ನಟಿ ಕತ್ರಿನಾ ಕೈಫ್ (Katrina Kaif) ಅವರಿಗೆ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ. ಬಾಲಿವುಡ್ನ ಸ್ಟಾರ್ ನಟರ ಸಿನಿಮಾಗಳಿಗೆ ಅವರು ನಾಯಕಿಯಾಗಿ ಮಿಂಚುತ್ತಿದ್ದಾರೆ. ಕಳೆದ ವರ್ಷ ಅಕ್ಷಯ್ ಕುಮಾರ್ ಜೊತೆ ನಟಿಸಿದ ‘ಸೂರ್ಯವಂಶಿ’ ಸಿನಿಮಾ ಸೂಪರ್ ಹಿಟ್ ಆಗಿದೆ. ಇಷ್ಟೆಲ್ಲ ಬೇಡಿಕೆ ಇರುವಾಗಲೇ ಅವರು ವಿಕ್ಕಿ ಕೌಶಲ್ (Vicky Kaushal) ಜೊತೆ ಮದುವೆ ಆಗಿದ್ದು ಅನೇಕರಿಗೆ ಅಚ್ಚರಿ ಮೂಡಿಸಿತು. ವಿವಾಹದ ಬಳಿಕ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರು ಮೊದಲ ಸಂಕ್ರಾಂತಿ (Sankranti 2022) ಹಬ್ಬವನ್ನು ಆಚರಿಸುತ್ತಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಕತ್ರಿನಾ ಅವರು ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದಾರೆ. ಗಂಡನ ಮನೆಯಲ್ಲಿ ಅವರು ಅಡುಗೆ ಕಲಿಯುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.
ಕತ್ರಿನಾ ಕೈಫ್ ಲಂಡನ್ ಮೂಲದವರು. ಹಿಂದಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ ನಂತರ ಅವರು ಭಾರತದಲ್ಲೇ ಸೆಟ್ಲ್ ಆಗಿದ್ದಾರೆ. ಈಗ ವಿಕ್ಕಿ ಕೌಶಲ್ ಅವರನ್ನು ಮದುವೆಯಾಗಿ ಪಂಜಾಬ್ನ ಸೊಸೆ ಆಗಿದ್ದಾರೆ. ಮದುವೆ ಬಳಿಕ ಅವರು ಪಂಜಾಬಿ ಸಂಪ್ರದಾಯವನ್ನು ಪಾಲಿಸಲು ಆರಂಭಿಸಿದ್ದಾರೆ. ಪಂಜಾಬಿ ಶೈಲಿಯ ಕೆಲವು ತಿನಿಸುಗಳನ್ನು ತಯಾರಿಸುವುದು ಹೇಗೆ ಎಂಬುದನ್ನು ಅವರು ಕಲಿಯುತ್ತಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.
ವಿಕ್ಕಿ ಕೌಶಲ್ ಅವರ ತಾಯಿ ವೀಣಾ ಕೌಶಲ್ ಅವರು ಕತ್ರಿನಾ ಕೈಫ್ಗೆ ಅಡುಗೆ ಹೇಳಿಕೊಡುತ್ತಿದ್ದಾರೆ. ರೆಸಿಪಿ ತಿಳಿದುಕೊಳ್ಳಲು ಯೂಟ್ಯೂಬ್ನಲ್ಲಿ ಸಾಕಷ್ಟು ವಿಡಿಯೋಗಳನ್ನು ಕೂಡ ಕತ್ರಿನಾ ನೋಡುತ್ತಿದ್ದಾರೆ. ಇದರ ಜೊತೆಗೆ ಪಂಜಾಬಿ ಭಾಷೆಯನ್ನು ಕಲಿತುಕೊಳ್ಳಲು ಕೂಡ ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ಮಾಧ್ಯಮಗಳಿಗೆ ಸುದ್ದಿ ಮುಟ್ಟಿಸಿವೆ.
ಉತ್ತರ ಭಾರತದಲ್ಲಿ ಸಂಕ್ರಾಂತಿ ಹಬ್ಬವನ್ನು ಲೋಹ್ರಿ ಎಂದು ಆಚರಿಸುತ್ತಾರೆ. ಪಂಜಾಬ್ ಮೂಲದವರಾದ ವಿಕ್ಕಿ ಕೌಶಲ್ ಮನೆಯಲ್ಲೂ ಈ ಹಬ್ಬ ಆಚರಿಸಲಾಗುತ್ತಿದೆ. ಹಬ್ಬದ ಸಂಭ್ರಮದಲ್ಲಿ ಕತ್ರಿನಾ ಕೈಫ್ ಭಾಗಿಯಾಗಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ವಿಕ್ಕಿ ಕೌಶಲ್ ಅವರು ಎಲ್ಲರಿಗೂ ಲೋಹ್ರಿ ಹಬ್ಬದ ಶುಭಾಶಯ ಕೋರಿದ್ದಾರೆ. ಈ ಜೋಡಿಯ ಮದುವೆ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಆದರೆ ಮದುವೆಯ ವಿಡಿಯೋ ಇನ್ನೂ ಲಭ್ಯವಾಗಿಲ್ಲ. ಒಟಿಟಿ ಸಂಸ್ಥೆಯೊಂದರ ಜೊತೆ ಒಪ್ಪಂದ ಮಾಡಿಕೊಂಡಿದ್ದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ತಮ್ಮ ಮದುವೆ ವಿಡಿಯೋ ಪ್ರಸಾರಕ್ಕೆ ಬಹುಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಭಾರಿ ವೈಭವದಿಂದ ನಡೆದ ಆ ಮದುವೆಯ ದೃಶ್ಯಗಳನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಇದನ್ನೂ ಓದಿ:
ಕತ್ರಿನಾ ಕೈಫ್ ಹಾಗೂ ವಿಜಯ್ ಸೇತುಪತಿಗೆ ವಿಶೇಷ ಕ್ಲಾಸ್; ಇದು ಹೊಸ ಸಿನಿಮಾ ಅಪ್ಡೇಟ್
ವಿಕ್ಕಿ ಕೌಶಲ್ ಬೈಕ್ ನಂಬರ್ ಪ್ಲೇಟ್ ಪ್ರಕರಣ; ಎಲ್ಲಕ್ಕೂ ಕಾರಣ ಒಂದೇ ಒಂದು ಬೋಲ್ಟ್ ಎಂದರೆ ನೀವು ನಂಬಲೇಬೇಕು!