ಬಾಲಿವುಡ್ ಹೀರೋಗಳ ಪೈಕಿ ಅತಿ ದುಬಾರಿ ಬಂಗಲೆ ಹೊಂದಿರುವ ನಟ ಯಾರು?

ಸೆಲೆಬ್ರಿಟಿಗಳ ಮನೆ ಎಂದರೆ ಸಿಕ್ಕಾಪಟ್ಟೆ ಭವ್ಯವಾಗಿರುತ್ತದೆ. ಬಾಲಿವುಡ್ ಹೀರೋಗಳ ಬಂಗಲೆಗಳು ಕಣ್ಣು ಕುಕ್ಕುತ್ತವೆ. ಹಾಗಾದರೆ ಹಿಂದಿ ಸಿನಿಮಾ ನಟರ ಪೈಕಿ ಅತಿ ದುಬಾರಿಯಾದ ಮನೆ ಇರುವುದು ಯಾರ ಬಳಿ ಎಂಬ ಕೌತುಕದ ಪ್ರಶ್ನೆ ಎಲ್ಲರಿಗೂ ಇದೆ. ಯಾರು ಆ ನಟ? ಅವರ ಮನೆಯ ಬೆಲೆ ಎಷ್ಟು? ಇಲ್ಲಿದೆ ಉತ್ತರ..

ಬಾಲಿವುಡ್ ಹೀರೋಗಳ ಪೈಕಿ ಅತಿ ದುಬಾರಿ ಬಂಗಲೆ ಹೊಂದಿರುವ ನಟ ಯಾರು?
Pataudi Palace

Updated on: Feb 04, 2025 | 10:56 PM

ಬಾಲಿವುಡ್​ನಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮಿತಾಭ್ ಬಚ್ಚನ್ ಮುಂತಾದವರು ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇವರೆಲ್ಲರ ಬಂಗಲೆಗಳು ವೈಭವದಿಂದ ಕೂಡಿವೆ. ಆದರೆ ಅತಿ ದುಬಾರಿ ಮನೆ ಹೊಂದಿರುವುದು ಈ ನಟರಲ್ಲ! ಬಾಲಿವುಡ್​ನಲ್ಲಿ ತುಂಬ ದುಬಾರಿಯಾದ ಮನೆ ಇರುವುದು ಸೈಫ್ ಅಲಿ ಖಾನ್ ಅವರ ಹೆಸರಿನಲ್ಲಿ. ಹೌದು, ವಂಶ ಪಾರಂಪರ್ಯವಾಗಿ ಬಂದ ಪ್ಯಾಲೇಸ್ ಸೈಫ್ ಅಲಿ ಖಾನ್ ಅವರ ಹೆಸರಿನಲ್ಲಿ ಇದೆ. ಇದರ ಬೆಲೆ ಬರೋಬ್ಬರಿ 800 ಕೋಟಿ ರೂಪಾಯಿ ಎನ್ನಲಾಗಿದೆ.

ಸೈಫ್ ಅಲಿ ಖಾನ್ ಅವರು ಹಲವು ವರ್ಷಗಳಿಂದ ಬಾಲಿವುಡ್​ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅನೇಕ ಸಿನಿಮಾಗಳ ಮೂಲಕ ಅವರು ಜನರಿಗೆ ಮನರಂಜನೆ ನೀಡಿದ್ದಾರೆ. ಇತ್ತೀಚೆಗೆ ಮುಂಬೈನ ಅವರ ಅಪಾರ್ಟ್​ಮೆಂಟ್​ನಲ್ಲಿ ದರೋಡೆಕೋರರು ದಾಳಿ ಮಾಡಿದ್ದರು. ಆ ಅಪಾರ್ಟ್​ಮೆಂಟ್​ ಹೊರತುಪಡಿಸಿ ಇನ್ನೂ ಅನೇಕ ಕಡೆಗಳಲ್ಲಿ ಸೈಫ್ ಅಲಿ ಖಾನ್ ಅವರ ಆಸ್ತಿ ಇದೆ. ಅವುಗಳಲ್ಲಿ ಪಟೌಡಿ ಪ್ಯಾಲೇಸ್ ಕೂಡ ಒಂದು.

ಸೈಫ್ ಅಲಿ ಖಾನ್ ಅವರದ್ದು ರಾಜಮನೆತನ. ಅವರು ಪಟೌಡಿ ಮನೆತನಕ್ಕೆ ಸೇರಿದವರು. ಈಗ ಈ ಮನೆತನಕ್ಕೆ ಸೈಫ್ ಅಲಿ ಖಾನ್ ಅವರೇ ಹಿರಿಯ ವ್ಯಕ್ತಿ. ಈ ವಂಶಕ್ಕೆ ಸೇರಿದ ಪಟೌಡಿ ಪ್ಯಾಲೇಸ್​ ಹರಿಯಾಣದಲ್ಲಿದೆ. ಅದು ಸೈಫ್ ಅಲಿ ಖಾನ್ ಅವರ ಒಡೆತನದಲ್ಲಿದೆ. 800 ಕೋಟಿ ರೂಪಾಯಿ ಬೆಲೆಬಾಳುವ ಈ ಪ್ಯಾಲೇಸ್​ಗೆ ಹೋಲಿಸಿದರೆ ಶಾರುಖ್ ಖಾನ್​ ಅವರು 200 ಕೋಟಿ ರೂಪಾಯಿ ಬೆಲೆಬಾಳುವ ‘ಮನ್ನತ್’ ಬಂಗಲೆ ಕೂಡ ಚಿಕ್ಕದು ಎನಿಸುತ್ತದೆ!

ಇದನ್ನೂ ಓದಿ: ಹಲ್ಲೆ ಬಳಿಕ ಮೊದಲ ಬಾರಿಗೆ ಈವೆಂಟ್​ಗೆ ಬಂದ ಸೈಫ್ ಅಲಿ ಖಾನ್; ಕಾಣಿಸ್ತಿದೆ ಗಾಯದ ಗುರುತು

ಪಟೌಡಿ ಪ್ಯಾಲೇಸ್ ನಿರ್ಮಾಣ ಆಗಿದ್ದು 1930 ಸುಮಾರಿಗೆ ಎಂಬ ಮಾಹಿತಿ ಇದೆ. 10 ಎಕರೆ ವಿಸ್ತೀರ್ಣದಲ್ಲಿ ಇದನ್ನು ಕಟ್ಟಲಾಗಿದೆ. ಇದರಲ್ಲಿ 150 ಕೊಠಡಿಗಳು ಇವೆ. ಇಲ್ಲಿ ಸೈಫ್ ಅಲಿ ಖಾನ್ ಅವರು ಸದಾ ಕಾಲ ವಾಸ ಮಾಡುವುದಿಲ್ಲ. ಕುಟುಂಬದ ಜೊತೆ ರಜೆಯ ಮಜಾ ಸವಿಯಲು ಮಾತ್ರ ಅವರು ಇಲ್ಲಿಗೆ ಬರುತ್ತಾರೆ. ಸೈಫ್ ಅಲಿ ಖಾನ್, ಪತ್ನಿ ಕರೀನಾ ಕಪೂರ್​ ಖಾನ್, ಮಕ್ಕಳಾದ ಜೇಹ್ ಅಲಿ ಖಾನ್, ತೈಮೂರ್ ಅಲಿ ಖಾನ್ ಅವರು ಈ ಪ್ಯಾಲೇಸ್​ಗೆ ಆಗಾಗ ಭೇಟಿ ನೀಡುತ್ತಾರೆ. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದ ಕೆಲವು ದೃಶ್ಯಗಳನ್ನು ಈ ಪ್ಯಾಲೇಸ್​ನಲ್ಲಿ ಚಿತ್ರೀಕರಣ ಮಾಡಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us