ಆಲಿಯಾ ಭಟ್ ಕೂಡ ಈ ವಿಚಾರವನ್ನು ಸುಳ್ಳು ಮಾಡಿದ್ದಾರೆ. ಮದುವೆ, ಮಗು ಆದ ಬಳಿಕವೂ ಜನಪ್ರಿಯ ಫ್ಯಾಷನ್​ ಹಬ್ಬದಲ್ಲಿ ಅವರು ಮಿಂಚಿದ್ದಾರೆ. ಶೀಘ್ರವೇ ಅವರು ನಟನೆಗೂ ಮರಳಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:25 am, Tue, 2 May 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us