ಎಲ್ಲಾ ಲೇಡಿ ಸೆಲೆಬ್ರಿಟಿಗಳ ಜೊತೆ ಪೋಸ್ ಕೊಡುವ ಈ ವ್ಯಕ್ತಿ ಯಾರು ಗೊತ್ತಾ?

|

Updated on: Nov 07, 2023 | 2:35 PM

ಬಾಲಿವುಡ್​ನಲ್ಲಿ ಪಾರ್ಟಿ ಆದರೆ ಅಲ್ಲಿ ಒರಿ ಹಾಜರಿ ಹಾಕುತ್ತಾರೆ. ಖುಷಿ ಕಪೂರ್, ಜಾನ್ವಿ ಕಪೂರ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ಕರೀನಾ ಕಪೂರ್, ನಿಸಾ ದೇವಗನ್, ಸಾರಾ ತೆಂಡೂಲ್ಕರ್, ಅನನ್ಯಾ ಪಾಂಡೆ, ಸಾರಾ ಅಲಿ ಖಾನ್ ಸೇರಿ ಅನೇಕರ ಜೊತೆ ಅವರು ಆಪ್ತವಾಗಿ ಕಾಣಿಸಿಕೊಂಡಿದ್ದಾರೆ.

ಎಲ್ಲಾ ಲೇಡಿ ಸೆಲೆಬ್ರಿಟಿಗಳ ಜೊತೆ ಪೋಸ್ ಕೊಡುವ ಈ ವ್ಯಕ್ತಿ ಯಾರು ಗೊತ್ತಾ?
ಸೆಲೆಬ್ರಿಟಿ ಕಿಡ್​ಗಳ ಜೊತೆ ಒರಿ
Follow us on

ಬಾಲಿವುಡ್​ ಬಗ್ಗೆ, ಬಾಲಿವುಡ್ ಸೆಲೆಬ್ರಿಟಿಗಳ ಬಗ್ಗೆ ಸ್ವಲ್ಪ ಜ್ಞಾನ ಇದ್ದವರಿಗೆ ಒಂದು ಮುಖ ಆಗಾಗ ಕಾಣುತ್ತದೆ. ಅವರು ಬೇರಾರು ಅಲ್ಲ ಒರ್ಹನ್ ಅವತ್ರಮಣಿ ಅಲಿಯಾಸ್ ಒರಿ. ಹಲವು ಸೆಲೆಬ್ರಿಟಿಗಳ ಜೊತೆ ಇವರು ಕಾಣಿಸಿಕೊಳ್ಳುತ್ತಾರೆ. ಹಾಗಂತ ಇವರಿಗೂ ಚಿತ್ರರಂಗಕ್ಕೂ ನೇರ ಸಂಬಂಧ ಇಲ್ಲ. ಅವರು ನಟನೆಯಲ್ಲಾಗಲೀ ನಿರ್ದೇಶನದಲ್ಲಾಗಲೀ ತೊಡಗಿಕೊಂಡಿಲ್ಲ. ಆದಾಗ್ಯೂ ಸ್ಟಾರ್ ಕಿಡ್​ಗಳಿಗೆ ಇವರೇ ಫೇವರಿಟ್. ಇವರು ಯಾರು ಎಂಬುದನ್ನು ಸಾರಾ ಅಲಿ ಖಾನ್ ಹಾಗೂ ಅನನ್ಯಾ ಪಾಂಡೆ ಅವರು ‘ಕಾಫಿ ವಿತ್ ಕರಣ್ ಸೀಸನ್ 8’ರ (Koffee With Karan) ಮೂರನೇ ಎಪಿಸೋಡ್​ನಲ್ಲಿ ಹೇಳಿಕೊಂಡಿದ್ದಾರೆ.

ಬಾಲಿವುಡ್​ನಲ್ಲಿ ಪಾರ್ಟಿ ಆದರೆ ಅಲ್ಲಿ ಒರಿ ಹಾಜರಿ ಹಾಕುತ್ತಾರೆ. ಖುಷಿ ಕಪೂರ್, ಜಾನ್ವಿ ಕಪೂರ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ಕರೀನಾ ಕಪೂರ್, ನಿಸಾ ದೇವಗನ್, ಸಾರಾ ತೆಂಡೂಲ್ಕರ್, ಅನನ್ಯಾ ಪಾಂಡೆ, ಸಾರಾ ಅಲಿ ಖಾನ್ ಸೇರಿ ಅನೇಕರ ಜೊತೆ ಅವರು ಆಪ್ತವಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಅವರ ಐಡೆಂಟಿಟಿ ಬಗ್ಗೆ ಯಾರಿಗೂ ಗೊತ್ತಿಲ್ಲ. ಇವರ ಕುರಿತು ಅನನ್ಯಾ ಪಾಂಡೆ ಹಾಗೂ ಸಾರಾ ಮಾತನಾಡಿದ್ದಾರೆ.

‘ಈ ಒರಿ ಯಾರು’ ಎಂದು ಕರಣ್ ಜೋಹರ್ ಪ್ರಶ್ನೆ ಮಾಡಿದ್ದಾರೆ. ‘ಒರಿ ಹಲವು ವಿಚಾರಗಳ ಬಗ್ಗೆ ತಿಳಿದಿರುವ ವ್ಯಕ್ತಿ. ಅವರು ಸಖತ್ ಫನ್ನಿ ವ್ಯಕ್ತಿ’ ಎಂದಿದ್ದಾರೆ ಸಾರಾ ಅಲಿ ಖಾನ್.  ಇನ್ನು, ಒರಿ ಬಗ್ಗೆ ಹರಡಿರುವ ವದಂತಿಗಳು ಒಂದೆರಡಲ್ಲ. ಈ ಬಗ್ಗೆ ಅನನ್ಯಾ ಮಾತನಾಡಿದ್ದಾರೆ. ‘ಎಲ್ಲರ ಪ್ರೀತಿ ಪಾತ್ರರಾಗುವ ವ್ಯಕ್ತಿ ಒರಿ. ಆದರೆ, ಅವರನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ನಾನು ಸೋಶಿಯಲ್ ಮೀಡಿಯಾಗೆ ಪೋಸ್ಟ್ ಹಾಕುವಾಗ ಅವರೇ ಕ್ಯಾಪ್ಶನ್ ನೀಡುತ್ತಾರೆ. ಅವರು ಏನು ಮಾಡುತ್ತಾರೆ ಅನ್ನೋದು ಗೊತ್ತಿಲ್ಲ’ ಎಂದಿದ್ದಾರೆ ಅನನ್ಯಾ.

ಇದನ್ನೂ ಓದಿ: ‘ಕಾಫಿ ವಿತ್​ ಕರಣ್​’ ಶೋಗೆ ಸಾರಾ ಅಲಿ ಖಾನ್​ ಅತಿಥಿ; ಮತ್ತೆ ಅದೇ ವಿವಾದದ ಬಗ್ಗೆ ಪ್ರಶ್ನೆ ಎದುರಾಗುತ್ತಾ?

ಒರಿ ಅವರು ಲಿಂಕ್ಡ್​​​ಇನ್​ನಲ್ಲಿದ್ದಾರೆ. ಅಲ್ಲಿ ರಿಲೈನ್ಸ್ ಇಂಡಸ್ಟ್ರೀಸ್​ ಲಿಮಿಟೆಡ್​​ನಲ್ಲಿ ಸ್ಪೆಷಲ್ ಪ್ರಾಜೆಕ್ಟ್ ಮ್ಯಾನೇಜರ್ ಎಂದು ತಮ್ಮ ಡೆಸಿಗ್ನೇಷನ್ ಬಗ್ಗೆ ಬರೆದುಕೊಂಡಿದ್ದಾರೆ. ಇವರು ಇಶಾ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್​ನ ಕ್ಲೋಸ್ ಫ್ರೆಂಡ್ ಎನ್ನಲಾಗಿದೆ. ಇವರ ಬಗ್ಗೆ ಇದಕ್ಕಿಂತ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ