‘ರಾಮಾಯಣ’ ಟೀಸರ್: ದೃಶ್ಯ ವೈಭವದಲ್ಲಿ ಮಿಂದೆದ್ದ ಹಿಂದೂ ಪುರಾಣ ಪುಣ್ಯ ಕತೆ

Ramayana teaser: ಹನುಮಜಯಂತಿಯಂದು ‘ರಾಮಾಯಣ’ ಸಿನಿಮಾದ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಭಾರತೀಯ ಚಿತ್ರರಂಗದಲ್ಲಿ ಈ ವರೆಗೆ ಹಲವಾರು ಭಾರಿ, ಹಲವಾರು ಭಾಷೆಗಳಲ್ಲಿ ರಾಮಾಯಣ ಕತೆ ಸಿನಿಮಾ ಆಗಿ ಮೂಡಿ ಬಂದಿದೆ. ಪ್ರತಿಬಾರಿಯೂ ಭಿನ್ನ ರೀತಿಯಲ್ಲಿ ಪುರಾಣ ಪುಣ್ಯ ಕತೆಯನ್ನು ಪ್ರಸ್ತುತ ಪಡಿಸಲಾಗಿದೆ. ಇದೀಗ ಬರಲಿರುವ ‘ರಾಮಾಯಣ’ ಈ ವರೆಗೆ ಭಾರತೀಯ ಚಿತ್ರರಂಗ ಮಾಡಿದ ಸಾಹಸಗಳಲ್ಲಿಯೇ ಅದ್ಧೂರಿಯಾದ ಸಾಹಸ ಇದಾಗಿದೆ. ಟೀಸರ್​​ನಲ್ಲಿ ಇದು ಸ್ಪಷ್ಟವಾಗಿ ಗೋಚರವಾಗುತ್ತಿದೆ.

‘ರಾಮಾಯಣ’ ಟೀಸರ್: ದೃಶ್ಯ ವೈಭವದಲ್ಲಿ ಮಿಂದೆದ್ದ ಹಿಂದೂ ಪುರಾಣ ಪುಣ್ಯ ಕತೆ
Ramayana Teaser

Updated on: Apr 02, 2026 | 10:50 AM

ಭಾರತ ಚಿತ್ರರಂಗದ (Indian Film) ಅತ್ಯಂತ ದೊಡ್ಡ ಬಜೆಟ್ ಸಿನಿಮಾ ‘ರಾಮಾಯಣ’ದ (Ramayana) ಟೀಸರ್ ಇಂದು (ಏಪ್ರಿಲ್ 02) ಬಿಡುಗಡೆ ಆಗಿದೆ. ಹನುಮಜಯಂತಿಯಂದು ‘ರಾಮಾಯಣ’ ಸಿನಿಮಾದ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಭಾರತೀಯ ಚಿತ್ರರಂಗದಲ್ಲಿ ಈ ವರೆಗೆ ಹಲವಾರು ಭಾರಿ, ಹಲವಾರು ಭಾಷೆಗಳಲ್ಲಿ ರಾಮಾಯಣ ಕತೆ ಸಿನಿಮಾ ಆಗಿ ಮೂಡಿ ಬಂದಿದೆ. ಪ್ರತಿಬಾರಿಯೂ ಭಿನ್ನ ರೀತಿಯಲ್ಲಿ ಪುರಾಣ ಪುಣ್ಯ ಕತೆಯನ್ನು ಪ್ರಸ್ತುತ ಪಡಿಸಲಾಗಿದೆ. ಇದೀಗ ಬರಲಿರುವ ‘ರಾಮಾಯಣ’ ಈ ವರೆಗೆ ಭಾರತೀಯ ಚಿತ್ರರಂಗ ಮಾಡಿದ ಸಾಹಸಗಳಲ್ಲಿಯೇ ಅದ್ಧೂರಿಯಾದ ಸಾಹಸ ಇದಾಗಿದೆ. ಟೀಸರ್​​ನಲ್ಲಿ ಇದು ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಆಧುನಿಕ ತಂತ್ರಜ್ಞಾನದ ಸ್ಪರ್ಷದಲ್ಲಿ ರಾಮಾಯಣವನ್ನು ಅದ್ಧೂರಿಯಾಗಿ ತೆರೆಗೆ ತರುವ ಪ್ರಯತ್ನ ಚಿತ್ರತಂಡ ಮಾಡಿದೆ. ಇದೀಗ ಬಿಡುಗಡೆ ಆಗಿರುವ 2:38 ನಿಮಿಷದ ಟೀಸರ್​ನ ಪ್ರತಿ ದೃಶ್ಯದಲ್ಲಿಯೂ ಆ ಅದ್ಧೂರಿತನ ಎದ್ದು ಕಾಣುತ್ತಿದೆ. ಅದ್ಧೂರಿತನದ ಜೊತೆಗೆ ನಿರ್ದೇಶಕರು ವಾಲ್ಮಿಕಿ ರಾಮಾಯಣದ ಕತೆಗೆ ನಿಷ್ಠವಾಗಿರುವುದು ಸಹ ಗೋಚರಿಸುತ್ತಿದೆ.

ಈಗ ಬಿಡುಗಡೆ ಆಗಿರುವ ಟೀಸರ್​​ನಲ್ಲಿ ರಾಮನ ಪಾತ್ರವನ್ನಷ್ಟೆ ಪ್ರಮುಖವಾಗಿ ತೋರಿಸಲಾಗಿದೆ. ಶ್ರೀರಾಮನ ಬಾಲಕಾಂಡ, ಅರಣ್ಯಕಾಂಡದ ಕತೆಯ ಭಾಗಗಳನ್ನು ಮಾತ್ರವೇ ಟೀಸರ್​​ನಲ್ಲಿ ಸೇರಿಸಿರುವುದು ತಿಳಿದು ಬರುತ್ತಿದೆ. ರಾಮನ ಪಟ್ಟಾಭಿಷೇಕದ ಮುಂಚಿನ ಕತೆ, ವನವಾಸ, ಅರಣ್ಯದಲ್ಲಿ ಸಾಹಸಗಳು ಇನ್ನಿತರೆ ದೃಶ್ಯಗಳು ಟೀಸರ್​​ನಲ್ಲಿವೆ. ವಿಶೇಷವಾಗಿ ರಾಮನ ವಿಚಿತ್ರ ಜೀವಿಗಳೊಟ್ಟಿಗೆ ಸೆಣೆಸಾಡುತ್ತಿರುವ ಕೆಲವು ದೃಶ್ಯಗಳು ಸಹ ಟೀಸರ್​​ನಲ್ಲಿವೆ.

Rama | Namit Malhotra’s Ramayana | Nitesh Tiwari | Ranbir, Yash, Hans Zimmer & A.R. Rahman

ರಣ್​​ಬೀರ್ ಕಪೂರ್, ಶ್ರೀರಾಮನ ಪಾತ್ರದಲ್ಲಿ ಅದ್ಭುತವಾಗಿ ಕಾಣುತ್ತಿದ್ದಾರೆ. ಅವರ ಮುಖ, ಮೈಕಟ್ಟು ರಾಮನ ಪಾತ್ರಕ್ಕೆ ಚೆನ್ನಾಗಿ ಹೊಂದಿರುವಂತೆ ತೋರುತ್ತಿದೆ. ಆದರೆ ಟೀಸರ್​​ನಲ್ಲಿ ಅವರ ಪಾತ್ರದ ಹೊರತಾಗಿ ಇನ್ಯಾರ ಪಾತ್ರವನ್ನೂ ಸಹ ತೋರಿಸಿಲ್ಲ. ಸೀತೆ, ಲಕ್ಷ್ಮಣನ ಪಾತ್ರವನ್ನೂ ಸಹ ಈಗ ಬಿಡುಗಡೆ ಆಗಿರುವ ಟೀಸರ್​​ನಲ್ಲಿ ತೋರಿಸಿಲ್ಲ. ಯಶ್ ಅವರ ರಾವಣನ ಪಾತ್ರ ಟೀಸರ್​ನ ಅಂತ್ಯದಲ್ಲಿ ಬರುತ್ತದೆಯಾದರೂ ಯಶ್ ಪಾತ್ರವನ್ನೂ ಸಹ ಹಿಂದಿನಿಂದ ಮಾತ್ರವೇ ತೋರಿಸಲಾಗಿದೆ. ಜೊತೆಗೆ ರಾವಣನ ಪುಷ್ಪಕವಿಮಾನವನ್ನು ಸಹ ತೋರಿಸಲಾಗಿದೆ.

ಒಟ್ಟಾರೆಯಾಗಿ ಈಗ ಬಿಡುಗಡೆ ಆಗಿರುವ ಟೀಸರ್​​, ‘ರಾಮಾಯಣ’ ಕತೆ ಭಾರತೀಯ ಈ ಹಿಂದೆ ನೋಡಿದ ಇನ್ಯಾವುದೇ ರಾಮಾಯಣ ಸಿನಿಮಾ ಅಥವಾ ಧಾರಾವಾಹಿಗಳಿಗಿಂತಲೂ ಬಲು ಅದ್ಧೂರಿಯಾಗಿ ಇರಲಿದೆ ಎಂಬುದಂತೂ ಖಾತ್ರಿ. ನಮಿತ್ ಮಲ್ಹೋತ್ರಾ ನಿರ್ಮಾಣ ಮಾಡಿ ನಿತೀಶ್ ತಿವಾರಿ ನಿರ್ದೇಶನ ಮಾಡಿರುವ ಈ ಸಿನಿಮಾ ಇದೇ ವರ್ಷ ದೀಪಾವಳಿಗೆ ಬಿಡುಗಡೆ ಆಗಲಿದೆ. ಸಿನಿಮಾದ ಎರಡನೇ ಭಾಗ ಮುಂದಿನ ವರ್ಷ ದೀಪಾವಳಿಗೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us