AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣ’ ಸಿನಿಮಾನಲ್ಲಿ ಎಐ ಬಳಕೆ? ನಿರ್ದೇಶಕ ನಿತೀಶ್ ಕೊಟ್ಟರು ಉತ್ತರ

ಎಐ ಬಳಸಿ ಕಠಿಣದಲ್ಲೇ ಕಠಿಣ ದೃಶ್ಯಗಳನ್ನು ಸಹ ಸುಲಭವಾಗಿ ಸೃಷ್ಟಿಸಬಹುದಾಗಿದೆ. ಹಾಗಾಗಿ ಹಲವು ನಿರ್ಮಾಪಕರು, ನಿರ್ದೇಶಕರು ಎಐ ಬಳಕೆ ಮಾಡುತ್ತಿದ್ದಾರೆ. ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ‘ರಾಮಾಯಣ’ ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ. ಸಿನಿಮಾದ ಬಗ್ಗೆ ಚರ್ಚೆ ಜೋರಾಗಿದೆ. ಆದರೆ ಈ ಸಿನಿಮಾನಲ್ಲಿ ಎಐ ಬಳಕೆ ಮಾಡಲಾಗಿದೆ ಎಂಬ ‘ಆರೋಪ’ದ ಬಗ್ಗೆ ನಿರ್ದೇಶಕ ನಿತೀಶ್ ತಿವಾರಿ ಸ್ಪಷ್ಟನೆ ನೀಡಿದ್ದಾರೆ.

‘ರಾಮಾಯಣ’ ಸಿನಿಮಾನಲ್ಲಿ ಎಐ ಬಳಕೆ? ನಿರ್ದೇಶಕ ನಿತೀಶ್ ಕೊಟ್ಟರು ಉತ್ತರ
Ramayana Nitesh
ಮಂಜುನಾಥ ಸಿ.
|

Updated on: Oct 28, 2026 | 4:47 PM

Share

ಮುಖ್ಯಾಂಶಗಳು

  • ‘ರಾಮಾಯಣ’ ಸಿನಿಮಾನಲ್ಲಿ ಎಐ ಬಳಕೆ ಮಾಡಲಾಗಿದೆಯೇ?
  • ಈ ಬಗ್ಗೆ ನಿರ್ದೇಶಕ ನಿತೇಶ್ ಕುಮಾರ್ ಮಾತನಾಡಿದ್ದಾರೆ
  • ‘ರಾಮಾಯಣ’ ಸಿನಿಮಾ ಶೀಘ್ರವೇ ರಿಲೀಸ್ ಆಗಲಿದೆ

ಇತ್ತೀಚೆಗೆ ಸಿನಿಮಾಗಳಲ್ಲಿ ಎಐ ಬಳಕೆ ಎಂಬುದು ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಖರ್ಚು ಕಡಿಮೆ ಮಾಡಲು ಹಲವು ನಿರ್ದೇಶಕರುಗಳು ಎಐ ಬಳಕೆ ಮಾಡಿ ದೃಶ್ಯಗಳನ್ನು ಸೃಷ್ಟಿಸುತ್ತಿದ್ದಾರೆ. ಎಐ ಬಳಸಿ ಕಠಿಣದಲ್ಲೇ ಕಠಿಣ ದೃಶ್ಯಗಳನ್ನು ಸಹ ಸುಲಭವಾಗಿ ಸೃಷ್ಟಿಸಬಹುದಾಗಿದೆ. ಹಾಗಾಗಿ ಹಲವು ನಿರ್ಮಾಪಕರು, ನಿರ್ದೇಶಕರು ಎಐ ಬಳಕೆ ಮಾಡುತ್ತಿದ್ದಾರೆ. ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ‘ರಾಮಾಯಣ’ ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ. ಸಿನಿಮಾದ ಬಗ್ಗೆ ಚರ್ಚೆ ಜೋರಾಗಿದೆ. ಆದರೆ ಈ ಸಿನಿಮಾನಲ್ಲಿ ಎಐ ಬಳಕೆ ಮಾಡಲಾಗಿದೆ ಎಂಬ ‘ಆರೋಪ’ದ ಬಗ್ಗೆ ನಿರ್ದೇಶಕ ನಿತೀಶ್ ತಿವಾರಿ ಸ್ಪಷ್ಟನೆ ನೀಡಿದ್ದಾರೆ.

‘ರಾಮಾಯಣ’ ಸಿನಿಮಾದ ಗ್ರ್ಯಾಂಡ್ ಪ್ರೀಮಿಯರ್ ಅಕ್ಟೋಬರ್ 27 ರಂದು ಲಾಸ್ ಏಂಜಲೀಸ್‌ನಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ನಿರ್ಮಾಪಕ ನಮಿತ್ ಮಲ್ಹೋತ್ರಾ, ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಅವರು ಸಾಂಪ್ರದಾಯಿಕ ಉಡುಪಿನಲ್ಲಿ ಭಾಗವಹಿಸಿದ್ದರು. ನಿರ್ದೇಶಕ ನಿತೀಶ್ ಸಹ ಜೊತೆಗಿದ್ದರು. ಸಿನಿಮಾದ ಪ್ರೀಮಿಯರ್ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ, ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಸಿನಿಮಾದ ನಿರ್ಮಾಣ ಕಾರ್ಯದಲ್ಲಿ ಎಐ ಬಳಕೆ ಮಾಡಿರುವ ಬಗ್ಗೆ ಮಾತನಾಡಿದರು.

ಸಿನಿಮಾನಲ್ಲಿ ಕಾಣುವ ಎಲ್ಲ ದೃಶ್ಯಗಳು ಚಿತ್ರೀಕರಣ ಮತ್ತು ವಿಎಫ್​​ಎಕ್ಸ್ ನೆರವಿನಿಂದಲೇ ಮಾಡಲಾಗಿದೆ ಎಂದ ನಿತೀಶ್, ‘ಎಐ’ ಅನ್ನು ಪಾತ್ರಗಳ ತುಟಿಗಳ ಚಲನೆಯನ್ನು ಹೊಂದಿಸಲು ಮಾತ್ರವೇ ಬಳಸಲಾಗಿದೆ ಎಂದಿದ್ದಾರೆ. ‘ರಾಮಾಯಣ’ ಸಿನಿಮಾವನ್ನು ಹಿಂದಿ ಮಾತ್ರವೇ ಅಲ್ಲದೆ ಭಾರತದ ಹಲವು ಭಾಷೆಗಳ ಜೊತೆಗೆ ಕೆಲ ವಿದೇಶಿ ಭಾಷೆಗಳಿಗೂ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ಹಾಗಾಗಿ ಪಾತ್ರಗಳ ತುಟಿಗಳ ಚಲನೆ, ಆಯಾ ಭಾಷೆಗೆ, ಸಂಭಾಷಣೆಗೆ ತಕ್ಕಂತೆ ಇರುವಂತೆ ತೋರಿಸಲು ಮಾತ್ರವೇ ಎಐ ಬಳಸಲಾಗಿದೆ. ಬೇರೆ ಬೇರೆ ಭಾಷೆಗಳಿಗೆ ಡಬ್ಬಿಂಗ್ ಅನ್ನು ಸಹ ಡಬ್ಬಿಂಗ್ ಕಲಾವಿದರೇ ಮಾಡಿದ್ದಾರೆ ಎಂದು ನಿತೀಶ್ ಮಾಹಿತಿ ನೀಡಿದರು.

ಇದನ್ನೂ ಓದಿ:ತೆಲುಗು ಸಿನಿಮಾ ‘ಕಲ್ಟ್’ಗೆ ಸಂಗೀತ ನೀಡುತ್ತಿರುವ ರವಿ ಬಸ್ರೂರು: ವಿಡಿಯೋ ನೋಡಿ

‘ಎಐ ಗೆ ಸಂಬಂಧಿಸಿದಂತೆ, ಪ್ರಪಂಚದ ಜನರಿಗೆ ಅವರದೇ ಭಾಷೆಯಲ್ಲಿ ಚಿತ್ರವನ್ನು ತಲುಪಿಸಲು ತುಟಿಗಳ ಚಲನೆಯನ್ನು (lip-sync) ಹೊಂದಿಸಲು ಮಾತ್ರ ಇದನ್ನು ಬಳಸಲಾಗುತ್ತಿದೆ. ಎಲ್ಲಾ ಧ್ವನಿಗಳನ್ನು ಕಲಾವಿದರೇ ಡಬ್ ಮಾಡಿದ್ದಾರೆ. ಪ್ರೇಕ್ಷಕರು ತಮ್ಮ ಮಾತೃಭಾಷೆಯಲ್ಲಿ ಆನಂದಿಸಲು ತಕ್ಕಂತೆ ತುಟಿಗಳ ಚಲನೆಯನ್ನು ಸರಿಯಾಗಿ ತರಲು ಮಾತ್ರ AI ಬಳಸಲಾಗಿದೆ. ಡಬ್ಬಿಂಗ್‌ನಲ್ಲಿ ಯಾವುದೇ AI ಬಳಸಿಲ್ಲ, ಧ್ವನಿಯನ್ನು ನೈಜ ಕಲಾವಿದರೇ ಡಬ್ ಮಾಡಿದ್ದಾರೆ, ತುಟಿಗಳ ಚಲನೆಗೆ ಮಾತ್ರ AI ಬಳಸಲಾಗಿದೆ” ಎಂದರು.

‘ರಾಮಾಯಣ’ ಸಿನಿಮಾವು ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾ ಅನ್ನು ನಿತೀಶ್ ನಿರ್ದೇಶನ ಮಾಡಿದ್ದು, ರಣ್​​ಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಅವರುಗಳು ಪ್ರಮುಖ ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ. ಸಿನಿಮಾನಲ್ಲಿ ಇನ್ನೂ ಹಲವು ಸ್ಟಾರ್ ನಟ-ನಟಿಯರು ನಟನೆ ಮಾಡಿದ್ದು, ಸಿನಿಮಾ ನವೆಂಬರ್ 5 ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಬೆಂಗಳೂರು ಕ್ಲೀನಿಂಗ್​ಗೆ ಹೊಸ ಯೋಜನೆ ಘೋಷಿಸಿದ ಸಚಿವ ಕೃಷ್ಣಬೈರೇಗೌಡ
ಬೆಂಗಳೂರು ಕ್ಲೀನಿಂಗ್​ಗೆ ಹೊಸ ಯೋಜನೆ ಘೋಷಿಸಿದ ಸಚಿವ ಕೃಷ್ಣಬೈರೇಗೌಡ
ಬಳ್ಳಾರಿಯ ಹೋಟೆಲ್, ಬೇಕರಿಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ
ಬಳ್ಳಾರಿಯ ಹೋಟೆಲ್, ಬೇಕರಿಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ
ಫ್ರೀ ಟೀ-ಕಾಫಿಗಾಗಿ ಬೇಕರಿ ಒಡತಿಗೆ ಜೀವ ಬೆದರಿಕೆ!
ಫ್ರೀ ಟೀ-ಕಾಫಿಗಾಗಿ ಬೇಕರಿ ಒಡತಿಗೆ ಜೀವ ಬೆದರಿಕೆ!
ಬರದಿಂದ ತತ್ತರಿಸಿದ್ದ ಬೆಂಗಳೂರು ದಕ್ಷಿಣದಲ್ಲಿ ವರುಣ ಕೃಪೆ: ಕೆರೆಗಳು ಫುಲ್!
ಬರದಿಂದ ತತ್ತರಿಸಿದ್ದ ಬೆಂಗಳೂರು ದಕ್ಷಿಣದಲ್ಲಿ ವರುಣ ಕೃಪೆ: ಕೆರೆಗಳು ಫುಲ್!
'ಮತದಾರರ ತೀರ್ಪನ್ನು ಗೌರವಪೂರ್ವಕವಾಗಿ ಸ್ವೀಕರಿಸುತ್ತೇವೆ': ಸಿಎಂ ಡಿಕೆಶಿ
'ಮತದಾರರ ತೀರ್ಪನ್ನು ಗೌರವಪೂರ್ವಕವಾಗಿ ಸ್ವೀಕರಿಸುತ್ತೇವೆ': ಸಿಎಂ ಡಿಕೆಶಿ
'ಪ್ರಜ್ವಲ್​​ ರೇವಣ್ಣ ಸಿ.ಡಿ ತಂದುಕೊಟ್ಟಿದ್ದೇ ಕುಮಾರಸ್ವಾಮಿಯಂತೆ'
'ಪ್ರಜ್ವಲ್​​ ರೇವಣ್ಣ ಸಿ.ಡಿ ತಂದುಕೊಟ್ಟಿದ್ದೇ ಕುಮಾರಸ್ವಾಮಿಯಂತೆ'
ಬಿಜೆಪಿ-ಜೆಡಿಎಸ್​​ ಒಂದಾಗಿರುವ ಕಾರಣ ಅವರ ಶಕ್ತಿ ಹೆಚ್ಚಿದೆ: ಸತೀಶ್​​
ಬಿಜೆಪಿ-ಜೆಡಿಎಸ್​​ ಒಂದಾಗಿರುವ ಕಾರಣ ಅವರ ಶಕ್ತಿ ಹೆಚ್ಚಿದೆ: ಸತೀಶ್​​
ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿ ಉರಿದ ಪಲ್ಸರ್ ಬೈಕ್!
ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿ ಉರಿದ ಪಲ್ಸರ್ ಬೈಕ್!
ಸೌಜನ್ಯ ಪ್ರಕರಣ ಮರುತನಿಖೆ: ಸಿಎಂ ಡಿಕೆಶಿ ಭೇಟಿಯಾದ ಎಸ್‌ಐಟಿ ಮುಖ್ಯಸ್ಥ
ಸೌಜನ್ಯ ಪ್ರಕರಣ ಮರುತನಿಖೆ: ಸಿಎಂ ಡಿಕೆಶಿ ಭೇಟಿಯಾದ ಎಸ್‌ಐಟಿ ಮುಖ್ಯಸ್ಥ
ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ವ್ಹೀಲ್ ಚೇರ್‌ನಲ್ಲಿ ಕಸ ಸಾಗಾಟ!
ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ವ್ಹೀಲ್ ಚೇರ್‌ನಲ್ಲಿ ಕಸ ಸಾಗಾಟ!