40 ಪರ್ಸೆಂಟ್​ ಡೀಲ್​ಗೆ ಒಪ್ಪಿಕೊಂಡ ಶಾರುಖ್​, ಸಲ್ಮಾನ್​? ಭರ್ಜರಿ ಲಾಭ ಮಾಡಲು ಸಜ್ಜಾದ ನಟರು

Tiger vs Pathaan: ಕೆಲವು ಹೀರೋಗಳು ಸಂಭಾವನೆ ಪಡೆಯುವ ಬದಲು ಲಾಭದಲ್ಲಿ ಶೇಕಡವಾರು ಪಾಲು ಪಡೆಯುತ್ತಾರೆ. ಸಲ್ಮಾನ್​ ಖಾನ್​ ಮತ್ತು ಶಾರುಖ್​ ಖಾನ್​ ಕೂಡ ಇದಕ್ಕೆ ಹೊರತಲ್ಲ.

40 ಪರ್ಸೆಂಟ್​ ಡೀಲ್​ಗೆ ಒಪ್ಪಿಕೊಂಡ ಶಾರುಖ್​, ಸಲ್ಮಾನ್​? ಭರ್ಜರಿ ಲಾಭ ಮಾಡಲು ಸಜ್ಜಾದ ನಟರು
ಸಲ್ಮಾನ್ ಖಾನ್, ಶಾರುಖ್ ಖಾನ್

Updated on: Apr 11, 2023 | 7:15 AM

ಮುಖ್ಯಾಂಶಗಳು

  • ‘ಟೈಗರ್​ ವರ್ಸಸ್​ ಪಠಾಣ್​’ ಚಿತ್ರದ ತೆರೆಹಿಂದೆ ನಡೆದಿದೆ ಲೆಕ್ಕಾಚಾರ
  • ಲಾಭದಲ್ಲಿ ಶೇಕಡ 40ರಷ್ಟು ಪಾಲು ಪಡೆಯಲು ಮುಂದಾದ ಸ್ಟಾರ್​ ನಟರು
  • ಈ ಸಿನಿಮಾದಲ್ಲಿ ಒಟ್ಟಿಗೆ ನಟಿಸಲಿರುವ ಸಲ್ಮಾನ್​ ಖಾನ್​, ಶಾರುಖ್​ ಖಾನ್​

ನಟ ಶಾರುಖ್​ ಖಾನ್​ (Shah Rukh Khan) ಅವರು ಹಲವು ವರ್ಷಗಳಿಂದ ಸೋಲು ಕಾಣುತ್ತ ಬಂದಿದ್ದರು. ಆದರೆ ‘ಪಠಾಣ್​’ ಚಿತ್ರದಿಂದ ಅವರು ತಮ್ಮ ವಿರೋಧಿಗಳ ಬಾಯಿ ಮುಚ್ಚಿಸಿದರು. ಜನವರಿ 25ರಂದು ಬಿಡುಗಡೆಯಾಗಿ ಬ್ಲಾಕ್​ ಬಸ್ಟರ್​ ಹಿಟ್​ ಆದ ಈ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಅತಿಥಿ ಪಾತ್ರ ಮಾಡುವ ಮೂಲಕ ಅಭಿಮಾನಿಗಳಿಗೆ ಸಖತ್​ ಮನರಂಜನೆ ನೀಡಿದರು. ಈಗ ಅವರ ನಾಯಕತ್ವದಲ್ಲಿ ಮೂಡಿಬರುತ್ತಿರುವ ‘ಟೈಗರ್​ 3’ ಚಿತ್ರದಲ್ಲಿ ಶಾರುಖ್​ ಖಾನ್​ ಅವರು ಅತಿಥಿ ಪಾತ್ರ ಮಾಡುತ್ತಿದ್ದಾರೆ. ಅದಕ್ಕಿಂತಲೂ ಇಂಟರೆಸ್ಟಿಂಗ್​ ವಿಚಾರ ಏನೆಂದರೆ, ಈ ಸ್ಟಾರ್​ ಕಲಾವಿದರಿಬ್ಬರು ‘ಟೈಗರ್​ ವರ್ಸಸ್​ ಪಠಾಣ್​’ (Tiger vs Pathaan) ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ. ಈ ಸಿನಿಮಾದ ಸಂಭಾವನೆಗೆ ಸಂಬಂಧಿಸಿದಂತೆ ಬಿಟೌನ್​ ಅಂಗಳದಲ್ಲಿ ಗುಸುಗುಸು ಕೇಳಿಬರುತ್ತಿದೆ. ಸಂಭಾವನೆ ಬದಲು 40 ಪರ್ಸೆಂಟ್​ ಸೂತ್ರ ಅನುಸರಿಸಲು ಸಲ್ಮಾನ್​ ಖಾನ್​ (Salman Khan) ಮತ್ತು ಶಾರುಖ್​ ಖಾನ್​ ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.

ಅನೇಕ ಹೀರೋಗಳು ನೇರವಾಗಿ ಸಂಭಾವನೆ ಪಡೆಯುವ ಬದಲು ಬಂದ ಲಾಭದಲ್ಲಿ ಶೇಕಡವಾರು ಪಾಲು ಪಡೆಯುವ ಪದ್ಧತಿ ಇಟ್ಟುಕೊಂಡಿದ್ದಾರೆ. ‘ಟೈಗರ್​ ವರ್ಸಸ್​ ಪಠಾಣ್​’ ಚಿತ್ರದಲ್ಲಿ ಸಲ್ಮಾನ್​ ಖಾನ್​ ಮತ್ತು ಶಾರುಖ್​ ಖಾನ್​ ಅವರು ತಲಾ 40 ಪರ್ಸೆಂಟ್​ ಲಾಭ ಪಡೆಯಲು ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಹರಡಿದೆ. ‘ಯಶ್​ ರಾಜ್​ ಫಿಲ್ಮ್ಸ್​’ ಸಂಸ್ಥೆಯು ಈ ಚಿತ್ರಕ್ಕೆ ಬಂಡವಾಳ ಹೂಡಲಿದೆ. ಬಂದ ಲಾಭದಲ್ಲಿ ಈ ಸಂಸ್ಥೆಗೆ ಶೇಕಡ 20ರಷ್ಟು ಪಾಲು ಸೇರಲಿದೆ.

ಇದನ್ನೂ ಓದಿ: Time 100 Reader Poll: ವಿಶ್ವದ ನೂರು ಪ್ರಭಾವಿ ವ್ಯಕ್ತಿಗಳಲ್ಲಿ ಶಾರುಖ್​ ಖಾನ್​ ನಂ.1; ಮೆಸ್ಸಿಯನ್ನೂ ಮೀರಿಸಿದ ‘ಪಠಾಣ್​’ ಹೀರೋ

ಇದನ್ನೂ ಓದಿ
Shah Rukh Khan Birthday: ಶಾರುಖ್​​ ಜನ್ಮದಿನ; 2023ರ ವರ್ಷ ಪೂರ್ತಿ ಆಗಲಿದೆ ಕಿಂಗ್​ ಖಾನ್ ಸಿನಿಮಾ ಉತ್ಸವ​​
Shah Rukh Khan: ವಿರಾಟ್​ ಕೊಹ್ಲಿ ಪರಾಕ್ರಮದಿಂದ ಪಾಕ್​ಗೆ ಸೋಲು; ಶಾರುಖ್​ ಖಾನ್​ ಹೇಳಿದ್ದೇನು?
Shah Rukh Khan: 20 ಲಕ್ಕಿ ಅಭಿಮಾನಿಗಳಿಗೆ ಸ್ಟಾರ್​ ಹೋಟೆಲ್​ನಲ್ಲಿ ರೂಂ ಬುಕ್​ ಮಾಡಿ ಭೇಟಿಯಾದ ಶಾರುಖ್​ ಖಾನ್​
SRK: ತಮ್ಮದೇ ಶರ್ಟ್​ ಜತೆ ಮಾತನಾಡಿಕೊಂಡ ಶಾರುಖ್​; ಗಂಡನ ಪರಿಸ್ಥಿತಿ ಕಂಡು ಗೌರಿ ಖಾನ್​ ಗಲಿಬಿಲಿ

ಈ ಲೆಕ್ಕಚಾರದ ಬಗ್ಗೆ ಯಾರೂ ಕೂಡ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಆದರೂ ಸಹ ಇಂಥದ್ದೊಂದು ಸುದ್ದಿ ಹರಿದಾಡುತ್ತಿದೆ. ಸಲ್ಮಾನ್​ ಖಾನ್​ ಮತ್ತು ಶಾರುಖ್​ ಖಾನ್​ ಅವರು ಬಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇಬ್ಬರಿಗೂ ಸಖತ್​ ಬೇಡಿಕೆ ಇದೆ. ಒಂದೇ ಸಿನಿಮಾದಲ್ಲಿ ಇಬ್ಬರೂ ಮುಖ್ಯ ಪಾತ್ರಗಳನ್ನು ಮಾಡುತ್ತಾರೆ ಎಂದಾಗ ಯಾರಿಗೆ ಹೆಚ್ಚು ಸಂಭಾವನೆ ಕೊಡಬೇಕು ಎಂದು ನಿರ್ಮಾಪಕರು ತಲೆ ಬಿಸಿ ಮಾಡಿಕೊಳ್ಳಬೇಕಾಗುತ್ತದೆ. ಅದರ ಬದಲು ಲಾಭದಲ್ಲಿ ಶೇಕಡವಾರು ಹಂಚಿಕೆ ಮಾಡುವುದೇ ಉತ್ತಮ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಗಾಸಿಪ್​ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ‘ಪಠಾಣ್​’ ಚಿತ್ರದಿಂದ ಶಾರುಖ್​​ ಗೆದ್ದಿದ್ದಕ್ಕೆ ಎಲ್ಲರಿಗೂ ಖುಷಿ ಆಗಿದ್ದೇಕೆ? ರಾಜ್​ಕುಮಾರ್​ ರಾವ್​ ನೀಡಿದ ಉತ್ತರ ಇಲ್ಲಿದೆ

‘ಟೈಗರ್​ ವರ್ಸಸ್​ ಪಠಾಣ್​’ ಸಿನಿಮಾ ಸೆಟ್ಟೇರಲು ಇನ್ನೂ ಸಾಕಷ್ಟು ಸಮಯ ಇದೆ. ಸದ್ಯಕ್ಕೆ ಸಲ್ಮಾನ್​ ಖಾನ್​ ಅವರು ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಚಿತ್ರದ ಬಿಡುಗಡೆಗಾಗಿ ಕಾದಿದ್ದಾರೆ. ಈ ಸಿನಿಮಾ ಏಪ್ರಿಲ್​ 21ರಂದು ರಿಲೀ​ಸ್​ ಆಗಲಿದೆ. ಶಾರುಖ್​ ಖಾನ್​ ಅವರು ‘ಜವಾನ್​’ ಮತ್ತು ‘ಡಂಕಿ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us