ರಾವಣನ ಪಾತ್ರ ಮಾಡಿದ ಯಶ್​ನ ಹಾಡಿ ಹೊಗಳಿದ ರಣಬೀರ್ ಕಪೂರ್

Ranbir Kapoor: ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಟೀಸರ್ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ರಣಬೀರ್ ಕಪೂರ್ ರಾಮನಾಗಿ ಮತ್ತು ಯಶ್ ರಾವಣನಾಗಿ ನಟಿಸಿದ್ದಾರೆ. ಯಶ್ ಅವರ ರಾವಣ ಪಾತ್ರದ ಬಗ್ಗೆ ರಣಬೀರ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ಸ್ಟಾರ್‌ಡಮ್ ಮತ್ತು ವ್ಯಾಖ್ಯಾನವನ್ನು ಶ್ಲಾಘಿಸಿದ್ದಾರೆ.

ರಾವಣನ ಪಾತ್ರ ಮಾಡಿದ ಯಶ್​ನ ಹಾಡಿ ಹೊಗಳಿದ ರಣಬೀರ್ ಕಪೂರ್
Ranbir Kapoor (6)

Updated on: Apr 03, 2026 | 9:16 AM

ರಾಕಿಂಗ್ ಸ್ಟಾರ್ ಯಶ್, ರಣಬೀರ್ ಕಪೂರ್, ಸನ್ನಿ ಡಿಯೋಲ್, ಸಾಯಿ ಪಲ್ಲವಿ ಸೇರಿದಂತೆ ಅನೇಕರು ‘ರಾಮಾಯಣ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟೀಸರ್ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಕೆಲವರು ಟೀಸರ್ ಹೊಗಳಿದರೆ ಇನ್ನೂ ಕೆಲವರು ಇದನ್ನು ಎಐ ವಿಡಿಯೋ ಎಂದು ಕರೆದಿದ್ದಾರೆ. ಹೀಗಿರುವಾಗಲೇ ರಾವಣನ ಪಾತ್ರ ಮಾಡಿದ ಯಶ್ ಅವರನ್ನು ರಣಬೀರ್ ಕಪೂರ್ ಹಾಡಿ ಹೊಗಳಿದ್ದಾರೆ.

‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್ ಅವರು ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ 2ರಂದು ರಿಲೀಸ್ ಆದ ಟೀಸರ್ ಅಲ್ಲಿ ರಾಮನ ಪಾತ್ರವನ್ನೇ ಹೈಲೈಟ್ ಮಾಡಲಾಗಿದೆ. ಹನುಮ ಜಯಂತಿಯಂದು ಟೀಸರ್ ರಿಲೀಸ್ ಆಗಿದೆ. ಆದರೆ, ಹನುಮಂತನ ಪಾತ್ರವನ್ನೇ ತೋರಿಸಿಲ್ಲ. ಇದು ಚರ್ಚೆಗೆ ಕಾರಣ ಆಗಿದೆ. ಸಿನಿಮಾದಲ್ಲಿ ಯಶ್ ಮುಖ ತೋರಿಸದೇ ಇದ್ದರೂ ಅವರ ಪಾತ್ರ ಗಮನ ಸೆಳೆಯುವ ರೀತಿಯಲ್ಲಿ ಇದೆ.

‘ರಾಮಾಯಣ’ ಸಿನಿಮಾದಲ್ಲಿ ಯಶ್ ಪಾತ್ರ ಪ್ರಮುಖವಾಗಲಿದೆ. ಏಕೆಂದರೆ ಅವರು ಮಾಡುತ್ತಿರುವುದು ರಾವಣನ ಪಾತ್ರ. ಈ ಪಾತ್ರ ಹೇಗಿದೆ ಎಂಬುದರ ಝಲಕ್ ತೋರಿಸಲಾಗಿದೆ. ಆದರೆ, ಪಾತ್ರ ಸಂಪೂರ್ಣವಾಗಿ ರಿವೀಲ್ ಮಾಡಿಲ್ಲ. ಯಶ್ ಬಗ್ಗೆ ಹಾಗೂ ಅವರ ಜನಪ್ರಿಯತೆ ಬಗ್ಗೆ ರಣಬೀರ್ ಮಾತನಾಡಿದ್ದಾರೆ.

‘ಯಶ್ ಅವರು ಸಾಕಷ್ಟು ಸ್ಟಾರ್​​ಡಂ ಜೊತೆ ಬಂದಿದ್ದಾರೆ. ರಾವಣನ ಪಾತ್ರ ಮಾಡಲು ಅಷ್ಟು ಜನಪ್ರಿಯತೆ ಇರಬೇಕು. ರಾವಣನ ಬಗ್ಗೆ ಅವರಿಗೆ ಇರುವ ವ್ಯಾಖ್ಯಾನ ಬೇರೆಯದೇ ಇದೆ. ಇದನ್ನು ಪ್ರೇಕ್ಷಕರು ಎಂಜಾಯ್ ಮಾಡುತ್ತಾರೆ’ ಎಂದು ರಣಬೀರ್ ಕಪೂರ್ ಹೇಳಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ ಟೀಸರ್​ನಲ್ಲಿ ದೊಡ್ಡ ತಪ್ಪು; AI ಅಲ್ಲಿ ಮಾಡಿದ್ದು ಎಂದು ಕಂಡು ಹಿಡಿದ ಫ್ಯಾನ್ಸ್

ಯಶ್ ಅವರು ಇತ್ತೀಚೆಗೆ ‘ರಾಮಾಯಣ’ ಸಿನಿಮಾದ ಡಬ್ಬಿಂಗ್ ಮುಗಿಸಿಕೊಟ್ಟಿದ್ದಾರೆ. ಕನ್ನಡದ ಜೊತೆಗೆ ಅವರು ಹಿಂದಿಯಲ್ಲೂ ಡಬ್ ಮಾಡಿದರೇ ಎಂಬ ಕುತೂಹಲ ಮೂಡಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾ ಈ ವರ್ಷ ದೀಪಾವಳಿಗೆ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us