Jee Le Zaraa: ಫ್ಯಾನ್ಸ್​ ಆಸೆಗೆ ತಣ್ಣೀರು ಎರೆಚಿದ ಪ್ರಿಯಾಂಕಾ ಚೋಪ್ರಾ; ಕತ್ರಿನಾ ಕೈಫ್​ಗೂ ಇದರಿಂದ ತೊಂದರೆ

Priyanka Chopra: ಪ್ರಿಯಾಂಕಾ ಚೋಪ್ರಾ ಅವರು ‘ಜೀ ಲೇ ಜರಾ’ ಸಿನಿಮಾದಲ್ಲಿ ನಟಿಸಲು ಹಿಂದೇಟು ಹಾಕಿದರು. ಇದರಿಂದ ಕತ್ರಿನಾ ಕೈಫ್​ ಬಗ್ಗೆ ಅನಗತ್ಯ ಗಾಸಿಪ್​ ಹುಟ್ಟಿಕೊಂಡಿತು.

Jee Le Zaraa: ಫ್ಯಾನ್ಸ್​ ಆಸೆಗೆ ತಣ್ಣೀರು ಎರೆಚಿದ ಪ್ರಿಯಾಂಕಾ ಚೋಪ್ರಾ; ಕತ್ರಿನಾ ಕೈಫ್​ಗೂ ಇದರಿಂದ ತೊಂದರೆ
ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್​

Updated on: Jul 05, 2023 | 8:44 PM

ಫರ್ಹಾನ್​ ಅಖ್ತರ್​ (Farhan Akhtar) ಅವರ ನಿರ್ದೇಶನಕ್ಕೆ ದೊಡ್ಡ ಅಭಿಮಾನಿ ಬಳಗ ಇದೆ. ‘ದಿಲ್​ ಚಾಹ್ತಾ ಹೈ’, ‘ಜಿಂದಗಿ ನಾ ಮಿಲೇಗಿ ದೋಬಾರ’ ಸಿನಿಮಾಗಳ ಮೂಲಕ ಅವರ ಆ ರೀತಿಯ ಛಾಪು ಮೂಡಿಸಿದ್ದಾರೆ. ಫರ್ಹಾನ್​ ಅಖ್ತರ್​ ಅವರು ‘ಜೀ ಲೇ ಜರಾ’ ಸಿನಿಮಾ ಅನೌನ್ಸ್​ ಮಾಡಿ ಬಹಳ ಸಮಯ ಕಳೆದಿದೆ. ಈ ಚಿತ್ರದಲ್ಲಿ ಕತ್ರಿನಾ ಕೈಫ್​, ಆಲಿಯಾ ಭಟ್​ ಹಾಗೂ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ತೆರೆ ಹಂಚಿಕೊಳ್ಳಲಿದ್ದಾರೆ ಎಂದು ಸುದ್ದಿ ಆಗಿತ್ತು. ಆದರೆ ಇತ್ತೀಚಿನ ವರದಿ ಪ್ರಕಾರ ಪ್ರಿಯಾಂಕಾ ಚೋಪ್ರಾ ಅವರು ಈ ಸಿನಿಮಾದಿಂದ ಹೊರನಡೆದಿದ್ದಾರೆ. ಅದರಿಂದ ಅಭಿಮಾನಿಗಳಿಗೆ ಸಹಜವಾಗಿಯೇ ಬೇಸರ ಆಗಿದೆ. ಈ ಎಲ್ಲ ಬೆಳವಣಿಗೆಗಳಿಂದ ಕತ್ರಿನಾ ಕೈಫ್​ (Katrina Kaif) ಬಗ್ಗೆಯೂ ಗಾಸಿಪ್​ ಹಬ್ಬುವಂತಾಗಿದೆ.

‘ಜೀ ಲೇ ಜರಾ’ ಸಿನಿಮಾದಿಂದ ಪ್ರಿಯಾಂಕಾ ಚೋಪ್ರಾ ಅವರು ಹೊರನಡೆದ ಬಳಿಕ ಕತ್ರಿನಾ ಕೈಫ್​ ಕೂಡ ಚಿತ್ರತಂಡವನ್ನು ತೊರೆದಿದ್ದಾರೆ ಎಂದು ಸುದ್ದಿ ಕೇಳಿಬಂದಿದೆ. ಆದರೆ ಅದು ನಿಜವಲ್ಲ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ನಿರ್ದೇಶಕ ಫರ್ಹಾನ್​ ಅಖ್ತರ್​ ಜೊತೆಗೆ ಕತ್ರಿನಾ ಕೈಫ್ ಅವರಿಗೆ ಉತ್ತಮ ಬಾಂಧವ್ಯ ಇದೆ. ಅಲ್ಲದೇ ‘ಜೀ ಲೇ ಜರಾ’ ಸಿನಿಮಾದಲ್ಲಿ ನಟಿಸಲು ಕತ್ರಿನಾ ಕೈಫ್​ಗೆ ಈಗಲೂ ಆಸಕ್ತಿ ಇದೆ ಎಂಬುದನ್ನು ಮೂಲಗಳು ಹೇಳಿವೆ. ಈ ನಡುವೆ ಅವರು ಚಿತ್ರತಂಡದಿಂದ ಹೊರನಡೆದಿದ್ದಾರೆ ಎಂದು ಗಾಸಿಪ್​ ಹಬ್ಬಿರುವುದರಿಂದ ಕತ್ರಿನಾಗೆ ಬೇಸರ ಆಗಿದೆ.

ಇದನ್ನೂ ಓದಿ: Priyanka Chopra: ಪ್ರಶಾಂತ್​ ನೀಲ್​ ನಿರ್ದೇಶನದ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ? ಕೇಳಿಬರ್ತಿದೆ ಬಿಗ್​ ನ್ಯೂಸ್​

ಪ್ರಿಯಾಂಕಾ ಚೋಪ್ರಾ ಅವರು ‘ಜೀ ಲೇ ಜರಾ’ ಸಿನಿಮಾದಲ್ಲಿ ನಟಿಸಲು ಹಿಂದೇಟು ಹಾಕಿದರು. ಹಾಗಾಗಿ ಈ ಚಿತ್ರವನ್ನೇ ಕೈ ಬಿಡಲು ನಿರ್ದೇಶಕ ಫರ್ಹಾನ್​ ಅಖ್ತರ್​ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಅದು ನಿಜವಲ್ಲ ಎಂಬ ಮಾತು ಕೇಳಿಬಂದಿದೆ. ಪ್ರಿಯಾಂಕಾ ಚೋಪ್ರಾ ಬದಲಿಗೆ ಬೇರೆ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದಷ್ಟೇ ಈಗಿರುವ ಪ್ರಶ್ನೆ. ಆ ಬಗ್ಗೆ ಫರ್ಹಾನ್​ ಅಖ್ತರ್​ ಅವರು ಆಲೋಚಿಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Priyanka Chopra: ಬಹುವರ್ಷಗಳ ಬಳಿಕ ಒಪ್ಪಿಕೊಂಡ ಬಾಲಿವುಡ್ ಚಿತ್ರದಿಂದಲೂ ಹೊರ ನಡೆದ ನಟಿ ಪ್ರಿಯಾಂಕಾ ಚೋಪ್ರಾ

ಅಮೆರಿಕದ ಗಾಯಕ ಕಮ್​ ನಟ ನಿಕ್​ ಜೋನಸ್​ ಅವರನ್ನು ಮದುವೆ ಆದ ಬಳಿಕ ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್​ಗೆ ಗುಡ್​ಬೈ ಹೇಳಿದ್ದಾರೆ. ಹಾಲಿವುಡ್​​ನಲ್ಲೇ ಅವರು ಹೆಚ್ಚು ಬ್ಯುಸಿ ಆಗಿದ್ದಾರೆ. ಅಲ್ಲದೇ ಬಾಲಿವುಡ್​ನ ಒಳಗಿರುವ ಹುಳುಕುಗಳ ಬಗ್ಗೆ ಈಗಾಗಲೇ ಅವರು ಕೆಲವು ಸಂದರ್ಶನಗಳಲ್ಲಿ ಬಹಿರಂಗವಾಗಿ ಮಾತನಾಡಿದ್ದಾರೆ. ಇಷ್ಟೆಲ್ಲ ಆದಮೇಲೆ ಮತ್ತೆ ಅವರು ಬಾಲಿವುಡ್​ಗೆ ಕಾಲಿಡುವುದು ಅನುಮಾನ ಎಂಬಂತಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us