‘ನನಗೆ ಹಣ ಪಾವತಿಸಿ ಎಂದರು’; ಬಿಕಿನಿ ಫೋಟೋ ಹಾಕಿ ಕರಾಳ ಸತ್ಯ ಬಿಚ್ಚಿಟ್ಟ ನಟಿ

|

Updated on: Apr 20, 2023 | 11:25 AM

Rajshri Deshpande: ರಾಜಶ್ರೀ ಅವರು ವೆಬ್ ಸೀರಿಸ್ ಲೋಕದಲ್ಲಿ ಬ್ಯುಸಿ ಇದ್ದಾರೆ. ಆದರೆ, ಆರಂಭದಲ್ಲಿ ಅವರಿಗೆ ಇಷ್ಟು ಸ್ಕೋಪ್ ಸಿಕ್ಕಿರಲಿಲ್ಲ. ಪ್ರತಿ ವಿಚಾರಕ್ಕೂ ಅವರಿಗೆ ಹಣ ಕೇಳುತ್ತಿದ್ದರು.

‘ನನಗೆ ಹಣ ಪಾವತಿಸಿ ಎಂದರು’; ಬಿಕಿನಿ ಫೋಟೋ ಹಾಕಿ ಕರಾಳ ಸತ್ಯ ಬಿಚ್ಚಿಟ್ಟ ನಟಿ
ರಾಜಶ್ರೀ ದೇಶಪಾಂಡೆ
Follow us on

ಬಣ್ಣದ ಲೋಕ ಅನೇಕರನ್ನು ಆಕರ್ಷಿಸುತ್ತದೆ. ಆದರೆ, ಎಲ್ಲರಿಗೂ ಇಲ್ಲಿ ನೆಲೆ ಸಿಗುವುದಿಲ್ಲ. ಸ್ಟಾರ್ ಕಲಾವಿದರ ಮಕ್ಕಳೂ ಮೂಲೆಗುಂಪಾದ ಸಾಕಷ್ಟು ಉದಾಹರಣೆ ಇದೆ. ಸಾಕಷ್ಟು ಮಂದಿಗೆ ಕಾಸ್ಟಿಂಗ್ ಕೌಚ್ (Casting Couch) ಅನುಭವ ಆಗಿದೆ. ಈ ಎಲ್ಲಾ ಕಹಿಘಟನೆ ಬಗ್ಗೆ ಅನೇಕ ಹೀರೋಯಿನ್​ಗಳು ಮಾತನಾಡಿದ್ದಾರೆ. ಈಗ ಬಾಲಿವುಡ್ ನಟಿ ರಾಜಶ್ರೀ ದೇಶಪಾಂಡೆ (Rajshri Deshpande) ಕೂಡ ಈ ಬಗ್ಗೆ ಮೌನ ಮುರಿದಿದ್ದಾರೆ. ಬಿಕಿನಿ ಫೋಟೋ ಪೋಸ್ಟ್ ಹಾಕಿರುವ ಅವರು ಇದಕ್ಕೆ ಕಹಿ ಅನುಭವ ವಿವರಿಸಿ ಕ್ಯಾಪ್ಶನ್ ನೀಡಿದ್ದಾರೆ.

2012ರಲ್ಲಿ ರಿಲೀಸ್ ಆದ ‘ತಲಾಶ್’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು ರಾಜಶ್ರೀ. ಮೊದಲ ಚಿತ್ರದಲ್ಲೇ ಆಮಿರ್ ಖಾನ್ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕಿತು. ಈ ಸಿನಿಮಾ ಸೂಪರ್ ಹಿಟ್ ಆಯಿತು. ನಂತರ ಸಲ್ಮಾನ್ ಖಾನ್ ನಟನೆಯ ‘ಕಿಕ್​’ ಚಿತ್ರದಲ್ಲೂ ನಟಿಸಿದರು. ಅಲ್ಲಿಂದ ಇಲ್ಲಿಯವರೆಗೆ ಹಲವು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಈಗ ಅವರು ವೆಬ್ ಸೀರಿಸ್ ಲೋಕದಲ್ಲಿ ಬ್ಯುಸಿ ಇದ್ದಾರೆ. ಆದರೆ, ಆರಂಭದಲ್ಲಿ ಅವರಿಗೆ ಇಷ್ಟು ಸ್ಕೋಪ್ ಸಿಕ್ಕಿರಲಿಲ್ಲ. ಪ್ರತಿ ವಿಚಾರಕ್ಕೂ ಅವರಿಗೆ ಹಣ ಕೇಳುತ್ತಿದ್ದರು.

‘ಬಟ್ಟೆ ತೊಡಲು, ಮ್ಯಾಗಜಿನ್ ಕವರ್‌ ಪೇಜ್​ನಲ್ಲಿ ಬರಲು ಮತ್ತು ಪ್ರಶಸ್ತಿ ಪಡೆಯಲು ಅವರು ಹಣ ನೀಡಿ ಎಂದು ನನಗೆ ಕೇಳಿದರು. ಆದರೆ ನಾನು ಆ ಹಣದಲ್ಲಿ ವಿವಿಧ ಸ್ಥಳಗಳನ್ನು ನೋಡಲು ಪರ್ವತ ಹಾಗೂ ಸಮುದ್ರವನ್ನು ನೋಡುತ್ತಾ ನಗುತ್ತಾ ಸಾಹಸಮಯ ಜೀವನವನ್ನು ಕಳೆಯಲು ನಿರ್ಧರಿಸಿದೆ. ನಾನು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಭಾವಿಸುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

ಅನೇಕರು ನಟಿಯನ್ನು ಬೆಂಬಲಿಸಿದ್ದಾರೆ. ‘ನೀವು ಅತ್ಯುತ್ತಮ ಜೀವನ ನಡೆಸುತ್ತಿದ್ದೀರಿ’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಜಗತ್ತನ್ನು ಅನ್ವೇಷಣೆ ಮಾಡುವುದು ಒಂದು ದೊಡ್ಡ ಪ್ರಶಸ್ತಿ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ರಾಜಶ್ರೀ ಅವರನ್ನು ಬೆಂಬಲಿಸಿ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ‘ಪುಷ್ಪ’ ಸಿನಿಮಾ ನಿರ್ದೇಶಕ, ನಿರ್ಮಾಪಕರಿಗೆ ಶಾಕ್​; ಮನೆ, ಕಚೇರಿ ಮೇಲೆ ಐಟಿ ದಾಳಿ

ರಾಜಶ್ರೀ ದೇಶಪಾಂಡೆ ಸದಾ ಸುತ್ತಾಡುತ್ತಿರುತ್ತಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರು ವಿವಿಧ ಕಡೆಗಳಿಗೆ ತೆರಳಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಆಯ್ಕೆಯಲ್ಲಿ ಅವರು ಸಖತ್ ಚ್ಯೂಸಿ. ಸಿನಿಮಾ ಹಾಗೂ ವೆಬ್ ಸೀರಿಸ್ ಕೆಲಸಗಳ ಮಧ್ಯೆ ಬಿಡುವು ಸಿಕ್ಕಾಗ ಅವರು ಸುತ್ತಾಟ ನಡೆಸುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:30 am, Thu, 20 April 23