ಮುಂದಿನ ರಂಜಾನ್​ ರಿಲೀಸ್​ಗೆ ಸಲ್ಲು ಸಿನಿಮಾ ಫೈನಲ್​? ಕರಣ್ ಜೋಹರ್ ಜೊತೆ ಹೊಸ ಪ್ರಾಜೆಕ್ಟ್

ಸಲ್ಲು ನಟನೆಯ ಯಾವುದಾದರೂ ಸಿನಿಮಾ ಈದ್​ಗೆ ರಿಲೀಸ್ ಆಗಿಯೇ ಆಗುತ್ತದೆ ಅನ್ನೋದು ಅನೇಕರ ನಂಬಿಕೆ. ಅಂತೆಯೇ ಸಲ್ಲು ಹೊಸ ಸ್ಕ್ರಿಪ್ಟ್ ಲಾಕ್ ಮಾಡಿದ್ದಾರೆ ಎಂದು ಬಾಲಿವುಡ್ ಹಂಗಾಮ ವರದಿ ಮಾಡಿದೆ.  

ಮುಂದಿನ ರಂಜಾನ್​ ರಿಲೀಸ್​ಗೆ ಸಲ್ಲು ಸಿನಿಮಾ ಫೈನಲ್​? ಕರಣ್ ಜೋಹರ್ ಜೊತೆ ಹೊಸ ಪ್ರಾಜೆಕ್ಟ್
ಸಲ್ಮಾನ್ -ಕರಣ್​

Updated on: Apr 19, 2023 | 12:08 PM

ಮುಖ್ಯಾಂಶಗಳು

  • ಹೊಸ ಚಿತ್ರಕ್ಕೆ ಕರಣ್ ಜೋಹರ್ ಹಾಗೂ ಸಲ್ಮಾನ್ ಖಾನ್ ಮಾತುಕತೆ ನಡೆಸುತ್ತಿದ್ದಾರೆ
  • ಬಿಗ್ ಬಜೆಟ್ ಸಿನಿಮಾ ಇದಾಗಿರಲಿದೆ
  • ಮಾತುಕತೆ ಹಂತದಲ್ಲಿದೆ ಈ ಸಿನಿಮಾ

ಸಲ್ಮಾನ್ ಖಾನ್​ಗೂ (Salman Khan) ರಂಜಾನ್ ಹಬ್ಬಕ್ಕೂ ಎಲ್ಲಿಲ್ಲದ ನಂಟು. ಈ ಸಂದರ್ಭದಲ್ಲಿ ಸಲ್ಮಾನ್ ಖಾನ್ ಸಿನಿಮಾಗಳು ರಿಲೀಸ್ ಆಗೋದು ವಾಡಿಕೆ. ಕೊರೊನಾ ಮತ್ತಿತ್ಯಾದಿ ಕಾರಣಗಳಿಂದ ಸಲ್ಮಾನ್ ಖಾನ್ ಸಿನಿಮಾ ರಂಜಾನ್ ಸಂದರ್ಭದಲ್ಲಿ ರಿಲೀಸ್ ಆಗಿರಲಿಲ್ಲ. ಈಗ ಅವರು ಮತ್ತೆ ಟ್ರ್ಯಾಕ್​ಗೆ ಮರಳಿದ್ದಾರೆ. ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ (Kisi Ka Bhai Kisi Ki jaan)  ಈದ್ ಪ್ರಯುಕ್ತ ಏಪ್ರಿಲ್ 21ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾ ರಿಲೀಸ್​ಗೂ ಮೊದಲೇ ಸಲ್ಲು ಮುಂದಿನ ಸಿನಿಮಾ ಬಗ್ಗೆ ಅಪ್​ಡೇಟ್​ ಸಿಕ್ಕಿದೆ. ಖ್ಯಾತ ನಿರ್ಮಾಪಕ ಕರಣ್ ಜೋಹರ್ ಜೊತೆ ಅವರು ಕೈ ಜೋಡಿಸಲಿದ್ದಾರಂತೆ.

ಸಲ್ಮಾನ್ ಖಾನ್ ನಟನೆಯ ಅನೇಕ ಚಿತ್ರಗಳು ಈದ್ ಸಂದರ್ಭದಲ್ಲಿ ರಿಲೀಸ್ ಆಗುತ್ತವೆ. 2009ರಲ್ಲಿ ರಿಲೀಸ್ ಆದ ‘ವಾಂಟೆಡ್​’ ಚಿತ್ರದಿಂದ ಸಲ್ಲುಗೆ ರಂಜಾನ್ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಮಾಡುವ ವಾಡಿಕೆ ಶುರುವಾಗಿದೆ. 2024ರಲ್ಲಿ ಈಗಾಗಲೇ ಸ್ವಾತಂತ್ರ್ಯ ದಿನಾಚರಣೆ, ಸಂಕ್ರಾಂತಿ, ದೀಪಾವಳಿ ದಿನದಂದು ಸಿನಿಮಾ ರಿಲೀಸ್ ಮಾಡಲು ಅನೇಕರು ಮುಂದಾಗಿದ್ದಾರೆ. ರಿಲೀಸ್ ದಿನಾಂಕ ಕೂಡ ಘೋಷಣೆ ಮಾಡಿದ್ದಾರೆ. ಆದರೆ, ಈದ್ ಸಂದರ್ಭಕ್ಕೆ ರಿಲೀಸ್ ಮಾಡಲು ಯಾವುದೇ ನಿರ್ಮಾಪಕರು ಮುಂದೆ ಬಂದಿಲ್ಲ. ಆ ಸಂದರ್ಭಕ್ಕೆ ಸಲ್ಲು ನಟನೆಯ ಯಾವುದಾದರೂ ಸಿನಿಮಾ ರಿಲೀಸ್ ಆಗಿಯೇ ಆಗುತ್ತದೆ ಅನ್ನೋದು ಅನೇಕರ ನಂಬಿಕೆ. ಅಂತೆಯೇ ಸಲ್ಲು ಹೊಸ ಸ್ಕ್ರಿಪ್ಟ್ ಲಾಕ್ ಮಾಡಿದ್ದಾರೆ ಎಂದು ಬಾಲಿವುಡ್ ಹಂಗಾಮ ವರದಿ ಮಾಡಿದೆ.

ಕರಣ್ ಜೋಹರ್ ಹಾಗೂ ಸಲ್ಮಾನ್ ಖಾನ್ ಮಾತುಕತೆ ನಡೆಸುತ್ತಿದ್ದಾರೆ. ಬಿಗ್ ಬಜೆಟ್ ಸಿನಿಮಾ ಇದಾಗಿರಲಿದೆ. ಸದ್ಯ ಮಾತುಕತೆ ಹಂತದಲ್ಲಿದೆ. ಇದನ್ನು ಯಾರು ನಿರ್ದೇಶನ ಮಾಡುತ್ತಾರೆ, ಪಾತ್ರವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ವಿಚಾರ ಇನ್ನೂ ಗುಟ್ಟಾಗಿಯೇ ಇದೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಚಿತ್ರಕ್ಕೆ ಅಡ್ವಾನ್ಸ್ ಬುಕಿಂಗ್ ಶುರು; ಇಡೀ ಥಿಯೇಟರ್ ಬುಕ್ ಮಾಡಿದ ಅಬ್ದು ರೋಜಿಕ್

‘ಕುಚ್ ಕುಚ್​ ಹೋತಾ ಹೈ’ ಸಿನಿಮಾ 1998ರಲ್ಲಿ ತೆರೆಗೆ ಬಂತು. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರು ಪೋಷಕ ಪಾತ್ರ ಮಾಡಿದ್ದರು. ಈ ಚಿತ್ರದಲ್ಲಿ ಶಾರುಖ್ ಖಾನ್, ಕಾಜೋಲ್, ರಾಣಿ ಮುಖರ್ಜಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಇಬ್ಬರೂ ಒಟ್ಟಾಗಿ ಕೆಲಸ ಮಾಡಿಲ್ಲ. 2014ರಲ್ಲಿ ಕರಣ್ ಜೋಹರ್ ಹಾಗೂ ಸಲ್ಮಾನ್ ಖಾನ್ ಒಟ್ಟಾಗಿ ಸಿನಿಮಾ ಮಾಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾ ನಿಂತು ಹೋಯಿತು.

‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಬಳಿಕ ‘ಟೈಗರ್ 3’ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಇದೆ. ಯಶ್ ರಾಜ್ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಮನೀಶ್ ಶರ್ಮಾ ‘ಟೈಗರ್ 3’ ಚಿತ್ರವನ್ನು ಮಾಡುತ್ತಿದ್ದಾರೆ. ಕತ್ರಿನಾ ಕೈಫ್ ಈ ಚಿತ್ರದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us