AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Animal Movie: ಬದಲಾಯ್ತು ‘ಅನಿಮಲ್​’ ಬಿಡುಗಡೆ ದಿನಾಂಕ; ತಪ್ಪಿತು ಗಂಡ-ಹೆಂಡತಿ ನಡುವಿನ ಕ್ಲ್ಯಾಶ್​

‘ಅನಿಮಲ್​’ ಸಿನಿಮಾಗೆ ಸಂದೀಪ್​ ರೆಡ್ಡಿ ವಂಗಾ ಅವರು ನಿರ್ದೇಶನ ಮಾಡಿದ್ದಾರೆ. ರಣಬೀರ್​ ಕಪೂರ್​ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.

Animal Movie: ಬದಲಾಯ್ತು ‘ಅನಿಮಲ್​’ ಬಿಡುಗಡೆ ದಿನಾಂಕ; ತಪ್ಪಿತು ಗಂಡ-ಹೆಂಡತಿ ನಡುವಿನ ಕ್ಲ್ಯಾಶ್​
ರಶ್ಮಿಕಾ ಮಂದಣ್ಣ, ರಣಬೀರ್ ಕಪೂರ್
ಮದನ್​ ಕುಮಾರ್​
|

Updated on:Jul 02, 2023 | 7:26 AM

Share

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಅನಿಮಲ್​’ ಚಿತ್ರ (Animal Movie) ಕೂಡ ಇದೆ. ಆಗಸ್ಟ್​ 11ರಂದು ಈ ಚಿತ್ರ ಬಿಡುಗಡೆ ಆಗಲಿದೆ ಎಂದು ಅಭಿಮಾನಿಗಳು ಕಾದಿದ್ದರು. ಅದಕ್ಕಾಗಿ ಚಿತ್ರತಂಡ ಪ್ರಚಾರವನ್ನೂ ಆರಂಭಿಸಿತ್ತು. ಆದರೆ ಈಗ ಬೇಸರದ ಸುದ್ದಿ ಕೇಳಿಬಂದಿದೆ. ಕಾರಣಾಂತರಗಳಿಂದ ಈ ಸಿನಿಮಾದ ರಿಲೀಸ್​​ ಡೇಟ್​ ಮುಂದಕ್ಕೆ ಹೋಗಿದೆ. ಈ ಚಿತ್ರದಲ್ಲಿ ರಣಬೀರ್​ ಕಪೂರ್​ (Ranbir Kapoor) ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಇದೊಂದು ಆ್ಯಕ್ಷನ್​ ಸಿನಿಮಾ. ಅದಕ್ಕೆ ಸಾಕ್ಷಿ ಎಂಬಂತೆ ಕೆಲವೇ ದಿನಗಳ ಹಿಂದೆ ಪ್ರೀ-ಟೀಸರ್​ ವಿಡಿಯೋ ರಿಲೀಸ್​ ಮಾಡಲಾಗಿತ್ತು. ಆದರೆ ಈಗ ‘ಅನಿಮಲ್​’ ರಿಲೀಸ್​ ಡೇಟ್​ (Animal Release Date) ಮುಂದಕ್ಕೆ ಹೋಗಿರುವ ಬಗ್ಗೆ ಸುದ್ದಿ ಕೇಳಿಬಂದಿದೆ.

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆಗಸ್ಟ್​ 11ರಂದು ‘ಅನಿಮಲ್​’ ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಆ ಸಂದರ್ಭದಲ್ಲಿ ರಿಲೀಸ್​ ಆದರೆ ಉತ್ತಮ ರೆಸ್ಪಾನ್ಸ್​ ಸಿಗಲಿದೆ ಎಂಬುದು ಬಾಕ್ಸ್​ ಆಫೀಸ್​ ಬಲ್ಲವರ ನಂಬಿಕೆ. ಅದೇ ಉದ್ದೇಶದಿಂದ ‘ಅನಿಮಲ್​’ ಚಿತ್ರತಂಡ ಬಿಡುಗಡೆ ದಿನಾಂಕ ಫಿಕ್ಸ್​ ಮಾಡಿತ್ತು. ಈಗ ಏಕಾಏಕಿ ಮನಸ್ಸು ಬದಲಾಯಿಸಿ, ರಿಲೀಸ್​ ಡೇಟ್​ ಬದಲಾಯಿಸಿರುವುದು ಅಚ್ಚರಿ ಮೂಡಿಸಿದೆ.

Alia Bhatt: ‘ರಣಬೀರ್​ ಕಪೂರ್​ ಬೇಡ, ನೀವು ಮಾತ್ರ ಪೋಸ್​ ನೀಡಿ’: ಪಾಪರಾಜಿ ಮನವಿಗೆ ಆಲಿಯಾ ಪ್ರತಿಕ್ರಿಯೆ ಏನು?

‘ಅನಿಮಲ್​’ ಸಿನಿಮಾಗೆ ಸಂದೀಪ್​ ರೆಡ್ಡಿ ವಂಗಾ ಅವರು ನಿರ್ದೇಶನ ಮಾಡಿದ್ದಾರೆ. ‘ಅರ್ಜುನ್ ರೆಡ್ಡಿ’, ‘ಕಬೀರ್ ಸಿಂಗ್​’ ಸಿನಿಮಾಗಳಿಗೆ ಆ್ಯಕ್ಷನ್​-ಕಟ್​ ಹೇಳಿ ದೊಡ್ಡ ಯಶಸ್ಸು ಪಡೆದಿದ್ದ ಅವರು ಈಗ ರಣಬೀರ್​ ಕಪೂರ್​ ಜೊತೆ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿಸಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.

ರಾಮಾಯಣ ಕಥೆ ಆಧರಿತ ಸಿನಿಮಾದಲ್ಲಿ ಆಲಿಯಾ ಭಟ್​ಗೆ ಸೀತೆ ಪಾತ್ರ; ರಾಮನಾಗಿ ರಣಬೀರ್​ ಕಪೂರ್​?

ರಣಬೀರ್​ ಕಪೂರ್​ ಅವರ ಪತ್ನಿ ಆಲಿಯಾ ಭಟ್​ ಕೂಡ ಚಿತ್ರರಂಗದಲ್ಲಿ ಸಖತ್​ ಬ್ಯುಸಿ ಆಗಿದ್ದಾರೆ. ಅವರು ನಟಿಸಿರುವ ‘ಹಾರ್ಟ್​ ಆಫ್​ ಸ್ಟೋನ್​’ ಸಿನಿಮಾ ಆಗಸ್ಟ್​ 11ರಂದು ಒಟಿಟಿ ಮೂಲಕ ರಿಲೀಸ್​ ಆಗಲಿದೆ. ಅದೇ ದಿನಾಂಕದಲ್ಲಿ ‘ಅನಿಮಲ್​’ ಕೂಡ ಬಿಡುಗಡೆ ಆಗಿದ್ದರೆ ಇಬ್ಬರ ಸಿನಿಮಾಗಳ ನಡುವೆ ಕ್ಲ್ಯಾಶ್​ ಆಗುತ್ತಿತ್ತು. ಆದರೆ ‘ಅನಿಮಲ್​’ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿರುವುದರಿಂದ ಗಂಡ-ಹೆಂಡತಿ ನಡುವಿನ ಕ್ಲ್ಯಾಶ್​ ತಪ್ಪಿದಂತಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:14 am, Sun, 2 July 23

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More