
ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ನಟನೆಯ ‘ರಾಮಾಯಣ’ ಸಿನಿಮಾ ಬಿಡುಗಡೆಗೆ ಇನ್ನೂ 15 ದಿನಗಳಷ್ಟೆ ಬಾಕಿ ಇದೆ. ಎರಡು ವಾರಗಳ ಮುಂಚಿತವಾಗಿಯೇ ಚಿತ್ರತಂಡ ಮುಂಗಡ ಬುಕಿಂಗ್ ಆರಂಭಿಸಿದ್ದು, ಮೊದಲ ದಿನ ಅಂತ್ಯಕ್ಕೆ ಮುಂಚೆಯೇ ಒಳ್ಳೆಯ ಮೊತ್ತದ ಗಳಿಕೆಯೇ ಆಗಿದೆ. ಅಕ್ಟೋಬರ್ 20 ರಂದು ಭಾರತದ ಪ್ರಮುಖ ನಗರಗಳ ಆಯ್ದ ಚಿತ್ರಮಂದಿರಗಳಲ್ಲಿ ‘ರಾಮಾಯಣ’ ಸಿನಿಮಾದ ಮುಂಗಡ ಬುಕಿಂಗ್ ಆರಂಭ ಆಗಿದೆ. ಮುಂಬೈನಲ್ಲಂತೂ ಭರ್ಜರಿಯಾಗಿ ಮುಂಗಡ ಬುಕಿಂಗ್ ಚಾಲ್ತಿಯಲ್ಲಿದೆ.
ಅಕ್ಟೋಬರ್ 20ರಂದು ಭಾರತದಲ್ಲಿ ಟಿಕೆಟ್ ಬುಕಿಂಗ್ ಆರಂಭವಾಗಿದ್ದು, ಮೊದಲ 24 ಗಂಟೆ ಕಳೆಯುವ ಮುಂಚೆಯೇ 3 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಮುಂಗಡ ಬುಕಿಂಗ್ ಮಾರಾಟ ಮಾಡಲಾಗಿದೆ. ಸಿನಿಮಾ ಬಿಡುಗಡೆಗೆ ಇನ್ನೂ ಹದಿನೈದು ದಿನ ಇರುವಾಗಲೇ ಇಷ್ಟು ಮೊತ್ತದ ಟಿಕೆಟ್ ಮಾರಾಟ ಆಗಿರುವುದು ಸಾಮಾನ್ಯ ಅಂಶವಲ್ಲ. ಪ್ರಸ್ತುತ ಮುಂಬೈ, ಪುಣೆ, ಬೆಂಗಳೂರು, ದೆಹಲಿ, ಅಹಮದಾಬಾದ್ ಅಂಥಹ ಕೆಲ ಪ್ರಮುಖ ನಗರಗಳಲ್ಲಿ ಮಾತ್ರವೇ ಮುಂಗಡ ಬುಕಿಂಗ್ ಆರಂಭವಾಗಿದೆ. ಆಂಧ್ರ, ತೆಲಂಗಾಣ, ತಮಿಳುನಾಡುಗಳಲ್ಲಿ ಮುಂಗಡ ಬುಕಿಂಗ್ ಇನ್ನಷ್ಟೆ ಆರಂಭ ಆಗಬೇಕಿದೆ.
ಬೆಂಗಳೂರಿನಲ್ಲಿ ಸಹ ಪ್ರಸ್ತುತ ಕನ್ನಡ ಮತ್ತು ತೆಲುಗು ಆವೃತ್ತಿಗಳಿಗೆ ಮಾತ್ರವೇ ಮುಂಗಡ ಬುಕಿಂಗ್ ನೀಡಲಾಗಿದೆ. ಹಿಂದಿ ಆವೃತ್ತಿಯ ಯಾವುದೇ ಶೋ ಇಲ್ಲ. ಅಲ್ಲದೆ, ಸದ್ಯಕ್ಕೆ ಬೆಂಗಳೂರಿನಲ್ಲಿ ಶೋಗಳ ಸಂಖ್ಯೆಯೂ ಕಡಿಮೆ ಇವೆ. ದಿನಗಳು ಕಳೆದಂತೆ ಶೋಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಸಕ್ನಿಲ್ಕ್ ವರದಿಯ ಪ್ರಕಾರ, ‘ರಾಮಾಯಣ’ ಚಿತ್ರವು ಮುಂಗಡ ಬುಕಿಂಗ್‌ನಲ್ಲಿ ಮೊದಲ ದಿನಕ್ಕೆ 3.13 ಕೋಟಿ ರೂ.ಗಳನ್ನು ಮುಂಗಡ ಬುಕಿಂಗ್ನಿಂದ ಸಂಗ್ರಹ ಮಾಡಿದೆ. ಮೊದಲ ದಿನ ಸುಮಾರು 86,187 ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಇನ್ನು ಅಮೆರಿಕ ಸೇರಿದಂತೆ ಇನ್ನು ಕೆಲ ವಿದೇಶಗಳಲ್ಲಿಯೂ ಸಹ ಸಿನಿಮಾದ ಮುಂಗಡ ಬುಕಿಂಗ್ ಆರಂಭವಾಗಿದ್ದು, ವಿದೇಶದಲ್ಲೂ ಸಹ ಸಿನಿಮಾಕ್ಕೆ ಒಳ್ಳೆಯ ಬೇಡಿಕೆ ಇದೆ.
ಇದನ್ನೂ ಓದಿ:‘ಕೆಜಿಎಫ್ ನೋಡಿ ನಾನು ಯಶ್ ಅಭಿಮಾನಿಯಾದೆ’; ರಣಬೀರ್ ಕಪೂರ್
ದೆಹಲಿ ಮತ್ತು ಮುಂಬೈನಲ್ಲಿ ಹೆಚ್ಚಿಗೆ ಟಿಕೆಟ್ಗಳು ಮುಂಗಡವಾಗಿ ಬುಕ್ ಆಗಿವೆ. ಮುಂಬೈನಲ್ಲಿ, 2,770 ರೂ. ಬೆಲೆಯ ಟಿಕೆಟ್‌ಗಳನ್ನು ಹೊಂದಿರುವ ಪಿವಿಆರ್ ಫೀನಿಕ್ಸ್ ಪಲ್ಲಾಡಿಯಮ್ ಪ್ರದರ್ಶನವು ಹೌಸ್‌ಫುಲ್ ಆಗಿದೆ. ಅದು ಮಾತ್ರವೇ ಅಲ್ಲದೆ ಬೇರೆ ಕೆಲವು ಪ್ರತಿಷ್ಠಿತ ಮಲ್ಟಿಪ್ಲೆಕ್ಸ್ಗಳು ಸಹ ಭರ್ತಿ ಆಗುತ್ತಿವೆ. ದೆಹಲಿಯಲ್ಲಿ ಬೆಳಿಗ್ಗೆ 7 ಗಂಟೆಯಿಂದಲೇ ಶೋಗಳು ಆರಂಭ ಆಗುತ್ತಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ