Animal Release Date: ‘ಅನಿಮಲ್​’ ಆಗಮನಕ್ಕೆ ಹೊಸ ದಿನಾಂಕ ನಿಗದಿ: ಡಿ.1ಕ್ಕೆ ಬರಲಿದೆ ರಶ್ಮಿಕಾ-ರಣಬೀರ್​ ಜೋಡಿಯ ಚಿತ್ರ

Rashmika Mandanna: ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ ಅವರು ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ರಣಬೀರ್​ ಕಪೂರ್​ ಅವರ ವಿಶ್ವರೂಪ ದರ್ಶನ ಮಾಡಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

Animal Release Date: ‘ಅನಿಮಲ್​’ ಆಗಮನಕ್ಕೆ ಹೊಸ ದಿನಾಂಕ ನಿಗದಿ: ಡಿ.1ಕ್ಕೆ ಬರಲಿದೆ ರಶ್ಮಿಕಾ-ರಣಬೀರ್​ ಜೋಡಿಯ ಚಿತ್ರ
ರಣಬೀರ್​ ಕಪೂರ್​, ರಶ್ಮಿಕಾ ಮಂದಣ್ಣ

Updated on: Jul 03, 2023 | 4:23 PM

ಬಾಲಿವುಡ್​ ನಟ ರಣಬೀರ್​ ಕಪೂರ್​ (Ranbir Kapoor) ಮತ್ತು ರಶ್ಮಿಕಾ ಮಂದಣ್ಣ ಅವರು ಜೋಡಿಯಾಗಿ ನಟಿಸಿರುವ ‘ಅನಿಮಲ್​’ ಸಿನಿಮಾದ ಬಗ್ಗೆ ಬ್ರೇಕಿಂಗ್​ ನ್ಯೂಸ್​ ಕೇಳಿಬಂದಿದೆ. ಈ ಚಿತ್ರದ ರಿಲೀಸ್​ ದಿನಾಂಕ ಮುಂದೂಡಿಕೆ ಆಗಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಅದರ ಬೆನ್ನಲ್ಲೇ ಚಿತ್ರತಂಡದಿಂದ ಹೊಸ ರಿಲೀಸ್​ ಡೇಟ್​ (Animal Movie Release Date) ಘೋಷಣೆ ಆಗಿದೆ. ಡಿಸೆಂಬರ್​ 1ರಂದು ‘ಅನಿಮಲ್​’ ಸಿನಿಮಾ ಬಿಡುಗಡೆ ಆಗಲಿದೆ. ಈ ಬಗ್ಗೆ ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ (Sandeep Reddy Vanga) ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ, ಚಿತ್ರತಂಡದವರು ರಿಲೀಸ್​ ದಿನಾಂಕ ಮುಂದೂಡಿದ್ದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ಒಂದಷ್ಟು ಪ್ರಾಕ್ಟಿಕಲ್​ ಕಾರಣಗಳನ್ನು ಸಂದೀಪ್​ ರೆಡ್ಡಿ ವಂಗಾ ನೀಡಿದ್ದಾರೆ.

ಆಗಸ್ಟ್​ 11ರಂದು ‘ಅನಿಮಲ್​’ ಬಿಡುಗಡೆ ಆಗಲಿದೆ ಎಂದು ಈ ಮೊದಲು ಘೋಷಿಸಲಾಗಿತ್ತು. ಪ್ರೀ-ಟೀಸರ್​ ಬಿಡುಗಡೆ ಮಾಡಿ ನಿರೀಕ್ಷೆ ಹೆಚ್ಚಿಸುವ ಕೆಲಸ ಆಗಿತ್ತು. ನೆಟ್ಟಿಗರಿಂದ ಪ್ರೀ-ಟೀಸರ್​ ವಿಡಿಯೋಗೆ ಸಖತ್​ ಮೆಚ್ಚುಗೆ ವ್ಯಕ್ತವಾಗಿತ್ತು. ಇನ್ನೇನು ‘ಅನಿಮಲ್​’ ಸಿನಿಮಾವನ್ನು ದೊಡ್ಡ ಪರದೆಯಲ್ಲಿ ನೋಡಬೇಕು ಎಂದುಕೊಂಡಿದ್ದ ಎಲ್ಲರಿಗೂ ನಿರಾಸೆ ಆಯಿತು. ಆಗಸ್ಟ್​ 11ಕ್ಕೆ ‘ಅನಿಮಲ್​’ ಸಿನಿಮಾವನ್ನು ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಸುದ್ದಿ ಇತ್ತೀಚೆಗೆ ಹೊರಬಿತ್ತು. ನಿರ್ದೇಶಕರ ಈ ನಿರ್ಧಾರದ ಹಿಂದೆ ಒಂದು ಒಳ್ಳೆಯ ಕಾರಣ ಇದೆ. ಪ್ರೇಕ್ಷಕರಿಗೆ ಗುಣಮಟ್ಟದ ಸಿನಿಮಾವನ್ನು ನೀಡಬೇಕು ಎಂಬ ಕಾರಣಕ್ಕೆ ಸಂದೀಪ್​ ರೆಡ್ಡಿ ವಂಗಾ ಅವರು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Animal Movie: ಬದಲಾಯ್ತು ‘ಅನಿಮಲ್​’ ಬಿಡುಗಡೆ ದಿನಾಂಕ; ತಪ್ಪಿತು ಗಂಡ-ಹೆಂಡತಿ ನಡುವಿನ ಕ್ಲ್ಯಾಶ್​

‘ಅನಿಮಲ್​’ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಮೂಡಿಬರುತ್ತಿದೆ. ಹಿಂದಿ, ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳಿನಲ್ಲಿ ಈ ಸಿನಿಮಾ ತೆರೆಕಾಣಲಿದೆ. ಚಿತ್ರದಲ್ಲಿ ಒಟ್ಟು 7 ಹಾಡುಗಳು ಇವೆ. ಪ್ರತಿ ಭಾಷೆಯ ಹಾಡುಗಳು ಪ್ರತ್ಯೇಕವಾಗಿ ಸಿದ್ಧವಾಗುತ್ತಿವೆ. ಎಲ್ಲವನ್ನೂ ಸೇರಿದರೆ 35 ಹಾಡುಗಳು ಆಗಲಿವೆ. ಆ ಎಲ್ಲ ಹಾಡುಗಳಲ್ಲಿ ಸಾಹಿತ್ಯದ ಗುಣಮಟ್ಟ ಚೆನ್ನಾಗಿರಬೇಕು ಎಂಬುದು ನಿರ್ದೇಶಕರ ಕಾಳಜಿ. ಇದು ಡಬ್ಬಿಂಗ್​ ಸಿನಿಮಾ ಅಂತ ಅನಿಸಬಾರದು ಎಂಬ ಉದ್ದೇಶದಿಂದ ಎಲ್ಲವನ್ನೂ ಪರ್ಫೆಕ್ಟ್​ ಆಗಿ ಮಾಡಲು ಅವರು ತೀರ್ಮಾನಿಸಿದ್ದಾರೆ. ಹಾಗಾಗಿ ರಿಲೀಸ್​ ತಡವಾಗುತ್ತಿದೆ.

ಇದನ್ನೂ ಓದಿ: Rashmika Mandanna: ‘ಅನಿಮಲ್​’ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನೀಡಿದ್ದ 50 ದಿನದ ಕಾಲ್​ಶೀಟ್​ ಅಂತ್ಯ; ಮುಂದಿನ ಗುರಿ ‘ಪುಷ್ಪ 2’

ರಣಬೀರ್​ ಕಪೂರ್​​ ಮತ್ತು ರಶ್ಮಿಕಾ ಮಂದಣ್ಣ ಮಾತ್ರವಲ್ಲದೇ ಇನ್ನೂ ಅನೇಕ ಘಟಾನುಘಟಿ ಕಲಾವಿದರು ಕೂಡ ‘ಅನಿಮಲ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅನಿಲ್​ ಕಪೂರ್​, ಬಾಬಿ ಡಿಯೋಲ್​, ತೃಪ್ತಿ ದಿಮ್ರಿ ಮುಂತಾದವರು ಬಣ್ಣ ಹಚ್ಚಿದ್ದಾರೆ. ಇದು ಆ್ಯಕ್ಷನ್​ ಪ್ರಧಾನ ಸಿನಿಮಾ ಆಗಿರಲಿದೆ. ‘ರಣಬೀರ್​ ಕಪೂರ್ ಅವರ ವಿಶ್ವರೂಪ ನೋಡಲು ಡಿಸೆಂಬರ್​ 1ರಂದು ಚಿತ್ರಮಂದಿರಕ್ಕೆ ಬನ್ನಿ’ ಎಂದು ಸಂದೀಪ್​ ರೆಡ್ಡಿ ವಂಗ ಅವರು ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us