ತೆಲುಗು, ತಮಿಳು ಸಿನಿಮಾಗಳಲ್ಲಿಯೂ ನಟಿಸಿರುವ ಬೆಂಗಾಲಿ ಮೂಲದ ನಟಿ ಪಾಯಲ್ ಮುಖರ್ಜಿ ಮೇಲೆ ಅಗಂತುಕ ಬೈಕ್ ಸವಾರನೊಬ್ಬ ದಾಳಿ ಮಾಡಿದ್ದು, ಹಲ್ಲೆಗೆ ಸಹ ಯತ್ನಿಸಿದ್ದಾನೆ. ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಲೈವ್ ಸಹ ಮಾಡಿದ್ದರು ನಟಿ. ಘಟನೆಯ ಬಳಿಕವೂ ಸಹ ನಟಿ ಪಾಯಲ್, ಅಳುತ್ತಾ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಹ ಹಂಚಿಕೊಂಡಿದ್ದಾರೆ.
ಪಾಯಲ್ ಹೇಳಿರುವಂತೆ, ಪಾಯಲ್, ಕೊಲ್ಕತ್ತ ನಗರದಲ್ಲಿ ತಮ್ಮ ಎಸ್ಯುವಿ ಕಾರಿನಲ್ಲಿ ಹೋಗುವಾಗ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ವ್ಯಕ್ತಿಯೊಬ್ಬ ಹಿಂದೆ ಬಂದಿದ್ದಾನೆ. ಹಾಗೂ ನಟಿಯನ್ನು ಗಾಡಿ ನಿಲ್ಲಿಸುವಂತೆ ಹೇಳಿದ್ದಾನೆ. ಆ ಬಳಿಕ ಹೆಲ್ಮೆಟ್ನಿಂದ ಪಾಯಲ್ರ ಕಾರಿನ ಗಾಜು ಒಡೆದು, ಕಾರಿನ ಒಳಕ್ಕೆ ಏನೋ ಪುಡಿಯನ್ನು ಎಸೆದಿದ್ದಾನಂತೆ. ಆ ಬಳಿಕವೂ ಸಹ ಕಾರಿನಿಂದ ಕೆಳಗೆ ಇಳಿಯುವಂತೆ ಬಲವಂತ ಮಾಡಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಟಿಯ ಕಾರಿನ ಕನ್ನಡಿಗಳನ್ನು ಸಹ ಒಡೆದು ಹಾಕಿದ್ದಾನೆ.
ಇದನ್ನೂ ಓದಿ:ಕೊಲ್ಕತ್ತಾ ಅತ್ಯಾಚಾರ-ಕೊಲೆ ಪ್ರಕರಣ; ಸಂಜಯ್ ರಾಯ್ ಮತ್ತು ಇತರ 6 ಜನರ ಪಾಲಿಗ್ರಾಫ್ ಪರೀಕ್ಷೆ ಆರಂಭ
ಅದಾದ ಬಳಿಕ ಗಾಬರಿಯಾದ ನಟಿ ಪಾಯಲ್ ಘೋಷ್, ಪೊಲೀಸರಿಗೆ ಕರೆ ಮಾಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ಕರೆದೊಯ್ದಿದ್ದಾರೆ. ಆಗಂತುಕ ಚಲಾಯಿಸುತ್ತಿದ್ದ ಬೈಕು ತಮಿಳುನಾಡಿದ್ದಾಗಿದೆ. ಘಟನೆಯ ಬಳಿಕ ವಿಡಿಯೋನಲ್ಲಿ ಮಾತನಾಡಿರುವ ನಟಿ ಪಾಯಲ್, ‘ಒಬ್ಬ ಮಹಿಳೆಯನ್ನು ಇಂಥಹಾ ಬ್ಯುಸಿ ಪ್ರದೇಶದಲ್ಲಿ ಈ ರೀತಿ ಕೆಟ್ಟದಾಗಿ ಅಡ್ಡಗಟ್ಟೆ ಹಲ್ಲೆ ಮಾಡಲು ಯತ್ನಿಸಲಾಗುತ್ತದೆ ಎಂದರೆ ಎಂಥಹಾ ಕೆಟ್ಟ ಪರಿಸ್ಥಿತಿಯಲ್ಲಿ ನಾವು ಇರಬಹುದು ಯೋಚಿಸಿ. ಮಹಿಳೆಯರ ಸುರಕ್ಷತೆ ಬಗ್ಗೆ ನಾವು ಮಾತನಾಡುತ್ತಿರುವ ಸಮಯದಲ್ಲಿಯೇ ಇಂಥಹಾ ಘಟನೆ ನಡೆದಿದೆ’ ಎಂದಿದ್ದಾರೆ.
ಕೊಲ್ಕತ್ತದಲ್ಲಿ ಆಗಸ್ಟ್ 09 ರಂದು ನಡೆದ ವೈದ್ಯೆಯ ಅಮಾನುಷ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಪಾಯಲ್ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದರು. ಇದೇ ಕಾರಣಕ್ಕೆ ಈಗ ಪಾಯಲ್ ಮೇಲೆ ದಾಳಿ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪಾಯಲ್ ಮುಖರ್ಜಿ, ಪಶ್ಚಿಮ ಬಂಗಾಳದವರು. ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಚಿತ್ರರಂಗದಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:36 pm, Sat, 24 August 24