AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣ’ ಅಡ್ವಾನ್ಸ್ ಬುಕಿಂಗ್, 40 ಕೋಟಿಗೂ ಹೆಚ್ಚು ಮುಂಗಡ ಗಳಿಕೆ

ಇದು ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನ್ನಲಾಗುತ್ತಿದ್ದು, ಸಿನಿಮಾಕ್ಕಾಗಿ ಭರ್ಜರಿ ಪ್ರಚಾರ ಮಾಡಲಾಗಿದೆ. ಭಾರತದ ಸಿನಿಮಾ ಮಾರುಕಟ್ಟೆ ಮಾತ್ರವೇ ಅಲ್ಲದೆ ವಿಶ್ವ ಸಿನಿಮಾ ಮಾರುಕಟ್ಟೆಯನ್ನು ಗಮನದಲ್ಲಿರಿಸಿಕೊಂಡು ಸಿನಿಮಾದ ಪ್ರಚಾರ ಮಾಡಲಾಗಿದ್ದು, ಅದಕ್ಕೆ ತಕ್ಕಂತೆ ಅಡ್ವಾನ್ಸ್ ಬುಕಿಂಗ್ ಸಹ ಜೋರಾಗಿದೆ. ‘ರಾಮಾಯಣ’ ಸಿನಿಮಾ ನವೆಂಬರ್ 5 ರಂದು ಬಿಡುಗಡೆ ಆಗಲಿದ್ದು, ಈಗಾಗಲೇ ವಿಶ್ವದಾದ್ಯಂತ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ.

‘ರಾಮಾಯಣ’ ಅಡ್ವಾನ್ಸ್ ಬುಕಿಂಗ್, 40 ಕೋಟಿಗೂ ಹೆಚ್ಚು ಮುಂಗಡ ಗಳಿಕೆ
ಯಶ್
ಮಂಜುನಾಥ ಸಿ.
|

Updated on: Oct 29, 2026 | 5:32 PM

Share

ಮುಖ್ಯಾಂಶಗಳು

  • ‘ರಾಮಾಯಣ’ ಸಿನಿಮಾದ ಅಡ್ವಾನ್ಸ್ ಬುಕಿಂಗ್
  • ‘ರಾಮಾಯಣ’ ಸಿನಿಮಾ 40 ಕೋಟಿ ಗಳಿಕೆ ಮಾಡಿದೆ
  • ಸಿನಿಮಾ ನವೆಂಬರ್ 5 ರಂದು ಬಿಡುಗಡೆ ಆಗಲಿದೆ

ರಣ್​​ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ನಟಿಸಿರುವ ‘ರಾಮಾಯಣ’ ಸಿನಿಮಾ ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ. ಇದು ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನ್ನಲಾಗುತ್ತಿದ್ದು, ಸಿನಿಮಾಕ್ಕಾಗಿ ಭರ್ಜರಿ ಪ್ರಚಾರ ಮಾಡಲಾಗಿದೆ. ಭಾರತದ ಸಿನಿಮಾ ಮಾರುಕಟ್ಟೆ ಮಾತ್ರವೇ ಅಲ್ಲದೆ ವಿಶ್ವ ಸಿನಿಮಾ ಮಾರುಕಟ್ಟೆಯನ್ನು ಗಮನದಲ್ಲಿರಿಸಿಕೊಂಡು ಸಿನಿಮಾದ ಪ್ರಚಾರ ಮಾಡಲಾಗಿದ್ದು, ಅದಕ್ಕೆ ತಕ್ಕಂತೆ ಅಡ್ವಾನ್ಸ್ ಬುಕಿಂಗ್ ಸಹ ಜೋರಾಗಿದೆ. ‘ರಾಮಾಯಣ’ ಸಿನಿಮಾ ನವೆಂಬರ್ 5 ರಂದು ಬಿಡುಗಡೆ ಆಗಲಿದ್ದು, ಈಗಾಗಲೇ ವಿಶ್ವದಾದ್ಯಂತ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ.

‘ರಾಮಾಯಣ’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿ ಕೆಲವು ದಿನಗಳಾಗಿದ್ದು, ಆರಂಭದಲ್ಲಿ ತುಸು ಮೆಲ್ಲಗೆ ಸಾಗಿದ್ದ ಮುಂಗಡ ಬುಕಿಂಗ್ ಈಗ ನಿಧಾನಕ್ಕೆ ವೇಗ ಪಡೆದುಕೊಳ್ಳುತ್ತಿದ್ದು, ಭಾರತದಲ್ಲಿ ಸುಮಾರು 3 ಲಕ್ಷ ಟಿಕೆಟ್​​ಗಳು ಮುಂಗಡ ಬುಕ್ ಆಗಿವೆ ಎನ್ನಲಾಗುತ್ತಿದೆ. ಸಿನಿಮಾದ ಬಿಡುಗಡೆಗೆ ಇನ್ನೂ ಕೆಲವು ದಿನಗಳಿದ್ದು, ಇನ್ನೂ ಕನಿಷ್ಟ ಒಂದು ಲಕ್ಷ ಟಿಕೆಟ್​ಗಳು ಮುಂಗಡವಾಗಿ ಬುಕ್ ಆಗುವ ದಟ್ಟ ಸಾಧ್ಯತೆ ಇದೆ. ಉತ್ತರ ಭಾರತದ ಭಾಗಗಳಲ್ಲಿ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಜೋರಾಗಿ ನಡೆಯುತ್ತಿದೆ. ದಕ್ಷಿಣದಲ್ಲಿ ಹವಾ ತುಸು ಕಡಿಮೆ ಇದೆ.

ಕೇವಲ ಅಡ್ವಾನ್ಸ್ ಬುಕಿಂಗ್​​ನಿಂದಲೇ ಸಿನಿಮಾ ಈ ವರೆಗೆ 40 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಗಳಿಕೆ ಮಾಡಿದ್ದು, ಈ ಮೊತ್ತ ಸುಮಾರು 60 ಕೋಟಿ ದಾಟುವ ನಿರೀಕ್ಷೆ ಇದೆಯೆಂದು ಬಾಕ್ಸ್ ಆಫೀಸ್ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಮಾತ್ರವಲ್ಲದೆ ಸಿನಿಮಾದ ಮೊದಲ ದಿನದ ವಿಶ್ವ ಬಾಕ್ಸ್ ಆಫೀಸ್​​ ಗಳಿಕೆಯೂ ಸಹ ಭರ್ಜರಿ ಆಗಿಯೇ ಇರಲಿದ್ದು, ಮೊದಲ ದಿನ ಈ ಸಿನಿಮಾ ಸುಮಾರು 100 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ:‘ರಾಮಾಯಣ’ ಸಿನಿಮಾನಲ್ಲಿ ಎಐ ಬಳಕೆ? ನಿರ್ದೇಶಕ ನಿತೀಶ್ ಕೊಟ್ಟರು ಉತ್ತರ

ಇತ್ತೀಚೆಗಷ್ಟೆ ಸಿನಿಮಾದ ವಿಶೇಷ ಪ್ರೀಮಿಯರ್ ಶೋ ಅನ್ನು ಅಮೆರಿಕದ ಲಾಸ್ ಏಂಜಲ್ಸ್​​ನಲ್ಲಿ ಪ್ರದರ್ಶಿಸಲಾಗಿದ್ದು, ಅಮೆರಿಕ ಪ್ರೇಕ್ಷಕರು ಸಿನಿಮಾಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಸಿನಿಮಾ ಅನ್ನು ಖ್ಯಾತ ಫ್ಯಾಂಟಸಿ ಸಿನಿಮಾ ‘ಲಾರ್ಡ್ ಆಫ್ ದಿ ರಿಂಗ್ಸ್​’ಗೆ ಹೋಲಿಕೆ ಸಹ ಮಾಡುತ್ತಿದ್ದಾರೆ. ಸಿನಿಮಾ ಅನ್ನು ಹಿಂದಿ, ತೆಲುಗು, ಕನ್ನಡ, ತಮಿಳು, ಮಲಯಾಳಂ, ಇಂಗ್ಲೀಷ್ ಮಾತ್ರವೇ ಅಲ್ಲದೆ ಫ್ರೆಂಚ್, ಚೀನಿ, ಜಪಾನಿ, ಜರ್ಮನ್ ಭಾಷೆ ಸೇರಿದಂತೆ ಇನ್ನೂ ಕೆಲ ವಿದೇಶಿ ಭಾಷೆಗಳಿಗೆ ಸಹ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ಹಾಗಾಗಿ ಈ ಸಿನಿಮಾದ ವಿಶ್ವ ಬಾಕ್ಸ್ ಆಫೀಸ್ ಗಳಿಕೆ ಜೋರಾಗಿಯೇ ಇರಲಿದೆ ಎನ್ನಲಾಗುತ್ತಿದೆ.

ಸಿನಿಮಾಕ್ಕೆ ನಮಿತ್ ಮಲ್ಹೋತ್ರಾ ಪ್ರಮುಖ ನಿರ್ಮಾಪಕರಾಗಿದ್ದು, ಯಶ್ ರಾವಣನ ಪಾತ್ರದಲ್ಲಿ ನಟಿಸಿರುವ ಜೊತೆಗೆ ಸಹ ನಿರ್ಮಾಪಕರೂ ಸಹ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More