ಇತ್ತೀಚೆಗೆ ಭಾರತ ಪ್ರವಾಸ ಮುಗಿಸಿ ವಿದೇಶಕ್ಕೆ ಹಿಂದಿರುಗಿದ ನಟಿ ಪ್ರಿಯಾಂಕಾ ಚೋಪ್ರಾ (priyanka chopra)ತನ್ನ ಪತಿ ನಿಕ್ ಅವರ ಜೊತೆ ಕಾಲಕಳೆದಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಹಿಂಬದಿಯಿಂದ ತೆಗೆದ ಫೋಟೋದಲ್ಲಿ ಪ್ರಿಯಾಂಕಾ ಕಪ್ಪು ಬೂಟುಗಳೊಂದಿಗೆ ಕೆಂಪು ಓವರ್ ಕೋಟ್ ಹಾಕಿಕೊಂಡಿದ್ದು, ನಿಕ್ ಜೋನಸ್ ಹಳದಿ ಜಾಕೆಟ್ ಮತ್ತು ಜೀನ್ಸ್ ಜೊತೆ ಬಿಳಿ ಬಣ್ಣದ ಸ್ನೀಕರ್ಸ್ ಧರಿಸಿದ್ದಾರೆ.
ಮೂರು ವರ್ಷಗಳ ಬಳಿಕ ಮುಂಬೈಗೆ ಬಂದಿದ್ದ ಪ್ರಿಯಾಂಕಾ ಚೋಪ್ರಾ ತಮ್ಮ ಹೇರ್ಕೇರ್ ಬ್ರ್ಯಾಂಡ್ನ್ನು ಪ್ರಚಾರ ಮಾಡಲು ಭಾರತಕ್ಕೆ ಆಗಮಿಸಿದ್ದರು, ಮುಂಬೈನ ತಮ್ಮ ನೆಚ್ಚಿನ ಸ್ಥಳಗಳಿಗೆ ಭೇಟಿ ನೀಡುವ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವುದರ ಮೂಲಕ ಅಲ್ಲಿ ಕಳೆದ ನೆನಪುಗಳನ್ನು ಮೆಲಕು ಹಾಕುತ್ತಿದ್ದರು, ಮುಂಬೈನ ಮೆರೈನ್ಡ್ರೈವ್ ಬಳಿ ಕೆಲಕಾಲ ಕಾರು ನಿಲ್ಲಿಸಿ,‘ಒಂದು ನಿಮಿಷವಾದರೂ ನಾನು ನಿನ್ನನ್ನು ಮಿಸ್ ಮಾಡಿಕೊಂಡಿದ್ದೇನೆ’ ಎಂದು ಬರೆದುಕೊಂಡಿದ್ದರು. ಇದರ ಜೊತೆಗೆ ಲಕ್ನೋದಲ್ಲಿರುವ ತಮ್ಮ ಬಾಲ್ಯದ ಮನೆಗೂ ಭೇಟಿ ನೀಡಿ ‘ನಾನು ಕೆಲವು ವರ್ಷಗಳು ನನ್ನ ಬಾಲ್ಯವನ್ನ ಇಲ್ಲಿಯೇ ಕಳೆದಿದ್ದು, ಇಲ್ಲಿ ನನಗೆ ಸ್ನೇಹಿತರಿದ್ದಾರೆ’ ಎಂದು ಹೇಳಿದ್ದರು.
ಲಾಸ್ ಏಂಜಲೀಸ್ಗೆ ಮರಳಿದ ನಂತರ, ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಸ್ ಅವರೊಂದಿಗೆ ಆಟವಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ನಿಕ್ ಅವರು ಮುದ್ದಾಗಿ ನೋಡುತ್ತಿದ್ದಾರೆ, ಈ ಪೋಸ್ಟ್ನಲ್ಲಿ ಅವರು ‘ಮನೆ’ ಎಂದು ಬರೆದು ಹಾರ್ಟ್ ಎಮೋಜಿಯನ್ನು ಹಾಕಿದ್ದಾರೆ.
ಇದನ್ನೂ ಓದಿ:Priyanka Chopra: ‘ಪ್ರಿಯಾಂಕಾ ಚೋಪ್ರಾ ವಿಶ್ವ ಸುಂದರಿ ಆಗಿದ್ದು ಮೋಸದಿಂದ’; 22 ವರ್ಷಗಳ ಬಳಿಕ ಗಂಭೀರ ಆರೋಪ
ಇನ್ನು ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್ನಲ್ಲಿ ಕೊನೆಯದಾಗಿ 2019 ರಲ್ಲಿ ‘ದಿ ಸ್ಕೈ ಇಸ್ ಪಿಂಕ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಈಗ ‘ಜೀ ಲೆ ಜರಾ’ದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಸಿನಿಮಾಗಳಿಗಿಂತಲೂ ಹಾಲಿವುಡ್ ಚಿತ್ರಗಳನ್ನೇ ಹೆಚ್ಚಾಗಿ ಒಪ್ಪಿಕೊಳ್ಳುತ್ತಿದ್ದಾರೆ. ಹಾಲಿವುಡ್ನಲ್ಲಿ ಅವರ ‘ಲವ್ ಅಗೇನ್’ ಸಿನಿಮಾವು ಮುಂದಿನ ವರ್ಷ ರಿಲೀಸ್ ಆಗಲಿದೆ.
ಇನ್ನಷ್ಟು ಮನರಂಜನಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ