Alia Bhatt: ಆಲಿಯಾ ಭಟ್​ ತಾಳಿಸರದಲ್ಲಿ ಇದೆ ಒಂದು ವಿಶೇಷ; ವೈರಲ್​ ಆಗಿದೆ ಫೋಟೋ

Alia Bhatt Mangalsutra: ಬಾಲಿವುಡ್​ ನಟಿ ಆಲಿಯಾ ಭಟ್​ ಅವರ ಮಂಗಳಸೂತ್ರದಲ್ಲಿ ಇನ್ಫಿನಿಟಿ ಚಿಹ್ನೆ ಇದೆ. ಇದರಲ್ಲಿ ರಣಬೀರ್​ ಕಪೂರ್​ ಅವರ ಲಕ್ಕಿ ನಂಬರ್​ ಕೂಡ ಅಡಗಿದೆ.

Alia Bhatt: ಆಲಿಯಾ ಭಟ್​ ತಾಳಿಸರದಲ್ಲಿ ಇದೆ ಒಂದು ವಿಶೇಷ; ವೈರಲ್​ ಆಗಿದೆ ಫೋಟೋ
ಆಲಿಯಾ ಭಟ್​ ಮಂಗಳಸೂತ್ರ

Updated on: Jun 21, 2023 | 1:25 PM

ನಟಿ ಆಲಿಯಾ ಭಟ್ (Alia Bhatt)​ ಅವರು ಹಲವು ಕಾರಣಗಳಿಂದ ಸುದ್ದಿ ಆಗುತ್ತಾ ಇರುತ್ತಾರೆ. ಸಿನಿಮಾ ಮತ್ತು ಖಾಸಗಿ ಜೀವನ ಎರಡನ್ನೂ ಅವರು ಅವರು ಸರಿಯಾಗಿ ಬ್ಯಾಲೆನ್ಸ್​ ಮಾಡುತ್ತಿದ್ದಾರೆ. ಕಳೆದ ವರ್ಷ ಏಪ್ರಿಲ್​ 14ರಂದು ಆಲಿಯಾ ಭಟ್​ ಅವರು ರಣಬೀರ್​ ಕಪೂರ್​ (Ranbir Kapoor) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಒಂದು ವರ್ಷದ ಬಳಿಕ ಅವರ ತಾಳಿಸರದ ಫೋಟೋ ವೈರಲ್​ ಆಗಿದೆ. ಈ ಮಂಗಳಸೂತ್ರದಲ್ಲಿ ಒಂದು ವಿಶೇಷತೆ ಇದೆ. ಇನ್ಫಿನಿಟಿ ಡಿಸೈನ್​ನಲ್ಲಿ ಇದನ್ನು ಸಿದ್ಧಪಡಿಸಲಾಗಿದೆ. ಇನ್ಸಿನಿಟಿ ಚಿಹ್ನೆಯು 8ರ ಸಂಖ್ಯೆ ರೀತಿ ಕಾಣುತ್ತದೆ. ಅದು ರಣಬೀರ್​ ಕಪೂರ್​ ಅವರ ಲಕ್ಕಿ ನಂಬರ್​ ಎಂದು ಹೇಳಲಾಗುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಆಲಿಯಾ ಭಟ್​ ಅವರ ಮಂಗಳಸೂತ್ರದ (Alia Bhatt Mangalsutra) ಬಗ್ಗೆ ಅಭಿಮಾನಿಗಳು ಈಗ ಮಾತನಾಡುತ್ತಿದ್ದಾರೆ.

ನೆಪೋ ಕಿಡ್​ ಎಂಬ ಕಾರಣಕ್ಕೆ ಆಲಿಯಾ ಭಟ್​ ಅವರನ್ನು ಟೀಕೆ ಮಾಡಲಾಗುತ್ತದೆ. ಆರಂಭದಲ್ಲಿ ಅವರಿಗೆ ಅವಕಾಶಗಳು ಸುಲಭವಾಗಿ ಸಿಕ್ಕಿವೆ ಎಂಬುದು ನಿಜ. ಹಾಗಂತ ಅವರ ಯಶಸ್ಸಿಗೆ ಅಷ್ಟು ಮಾತ್ರವೇ ಕಾರಣವಲ್ಲ. ಆಲಿಯಾ ಪ್ರತಿಭಾವಂತ ನಟಿ ಎಂಬುದರಲ್ಲಿ ಅನುಮಾನವಿಲ್ಲ. ನಟನೆಯ ಮೂಲಕ ಅವರು ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಕಾಲ್​ಶೀಟ್​ ಪಡೆಯಲು ಅನೇಕ ನಿರ್ಮಾಪಕರು ಕಾದುಕುಳಿತಿದ್ದಾರೆ. ಹಲವು ಪ್ರಾಜೆಕ್ಟ್​ಗಳು ಆಲಿಯಾ ಅವರ ಕೈಯಲ್ಲಿ ಇವೆ. ಕೆಲವೇ ತಿಂಗಳ ಹಿಂದೆ ಹೆಣ್ಣು ಮಗುವಿಗೆ ಅವರು ಜನ್ಮ ನೀಡಿದರು. ಆ ಮಗುವಿಗೆ ರಹಾ ಎಂದು ಹೆಸರು ಇಡಲಾಗಿದೆ.

ಇದನ್ನೂ ಓದಿ: Alia Bhatt: ‘ಹಾರ್ಟ್ ಆಫ್ ಸ್ಟೋನ್’ ಸಿನಿಮಾ ಟ್ರೇಲರ್ ರಿಲೀಸ್​ನಲ್ಲಿ ಮಿಂಚಿದ ಆಲಿಯಾ ಭಟ್  

ಜುಲೈ 28ರಂದು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಅವರು ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಜಯಾ ಬಚ್ಚನ್, ಧರ್ಮೇಂದ್ರ ಮುಂತಾದ ಕಲಾವಿದರು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಶೀರ್ಷಿಕೆಯೇ ಸೂಚಿಸುವಂತೆ ಇದೊಂದು ಪ್ರೇಮ ಕಥೆ ಇರುವ ಸಿನಿಮಾ. ಇದಕ್ಕೆ ಕರಣ್​ ಜೋಹರ್​ ಅವರು ನಿರ್ದೇಶನ ಮಾಡಿದ್ದಾರೆ. ಅವರು ಈ ಸಿನಿಮಾವನ್ನು ಯಾವ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಈ ಕುತೂಹಲ ಹೆಚ್ಚಿಸುವ ರೀತಿಯಲ್ಲಿ ಇತ್ತೀಚೆಗೆ ಟೀಸರ್ ರಿಲೀಸ್​ ಆಗಿದೆ.

ಇದನ್ನೂ ಓದಿ: Alia Bhatt: ರಾಮಾಯಣ ಕಥೆ ಆಧರಿತ ಸಿನಿಮಾದಲ್ಲಿ ಆಲಿಯಾ ಭಟ್​ಗೆ ಸೀತೆ ಪಾತ್ರ; ರಾಮನಾಗಿ ರಣಬೀರ್​ ಕಪೂರ್​?

ಆಲಿಯಾ ಭಟ್​ ಅವರು ಈಗ ಬಾಲಿವುಡ್​ಗೆ ಮಾತ್ರ ಸೀಮಿತವಾಗಿಲ್ಲ. ಹಾಲಿವುಡ್​ನಲ್ಲೂ ಅವರು ಸಿನಿಮಾ ಮಾಡುತ್ತಿದ್ದಾರೆ. ಆಲಿಯಾ ಭಟ್​ ನಟಿಸಿರುವ ‘ಹಾರ್ಟ್​ ಆಫ್​ ಸ್ಟೋನ್​’ ಸಿನಿಮಾದ ಟ್ರೇಲರ್​ ಕೆಲವೇ ದಿನಗಳ ಹಿಂದೆ ಬಿಡುಗಡೆ ಆಯಿತು. ಈ ಚಿತ್ರದಲ್ಲಿ ಭರಪೂರ ಆ್ಯಕ್ಷನ್ ಇರಲಿದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ. ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ಆಲಿಯಾ ಭಟ್​ ಅವರಿಗೆ ನೆಗೆಟಿವ್​ ಪಾತ್ರ ಎನ್ನಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us