AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Priyanka Chopra: ಪ್ರಶಾಂತ್​ ನೀಲ್​ ನಿರ್ದೇಶನದ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ? ಕೇಳಿಬರ್ತಿದೆ ಬಿಗ್​ ನ್ಯೂಸ್​

NTR 31: ಪ್ರಿಯಾಂಕಾ ಚೋಪ್ರಾ ಅವರಿಗೆ ‘ಎನ್​ಟಿಆರ್​ 31’ ಚಿತ್ರದಲ್ಲಿ ನಟಿಸುವ ಆಫರ್​ ನೀಡಲಾಗಿದೆ ಎಂಬ ಮಾತು ಕೇಳಿಬಂದಿದೆ. ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ ಎನ್ನುತ್ತಿದ್ದಾರೆ ಗಾಸಿಪ್​ ಪ್ರಿಯರು.

Priyanka Chopra: ಪ್ರಶಾಂತ್​ ನೀಲ್​ ನಿರ್ದೇಶನದ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ? ಕೇಳಿಬರ್ತಿದೆ ಬಿಗ್​ ನ್ಯೂಸ್​
ಪ್ರಿಯಾಂಕಾ ಚೋಪ್ರಾ, ಪ್ರಶಾಂತ್​ ನೀಲ್​
ಮದನ್​ ಕುಮಾರ್​
|

Updated on: Jun 07, 2023 | 5:26 PM

Share

‘ಕೆಜಿಎಫ್​: ಚಾಪ್ಟರ್​ 2’ ಸೂಪರ್​ ಹಿಟ್​ ಆದ ಬಳಿಕ ನಿರ್ದೇಶಕ ಪ್ರಶಾಂತ್​ ನೀಲ್​ (Prashanth Neel) ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಟಾಲಿವುಡ್​ನ ನಟರ ಸಿನಿಮಾಗಳಿಗೆ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಅವರ ಗಮನವೆಲ್ಲ ‘ಸಲಾರ್​’ ಸಿನಿಮಾ ಮೇಲಿದೆ. ಆ ಬಳಿಕ ಅವರು ಜೂನಿಯರ್​ ಎನ್​ಟಿಆರ್​ ಜೊತೆ ಸಿನಿಮಾ ಮಾಡಲಿದ್ದಾರೆ. ಅದು ಜೂನಿಯರ್​ ಎನ್​ಟಿಆರ್ (Jr NTR)​ ನಟನೆಯ 31ನೇ ಸಿನಿಮಾ. ಶೀರ್ಷಿಕೆ ಇನ್ನೂ ಅಂತಿಮವಾಗದ ಈ ಚಿತ್ರವನ್ನು ಸದ್ಯಕ್ಕೆ ‘ಎನ್​ಟಿಆರ್​ 31’ ಎಂದು ಕರೆಯಲಾಗುತ್ತಿದೆ. ಈ ಸಿನಿಮಾ ಬಗ್ಗೆ ಒಂದು ಗಾಸಿಪ್​ ಕೇಳಿಬಂದಿದೆ. ‘ಎನ್​ಟಿಆರ್​ 31’ ಸಿನಿಮಾದಲ್ಲಿ ನಾಯಕಿಯಾಗಿ ಪ್ರಿಯಾಂಕಾ ಚೋಪ್ರಾ (Priyanka Chopra) ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಅನೇಕ ಮಾಧ್ಯಮಗಳು ವರದಿ ಮಾಡಿವೆ.

ಯಾವುದೇ ಬಿಗ್​ ಬಜೆಟ್​ ಸಿನಿಮಾಗಳು ಅನೌನ್ಸ್​ ಆದಾಗ ಅದರ ಬಗ್ಗೆ ಗಾಸಿಪ್​ಗಳು ಹಬ್ಬುವುದು ಸಹಜ. ‘ಎನ್​ಟಿಆರ್​ 31’ ಸಿನಿಮಾ ಕೂಡ ಇದಕ್ಕೆ ಹೊರತಾಗಿಲ್ಲ. ಮೈತ್ರಿ ಮೂವೀ ಮೇಕರ್ಸ್​ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡಲಿದೆ. ಪ್ರಶಾಂತ್​ ನೀಲ್​ ಮತ್ತು ಜೂನಿಯರ್​ ಎನ್​ಟಿಆರ್​ ಅವರ ಕಾಂಬಿನೇಷನ್​ ಆದ್ದರಿಂದ ಸಹಜವಾಗಿಯೇ ನಿರೀಕ್ಷೆ ಜೋರಾಗಿದೆ. ಈ ಚಿತ್ರದ ಕಥೆ ಇಂಡಿಯಾ-ಪಾಕಿಸ್ತಾನ ಗಡಿಯಲ್ಲಿ ನಡೆಯಲಿದೆಯಂತೆ ಎಂದು ಕೂಡ ಗಾಸಿಪ್​ ಹರಡಿದೆ. ಅದರ ಬೆನ್ನಲ್ಲೇ ನಾಯಕಿಯ ಆಯ್ಕೆ ಬಗ್ಗೆ ಗುಸುಗುಸು ಕೇಳಿಬರುತ್ತಿದೆ.

ಇದನ್ನೂ ಓದಿ: Priyanka Chopra: ‘ಮಗಳಿಗಾಗಿ ಕೆಲಸ ತೊರೆದು, ದೇಶ ಬಿಟ್ಟುಹೋಗಲು ಸಿದ್ಧ’: ಪ್ರಿಯಾಂಕಾ ಚೋಪ್ರಾ ಜೋನಸ್​

ಪ್ರಿಯಾಂಕಾ ಚೋಪ್ರಾ ಅವರು ಸದ್ಯಕ್ಕೆ ಭಾರತೀಯ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಹಲವು ವರ್ಷಗಳ ಹಿಂದೆಯೇ ಅವರು ಬಾಲಿವುಡ್​ ಸಿನಿಮಾಗಳನ್ನು ಒಪ್ಪಿಕೊಳ್ಳುವುದು ನಿಲ್ಲಿಸಿದ್ದಾರೆ. ಸದ್ಯ ಅವರ ಸಂಪೂರ್ಣ ಗಮನ ಹಾಲಿವುಡ್​ನಲ್ಲಿದೆ. ಇಂಗ್ಲಿಷ್​ ಸಿನಿಮಾ ಮತ್ತು ವೆಬ್​ ಸೀರಿಸ್​ಗಳಲ್ಲಿ ಅಭಿನಯಿಸುತ್ತಿದ್ದಾರೆ. ಅವರ ಬಾಲಿವುಡ್​ಗೆ ಕಮ್​ಬ್ಯಾಕ್​ ಮಾಡಲಿ ಎಂಬುದು ಫ್ಯಾನ್ಸ್​ ಆಸೆ. ಆದರೆ ಅದು ಸದ್ಯಕ್ಕಂತೂ ನೆರವೇರುವಂತೆ ಕಾಣುತ್ತಿಲ್ಲ. ಈ ನಡುವೆ ಅವರಿಗೆ ‘ಎನ್​ಟಿಆರ್​ 31’ ಚಿತ್ರದಲ್ಲಿ ನಟಿಸುವ ಆಫರ್​ ನೀಡಲಾಗಿದೆ ಎಂಬ ಮಾತು ಕೇಳಿಬಂದಿದೆ. ಈ ಬಗ್ಗೆ ಚಿತ್ರತಂಡದವರು ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಇದು ನಿಜವೋ ಸುಳ್ಳೋ ಎಂಬುದು ಕೂಡ ಖಚಿತವಾಗಿಲ್ಲ. ಆದರೂ ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ ಎನ್ನುತ್ತಿದ್ದಾರೆ ಗಾಸಿಪ್​ ಪ್ರಿಯರು.

ಇದನ್ನೂ ಓದಿ: Priyanka Chopra: 16ನೇ ವಯಸ್ಸಲ್ಲಿ ಪ್ರಿಯಾಂಕಾ ಚೋಪ್ರಾಗೆ ಹುಡುಗರ ಕಾಟ; ಮನೆಯ ಕಿಟಕಿ ಭದ್ರಪಡಿಸಿದ್ದ ತಂದೆ

ಜೂನಿಯರ್​ ಎನ್​ಟಿಆರ್ ಅವರು ಸದ್ಯ ‘ದೇವರ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಬಳಿಕ ಅವರು ‘ವಾರ್​ 2’ ಚಿತ್ರದಲ್ಲಿ ತೊಡಗಿಕೊಳ್ಳಲಿದ್ದಾರೆ. ಆ ಬಳಿಕವಷ್ಟೇ ‘ಎನ್​ಟಿಆರ್​ 31’ ಕೆಲಸ ಆರಂಭ ಆಗಲಿದೆ. ಹಾಗೆಯೇ, ಪ್ರಶಾಂತ್​ ನೀಲ್​ ಅವರು ‘ಸಲಾರ್​’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಆ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಆ ಚಿತ್ರ ಬಿಡುಗಡೆ ಆದ ನಂತರವೇ ಅವರು ಬೇರೆ ಪ್ರಾಜೆಕ್ಟ್​ ಕಡೆಗೆ ಗಮನ ಹರಿಸಲಿದ್ದಾರೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More