AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣ’ ಸಿನಿಮಾಕ್ಕೆ ಎಂಟ್ರಿ ಕೊಟ್ಟ ಖ್ಯಾತ ಹಾಲಿವುಡ್ ಆಕ್ಷನ್ ನಿರ್ದೇಶಕ

Ramayana: ರಣ್​ಬೀರ್ ಕಪೂರ್-ಯಶ್-ಸಾಯಿ ಪಲ್ಲವಿ ನಟಿಸುತ್ತಿರುವ ‘ರಾಮಾಯಣ’ ಸಿನಿಮಾಕ್ಕೆ ಮತ್ತೊಬ್ಬ ಹಾಲಿವುಡ್ ತಂತ್ರಜ್ಞನ ಎಂಟ್ರಿ ಆಗಿದೆ. ‘ಅವೇಂಜರ್ಸ್’ ಇನ್ನಿತರೆ ಸಿನಿಮಾಗಳಿಗೆ ಕೆಲಸ ಮಾಡಿರುವ ಟೆರ್ರಿ ಇದೀಗ ರಾಮಾಯಣ ತಂಡ ಸೇರಿಕೊಂಡಿದ್ದಾರೆ.

‘ರಾಮಾಯಣ’ ಸಿನಿಮಾಕ್ಕೆ ಎಂಟ್ರಿ ಕೊಟ್ಟ ಖ್ಯಾತ ಹಾಲಿವುಡ್ ಆಕ್ಷನ್ ನಿರ್ದೇಶಕ
ಮಂಜುನಾಥ ಸಿ.
|

Updated on: Aug 25, 2024 | 8:24 AM

Share

ರಾಮಾಯಣ ಕತೆ ಆಧರಿಸಿದ ‘ಆದಿಪುರುಷ್’ ಸಿನಿಮಾ ಪ್ರಭಾಸ್ ಅಂಥಹಾ ದೊಡ್ಡ ಸ್ಟಾರ್ ನಟ ಇದ್ದರೂ ಸಹ ಹೀನಾಯವಾಗಿ ನೆಲಕಚ್ಚಿತು. ರಾಮಾಯಣ ಕತೆಯ ಬಗ್ಗೆ ಭಾರತೀಯರಿಗಿರುವ ವಿಶೇಷ ಭಕ್ತಿಭಾವವೇ ಆ ಕತೆಯನ್ನು ಸಿನಿಮಾ ಆಗಿ ಒಪ್ಪಿಕೊಳ್ಳಲು ಜನರಿಗೆ ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ. ಆದರೆ ಸಿನಿಮಾ ಮಂದಿಗೆ ಮಾತ್ರ ರಾಮಾಯಣದ ಕತೆ ಮೇಲೆ ವಿಶೇಷ ಪ್ರೀತಿ. ‘ಆದಿಪುರುಷ್’ ಸಿನಿಮಾ ಹೀನಾಯ ಸೋಲು ಕಂಡ ಬೆನ್ನಲ್ಲೆ ಇದೀಗ ಮತ್ತೊಂದು ರಾಮಾಯಣ ಕತೆ ಆಧರಿಸಿದ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ‘ಆದಿಪುರುಷ್’ ಸಿನಿಮಾಗಿಂತಲೂ ಭಾರಿ ಬಜೆಟ್ ಅನ್ನು ಈ ಸಿನಿಮಾಕ್ಕಾಗಿ ಹೂಡಿಕೆ ಮಾಡಲಾಗುತ್ತಿದೆ. ಕೆಲ ವಿದೇಶಿ ತಂತ್ರಜ್ಞರು ಸಹ ಸಿನಿಮಾಕ್ಕಾಗಿ ಕೆಲಸ ಮಾಡಲಿದ್ದಾರೆ.

ರಣ್​ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಇನ್ನೂ ಕೆಲವು ಪ್ರಮುಖ ತಾರೆಯರು ನಟಿಸಲಿರುವ ರಾಮಾಯಣ ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, ಹಾಲಿವುಡ್​ನ ಕೆಲ ಹೆಸರಾಂತ ತಂತ್ರಜ್ಞರು ಈ ಸಿನಿಮಾ ತಂಡವನ್ನು ಸೇರಿಕೊಂಡಿದ್ದಾರೆ. ‘ದಿ ಲಯನ್ ಕಿಂಗ್’, ‘ಇಂಟರ್​ಸ್ಟೆಲ್ಲರ್’, ‘ಗ್ಲೇಡಿಯೇಟರ್’, ‘ದಿ ರೋಡ್ ಟು ಎಲ್ ಡೊರಾಡೊ’ ಇನ್ನೂ ಹಲವಾರು ಅತ್ಯುತ್ತಮ ಹಾಲಿವುಡ್ ಸಿನಿಮಾಗಳಿಗೆ ಸಂಗೀತ ನೀಡಿರುವ ಹಾನ್ಸ್ ಜಿಮ್ಮರ್ ‘ರಾಮಾಯಣ’ ಸಿನಿಮಾಕ್ಕೆ ಸಂಗೀತ ನೀಡಲಿದ್ದಾರೆ. ಇದೀಗ ‘ಅವೇಂಜರ್ಸ್’ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳಿಗೆ ಆಕ್ಷನ್ ನಿರ್ದೇಶಿಸಿರುವ ಟೆರ್ರಿ ನೊಟಾರಿ ‘ರಾಮಾಯಣ’ ತಂಡ ಸೇರಿಕೊಂಡಿದ್ದಾರೆ.

ಟೆರ್ರಿ ನೊಟಾರಿ, ‘ಅವೇಂಜರ್ಸ್: ಎಂಡ್ ಗೇಮ್’, ‘ಅಡ್ವೇಂಚರ್ಸ್ ಆಫ್ ಟಿನ್​ಟಿನ್’, ‘ಇನ್​ಕ್ರೆಡಿಬಲ್ ಹಲ್ಕ್’ ಇನ್ನೂ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳಿಗೆ ಸ್ಟಂಟ್ ಕೋಆರ್ಡಿನೇಟರ್ ಹಾಗೂ ಮೋಷನ್ ಕ್ಯಾಪ್ಚರ್ ಫರ್ಫಾರ್ಮರ್ ಹಾಗೂ ಮೂಮೆಂಟ್ ಕೋಚ್ ಆಗಿ ಟೆರ್ರಿ ನೊಟಾರಿ ಕೆಲಸ ಮಾಡಿದ್ದಾರೆ. ಹಾಲಿವುಡ್​ನ ಅತ್ಯುತ್ತಮ ಸ್ಟಂಟ್ ಕೋಆರ್ಡಿನೇಟರ್ ಹಾಗೂ ಮೋಷನ್ ಕ್ಯಾಪ್ಚರ್ ಫರ್ಫಾರ್ಮರ್ ಗಳಲ್ಲಿ ಟೆರ್ರಿ ಸಹ ಒಬ್ಬರು. ಈ ಅತ್ಯುತ್ತಮ ತಂತ್ರ್ಞನನ್ನು ‘ರಾಮಾಯಣ’ ಸಿನಿಮಾಕ್ಕಾಗಿ ಭಾರತಕ್ಕೆ ಕರೆತರಲಾಗಿದೆ.

ಇದನ್ನೂ ಓದಿ: ಯಶ್ ನಟನೆಯ ‘ರಾಮಾಯಣ’ದ ಪೋಸ್ಟ್ ಪ್ರೊಡಕ್ಷನ್​ಗೆ 600 ದಿನ; 2027ಕ್ಕೆ ಸಿನಿಮಾ ರಿಲೀಸ್?

‘ರಾಮಾಯಣ’ ಸಿನಿಮಾದಲ್ಲಿ ಭರ್ಜರಿ ಆಕ್ಷನ್ ದೃಶ್ಯಗಳು ಇರಲಿವೆ. ಈ ಆಕ್ಷನ್ ದೃಶ್ಯಗಳನ್ನು ಮೊಷನ್ ಕ್ಯಾಪ್ಚರ್ ಹಾಗೂ ಇನ್ನಿತರೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸೆರೆ ಹಿಡಿಯಲಾಗುತ್ತಿದೆ. ಟೆರ್ರಿ, ಮೋಷನ್ ಕ್ಯಾಪ್ಚರ್ ಮತ್ತು ಇನ್ನಿತರೆ ತಂತ್ರಜ್ಞಾನಗಳನ್ನು ಬಳಸುವುದರಲ್ಲಿ ನಿಸ್ಸೀಮರಾಗಿರುವ ಕಾರಣ ಅವರನ್ನು ಸಿನಿಮಾಕ್ಕೆ ಆಯ್ಕೆ ಮಾಡಲಾಗಿದೆ. ‘ರಾಮಾಯಣ’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು, ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದ ಮೊದಲ ಭಾಗ ಮುಂದಿನ ವರ್ಷದ ಮಧ್ಯದ ವೇಳೆಗೆ ತೆರೆಗೆ ಬರಲಿದೆಯಂತೆ.

ಸಿನಿಮಾದಲ್ಲಿ ರಾಮನಾಗಿ ರಣ್​ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ನಟ ಯಶ್, ಹನುಮಂತನಾಗಿ ಸನ್ನಿ ಡಿಯೋಲ್, ಲಕ್ಷ್ಮಣನಾಗಿ ರವಿ ದುಬೆ, ದಶರಥನಾಗಿ ಅರುಣ್ ಗೋವಿನ್ ನಟಿಸುತ್ತಿದ್ದಾರೆ. ಸಿನಿಮಾವನ್ನು ನಿತೇಶ್ ತಿವಾರಿ ನಿರ್ದೇಶನ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ