ಸನ್ನಿ ಡಿಯೋಲ್​ ಬಳಿಕ ಅಬ್ಬರಿಸಲು ಸಜ್ಜಾದ ಬಾಬಿ ಡಿಯೋಲ್​; ‘ಅನಿಮಲ್​’ ಪೋಸ್ಟರ್​ ವೈರಲ್​

Bobby Deol: ಈ ಹಿಂದೆ ‘ಅರ್ಜುನ್​ ರೆಡ್ಡಿ’ ಮತ್ತು ‘ಕಬೀರ್​ ಸಿಂಗ್​’ ಸಿನಿಮಾಗಳಿಗೆ ನಿರ್ದೇಶನ ಮಾಡಿ ಗೆಲುವು ಕಂಡಿದ್ದ ನಿರ್ದೇಶಕ ಸಂದೀಪ್​ ರೆಡ್ಡಿ ವಂಗ ಅವರು ಈಗ ‘ಅನಿಮಲ್​’ ಸಿನಿಮಾವನ್ನು ಸಖತ್​ ಮಾಸ್​ ಆಗಿ ಕಟ್ಟಿಕೊಟ್ಟಿದ್ದಾರೆ. ಇಂದು (ಸೆಪ್ಟೆಂಬರ್​ 26) ಬಿಡುಗಡೆ ಆಗಿರುವ ಬಾಬಿ ಡಿಯೋಲ್​ ಅವರ ಪೋಸ್ಟರ್​ಗೆ ಜನರಿಂದ ಪಾಸಿಟಿವ್​ ಕಮೆಂಟ್​ಗಳು ಬರುತ್ತಿವೆ.

ಸನ್ನಿ ಡಿಯೋಲ್​ ಬಳಿಕ ಅಬ್ಬರಿಸಲು ಸಜ್ಜಾದ ಬಾಬಿ ಡಿಯೋಲ್​; ‘ಅನಿಮಲ್​’ ಪೋಸ್ಟರ್​ ವೈರಲ್​
ಬಾಬಿ ಡಿಯೋಲ್​

Updated on: Sep 26, 2023 | 12:08 PM

ನಟ ಸನ್ನಿ ಡಿಯೋಲ್​ (Sunny Deol) ಅವರಿಗೆ 2023ರ ವರ್ಷ ತುಂಬ ಲಾಭದಾಯಕವಾಗಿತ್ತು. ಅವರು ನಟಿಸಿದ ‘ಗದರ್​ 2’ ಸಿನಿಮಾ 500 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿತು. ಈ ಚಿತ್ರದಿಂದ ಸನ್ನಿ ಡಿಯೋಲ್​ ಅವರು ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳಿದರು. ಅವರ ಸಹೋದರ ಬಾಬಿ ಡಿಯೋಲ್​ (Bobby Deol) ಕೂಡ ಅಂತಹ ಒಂದು ಗೆಲುವಿಗಾಗಿ ಕಾದಿದ್ದಾರೆ. ಅವರಿಗೂ 2023ರಲ್ಲೇ ಸೂಪರ್​ ಸಕ್ಸಸ್​ ಸಿಗುವ ನಿರೀಕ್ಷೆ ಇದೆ. ರಣಬೀರ್​ ಕಪೂರ್​ ನಟನೆ ‘ಅನಿಮಲ್​’ (Animal Movie) ಸಿನಿಮಾದಲ್ಲಿ ಬಾಬಿ ಡಿಯೋಲ್​ ಅವರು ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾ ತಂಡದಿಂದ ಹೊಸ ಪೋಸ್ಟರ್​ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಬಾಬಿ ಡಿಯೋಲ್​ ಅವರ ಲುಕ್​ ಸಖತ್ ರಗಡ್​ ಆಗಿದೆ.

ಬಾಲ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ಬಾಬಿ ಡಿಯೋಲ್​. ಬಾಲಿವುಡ್​ನಲ್ಲಿ ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ಅವರು ನೀಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರಿಗೆ ನಿರೀಕ್ಷಿತ ಮಟ್ಟದ ಗೆಲುವು ಸಿಕ್ಕಿಲ್ಲ. ‘ಅನಿಮಲ್​’ ಸಿನಿಮಾ ಮೂಲಕ ಆ ಗೆಲುವು ಸಿಗುವ ನಿರೀಕ್ಷೆ ಇದೆ. ಈ ಚಿತ್ರ ಸಖತ್​ ಮಾಸ್​ ಆಗಿ ಮೂಡಿಬರುತ್ತಿದ್ದು, ಡಿಸೆಂಬರ್​ 1ರಂದು ಬಿಡುಗಡೆ ಆಗಲಿದೆ. ಈಗಾಗಲೇ ಬಿಡುಗಡೆ ಆಗಿರುವ ರಶ್ಮಿಕಾ ಮಂದಣ್ಣ, ರಣಬೀರ್​ ಕಪೂರ್​, ಅನಿಲ್​ ಕಪೂರ್​ ಅವರ ಪೋಸ್ಟರ್​ಗಳು ಗಮನ ಸೆಳೆದಿದೆ.

‘ಅನಿಮಲ್​’ ಸಿನಿಮಾಗೆ ಸಂದೀಪ್​ ರೆಡ್ಡಿ ವಂಗ ಅವರು ನಿರ್ದೇಶನ ಮಾಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಈಗಾಗಲೇ ಬಿಡುಗಡೆ ಆಗಿರಬೇಕಿತ್ತು. ಆದರೆ ಕೆಲಸಗಳು ಅಂದುಕೊಂಡ ದಿನಾಂಕದಲ್ಲಿ ಪೂರ್ಣಗೊಳ್ಳದ ಕಾರಣ ರಿಲೀಸ್​ ದಿನಾಂಕ ಮುಂದಕ್ಕೆ ಹೋಗಿದೆ. ಡಿಸೆಂಬರ್​ 1ರಂದು ಈ ಚಿತ್ರ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಕನ್ನಡ, ತೆಲುಗು ಸೇರಿದಂತೆ ಹಲವು ಭಾಷೆಗಳಿಗೆ ಡಬ್​ ಆಗಿ ಈ ಚಿತ್ರ ತೆರೆಕಾಣಲಿದೆ.

Animal Release Date: ‘ಅನಿಮಲ್​’ ಆಗಮನಕ್ಕೆ ಹೊಸ ದಿನಾಂಕ ನಿಗದಿ: ಡಿ.1ಕ್ಕೆ ಬರಲಿದೆ ರಶ್ಮಿಕಾ-ರಣಬೀರ್​ ಜೋಡಿಯ ಚಿತ್ರ

ಈ ಹಿಂದೆ ಸಂದೀಪ್​ ರೆಡ್ಡಿ ವಂಗ ಅವರು ‘ಅರ್ಜುನ್​ ರೆಡ್ಡಿ’ ಮತ್ತು ‘ಕಬೀರ್​ ಸಿಂಗ್​’ ಸಿನಿಮಾಗಳಿಗೆ ನಿರ್ದೇಶನ ಮಾಡಿ ಗೆಲುವು ಕಂಡಿದ್ದರು. ಈಗ ಅವರು ‘ಅನಿಮಲ್​’ ಸಿನಿಮಾವನ್ನು ಸಖತ್​ ಮಾಸ್​ ಆಗಿ ಕಟ್ಟಿಕೊಟ್ಟಿದ್ದಾರೆ. ಇಂದು (ಸೆಪ್ಟೆಂಬರ್​ 26) ಬಿಡುಗಡೆ ಆಗಿರುವ ಬಾಬಿ ಡಿಯೋಲ್​ ಅವರ ಪೋಸ್ಟರ್​ಗೆ ಜನರಿಂದ ಪಾಸಿಟಿವ್​ ಕಮೆಂಟ್​ಗಳು ಬರುತ್ತಿವೆ. ಈ ಸಿನಿಮಾದಲ್ಲಿ ರಣಬೀರ್​ ಕಪೂರ್​ಗಿಂತಲೂ ಬಾಬಿ ಡಿಯೋಲ್​ ಅವರೇ ಜಾಸ್ತಿ ಅಬ್ಬರಿಸಲಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ‘ಅನಿಮಲ್​’ ಸಿನಿಮಾ ಮೇಲೆ ಹೈಪ್​ ಸೃಷ್ಟಿ ಆಗಿದೆ. ಶೀಘ್ರದಲ್ಲೇ ಈ ಸಿನಿಮಾದ ಟೀಸರ್​ ಬಿಡುಗಡೆ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us