Tiger 3 Teaser: ದೇಶದ ವಿರುದ್ಧವೇ ತಿರುಗಿ ನಿಂತ ಟೈಗರ್​; ಭರ್ಜರಿ ಟ್ವಿಸ್ಟ್​ ನೀಡಿದ ಸಲ್ಮಾನ್​ ಖಾನ್​

Tiger Ka Message: ದೀಪಾವಳಿ ಹಬ್ಬದ ಸಂದರ್ಭದಲ್ಲಿ ‘ಟೈಗರ್​ 3’ ಚಿತ್ರ ಬಿಡಗಡೆ ಆಗಲಿದೆ. ಈಗ ಟೀಸರ್​ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ಕತ್ರಿನಾ ಕೈಫ್​ ಮತ್ತು ಸಲ್ಮಾನ್​ ಖಾನ್​ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಮನೀಶ್​ ಶರ್ಮಾ ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ. ರಿಲೀಸ್​ ದಿನಾಂಕ ಹತ್ತಿರ ಆಗುತ್ತಿದ್ದಂತೆಯೇ ಹೈಪ್​ ಹೆಚ್ಚಾಗಿದೆ.

Tiger 3 Teaser: ದೇಶದ ವಿರುದ್ಧವೇ ತಿರುಗಿ ನಿಂತ ಟೈಗರ್​; ಭರ್ಜರಿ ಟ್ವಿಸ್ಟ್​ ನೀಡಿದ ಸಲ್ಮಾನ್​ ಖಾನ್​
ಸಲ್ಮಾನ್​ ಖಾನ್​

Updated on: Sep 27, 2023 | 11:36 AM

ಸಲ್ಮಾನ್​ ಖಾನ್​ ನಟನೆಯ ‘ಟೈಗರ್​ 3’ (Tiger 3) ಸಿನಿಮಾವನ್ನು ‘ಯಶ್​ ರಾಜ್​ ಫಿಲ್ಮ್ಸ್​’ ಸಂಸ್ಥೆ ನಿರ್ಮಾಣ ಮಾಡಿದೆ. ಈ ಸಂಸ್ಥೆಯ ಸಂಸ್ಥಾಪಕ ಯಶ್​ ರಾಜ್​ ಅವರ ಜನ್ಮದಿನದ ಪ್ರಯುಕ್ತ ಇಂದು (ಸೆಪ್ಟೆಂಬರ್​ 27) ಈ ಚಿತ್ರದ ಟೀಸರ್​ ಬಿಡುಗಡೆ ಮಾಡಲಾಗಿದೆ. ಈ ಬಹುನಿರೀಕ್ಷಿತ ಸಿನಿಮಾದ ಬಗ್ಗೆ ಈಗಾಗಲೇ ಹೈಪ್​ ಕ್ರಿಯೇಟ್​ ಆಗಿದೆ. ಟೀಸರ್​ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ‘ಟೈಗರ್​ 3’ ಸಿನಿಮಾದಲ್ಲಿ ಸಲ್ಮಾನ್​ ಖಾನ್​ (Salman Khan) ಮತ್ತು ಕತ್ರಿನಾ ಕೈಫ್​ ಅವರು ಜೋಡಿಯಾಗಿ ನಟಿಸಿದ್ದಾರೆ. ಇಮ್ರಾನ್​ ಹಷ್ಮಿ ಅವರು ಖಳನಾಯಕನ ಪಾತ್ರ ಮಾಡಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಚಿತ್ರ ಬಿಡಗಡೆ ಆಗಲಿದೆ. ಈಗ ಟೀಸರ್​ (Tiger 3 Teaser) ಸದ್ದು ಮಾಡುತ್ತಿದೆ. ಇದರಲ್ಲಿ ಟೈಗರ್​ ಒಂದು ಮೆಸೇಜ್​ ನೀಡಿದ್ದಾನೆ.

‘ಏಕ್​ ಥಾ ಟೈಗರ್​’ ಮತ್ತು ‘ಟೈಗರ್​ ಜಿಂದಾ ಹೈ’ ಸಿನಿಮಾದ ಮುಂದುವರಿದ ಭಾಗವಾಗಿ ‘ಟೈಗರ್​ 3’ ಸಿನಿಮಾ ಮೂಡಿಬಂದಿದೆ. ಈ ಸಿನಿಮಾದ ಕಥೆ ಏನು ಎಂಬುದನ್ನು ಈ ಟೀಸರ್​ನಲ್ಲಿ ವಿವರಿಸಲಾಗಿದೆ. ‘20 ವರ್ಷ ನಾನು ಭಾರತಕ್ಕಾಗಿ ಕೆಲಸ ಮಾಡಿದ್ದೇನೆ. ಆದರೆ ಅದರ ಬದಲಿಗೆ ನಾನು ಏನನ್ನೂ ಕೇಳಿಲ್ಲ. ಇಂದು ಕೇಳುತ್ತಿದ್ದೇನೆ. ಟೈಗರ್​ ನಿಮ್ಮ ಶತ್ರು ಎಂದು ಹೇಳಲಾಗುತ್ತಿದೆ. ಟೈಗರ್​ ಒಬ್ಬ ದ್ರೋಹಿ ಅಂತ ಹೇಳಲಾಗುತ್ತಿದೆ. 20 ವರ್ಷಗಳ ಸೇವೆಯ ನಂತರವೂ ನಾನು ಭಾರತದಿಂದ ಕ್ಯಾರೆಕ್ಟರ್​ ಸರ್ಟಿಫಿಕೇಟ್​ ಕೇಳುತ್ತಿದ್ದೇನೆ’ ಎಂದು ಸಲ್ಮಾನ್​ ಖಾನ್​ ಹೇಳಿರುವ ಡೈಲಾಗ್​ ಹೈಲೈಟ್​ ಆಗಿದೆ.

‘ಟೈಗರ್​ 3’ ಟೀಸರ್​:

Tiger Ka Message | Tiger 3 | Salman Khan, Katrina Kaif | Maneesh Sharma | YRF Spy Universe

ಈ ಬಾರಿ ಟೈಗರ್​ ತನ್ನ ಕ್ಯಾರೆಕ್ಟರ್​ ಏನು ಎಂಬುದನ್ನು ಸಾಬೀತು ಮಾಡಿಕೊಳ್ಳಲು ದೇಶದ ವಿರುದ್ಧವೇ ಹೋರಾಟಕ್ಕೆ ನಿಂತಂತಿದೆ. ‘ಬದುಕಿದ್ದರೆ ಮತ್ತೆ ನಿಮ್ಮೆ ಸೇವೆ ಮಾಡುತ್ತೇನೆ. ಇಲ್ಲದಿದ್ದರೆ ಜೈಹಿಂದ್​’ ಎಂದು ಹೇಳುವ ಮೂಲಕ ಆತ ಯುದ್ಧ ಸಾರಿದ್ದಾನೆ. ಈ ಟೀಸರ್​ನಲ್ಲಿ ಭರ್ಜರಿ ಆ್ಯಕ್ಷನ್​ ದೃಶ್ಯಗಳ ಝಲಕ್​ ತೋರಿಸಲಾಗಿದೆ. ‘ಎಲ್ಲಿಯವರೆಗೆ ಟೈಗರ್​ ಸಾಯಲ್ಲವೋ, ಅಲ್ಲಿಯವರೆಗೆ ಸೋಲಲ್ಲ’ ಎಂದು ಸಲ್ಮಾನ್​ ಖಾನ್​ ಮಾಸ್​ ಆಗಿ ಡೈಲಾಗ್​ ಹೊಡೆದಿದ್ದಾರೆ.

ಇದನ್ನೂ ಓದಿ: ‘ಬಾಂಬ್​ಗಿಂತಲೂ ಸ್ಫೋಟಕವಾದಂತಹ ಸ್ಪರ್ಧಿಗಳು ಬರ್ತಾರೆ’: ಬಿಗ್​ ಬಾಸ್​ ಬಗ್ಗೆ ಕೌತುಕ ಹೆಚ್ಚಿಸಿದ ಸಲ್ಮಾನ್​ ಖಾನ್​

ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ‘ಟೈಗರ್​ 3’ ಸಿನಿಮಾ ರಿಲೀಸ್​ ಆಗಲಿದೆ. ‘ಜವಾನ್​’ ಮತ್ತು ‘ಪಠಾಣ್​’ ರೀತಿ ಈ ಸಿನಿಮಾ ಕೂಡ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡುತ್ತಾ ಎಂಬುದನ್ನು ಕಾದುನೋಡಬೇಕು. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ‘ಟೈಗರ್​ 3’ ಟೀಸರ್​ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಯೂಟ್ಯೂಬ್​ನಲ್ಲ ಹೊಸ ದಾಖಲೆ ಬರೆಯುವತ್ತ ಮುನ್ನುಗ್ಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:36 am, Wed, 27 September 23

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us