AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಾಂಬ್​ಗಿಂತಲೂ ಸ್ಫೋಟಕವಾದಂತಹ ಸ್ಪರ್ಧಿಗಳು ಬರ್ತಾರೆ’: ಬಿಗ್​ ಬಾಸ್​ ಬಗ್ಗೆ ಕೌತುಕ ಹೆಚ್ಚಿಸಿದ ಸಲ್ಮಾನ್​ ಖಾನ್​

ಹಲವು ವರ್ಷಗಳಿಂದ ಸಲ್ಮಾನ್​ ಖಾನ್ ಅವರು ಬಿಗ್​ ಬಾಸ್​ ಶೋ ನಿರೂಪಣೆ ಮಾಡುತ್ತಾ ಬಂದಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಪ್ರತಿ ವೀಕೆಂಡ್​ನಲ್ಲಿ ಅವರು ನಡೆಸಿಕೊಡುವ ಎಪಿಸೋಡ್​ಗಳನ್ನು ನೋಡಲು ಫ್ಯಾನ್ಸ್​ ಕಾಯುತ್ತಿದ್ದಾರೆ. ಶೀಘ್ರದಲ್ಲೇ ‘ಬಿಗ್​ ಬಾಸ್​ 17’ ಶೋ ಶುರುವಾಗಲಿದೆ. ಈಗ ಪ್ರೋಮೋ ಬಿಡುಗಡೆ ಆಗಿದೆ.

‘ಬಾಂಬ್​ಗಿಂತಲೂ ಸ್ಫೋಟಕವಾದಂತಹ ಸ್ಪರ್ಧಿಗಳು ಬರ್ತಾರೆ’: ಬಿಗ್​ ಬಾಸ್​ ಬಗ್ಗೆ ಕೌತುಕ ಹೆಚ್ಚಿಸಿದ ಸಲ್ಮಾನ್​ ಖಾನ್​
ಸಲ್ಮಾನ್​ ಖಾನ್​
ಮದನ್​ ಕುಮಾರ್​
|

Updated on: Sep 25, 2023 | 5:57 PM

Share

ನಟ ಸಲ್ಮಾನ್​ ಖಾನ್​ ಅವರು ಬಿಗ್​ ಬಾಸ್​ (Bigg Boss) ಹೊಸ ಆವೃತ್ತಿಯ ನಿರೂಪಣೆಗೆ ಸಜ್ಜಾಗಿದ್ದಾರೆ. ಕೆಲವೇ ದಿನಗಳಲ್ಲಿ ‘ಬಿಗ್​ ಬಾಸ್​ 17’ (Bigg Boss 17) ಶೋ ಆರಂಭ ಆಗಲಿದೆ. ಆ ಕಾರ್ಯಕ್ರಮ ಲಾಂಚ್​ ಆಗುವುದಕ್ಕೂ ಮುನ್ನ ಬಗೆಬಗೆಯ ಪ್ರೋಮೋಗಳ ಮೂಲಕ ಪ್ರೇಕ್ಷಕರ ಕುತೂಹಲ ಹೆಚ್ಚಿಸುವ ಕೆಲಸ ಆಗುತ್ತಿದೆ. ಅದಕ್ಕಾಗಿ ಇಂಟರೆಸ್ಟಿಂಗ್​ ಆದಂತಹ ಪ್ರೋಮೋಗಳನ್ನು ಮಾಡಿ ಹರಿಬಿಡಲಾಗಿದೆ. ಎಂದಿನಂತೆ ಈ ಬಾರಿ ಕೂಡ ಸಲ್ಮಾನ್​ ಖಾನ್​ (Salman Khan) ಅವರು ಸಖತ್​ ಉತ್ಸಾಹದಲ್ಲಿ ನಿರೂಪಣೆಗೆ ಸಜ್ಜಾಗಿದ್ದಾರೆ. ಹೊಸ ಸೀಸನ್​ನಲ್ಲಿ ಆಟ ಯಾವ ರೀತಿ ಇರಲಿದೆ ಮತ್ತು ಎಂಥ ಸ್ಪರ್ಧಿಗಳು ಬರುತ್ತಾರೆ ಎಂಬುದರ ಝಲಕ್​​ ತೋರಿಸಲು ಮೂರು ಪ್ರೋಮೋಗಳನ್ನು ರಿಲೀಸ್​ ಮಾಡಲಾಗಿದೆ.

ಒಂದು ಪ್ರೋಮೋದಲ್ಲಿ ಸಲ್ಮಾನ್​ ಖಾನ್​ ಅವರು ಕವಾಲಿ ಸಿಂಗರ್​ ರೀತಿ ಕಾಣಿಸಿಕೊಂಡಿದ್ದಾರೆ. ಇನ್ನೊಂದರಲ್ಲಿ ಅವರು ಡಿಟೆಕ್ಟೀವ್​ ವೇಷ ಧರಿಸಿದ್ದಾರೆ. ಮತ್ತೊಂದರಲ್ಲಿ ಬಾಂಬ್​ ನಿಷ್ಕ್ರಿಯ ದಳದ ತಂತ್ರಜ್ಞನಾಗಿ ಕಾಣಿಸಿಕೊಂಡಿದ್ದಾರೆ. ಪ್ರತಿ ಪ್ರೋಮೋದಲ್ಲೂ ಒಂದೊಂದು ಬಗೆಯ ಸುಳಿವು ನೀಡಲಾಗಿದೆ. ಈ ಮೂಲಕ ಬಿಗ್​ ಬಾಸ್​ ಬಗ್ಗೆ ಇರುವ ಕುತೂಹಲ ಹೆಚ್ಚಾಗುವಂತೆ ಮಾಡಲಾಗಿದೆ. ಈ ಬಾರಿ ಯಾವೆಲ್ಲ ಸ್ಪರ್ಧಿಗಳು ಬರಲಿದ್ದಾರೆ ಎಂಬುದನ್ನು ತಿಳಿಯಲು ಪ್ರೇಕ್ಷಕರು ಕಾದಿದ್ದಾರೆ.

ಇದನ್ನೂ ಓದಿ: ಒಂದೆಡೆ ಸುದೀಪ್​, ಇನ್ನೊಂದೆಡೆ ಸಲ್ಮಾನ್​; ಒಟ್ಟಿಗೆ ಅನೌನ್ಸ್​ ಆಯ್ತು ಕನ್ನಡ-ಹಿಂದಿ ಬಿಗ್​ ಬಾಸ್​

ಟೈಮ್​ ಬಾಂಬ್​ ನಿಷ್ಕ್ರಿಯಗೊಳಿಸಲು ಸಲ್ಮಾನ್​ ಖಾನ್​ ಬರುತ್ತಾರೆ. ಅಲ್ಲಿರುವ ಬಾಂಬ್​ ನೋಡಿ, ‘ಇದೆಂಥಾ ಬಾಂಬ್​.. ಇದಕ್ಕಿಂತಲೂ ಸ್ಫೋಟಕವಾದಂತಹ ಸ್ಪರ್ಧಿಗಳು ಬರ್ತಾರೆ. ಅಲ್ವಾ ಬಿಗ್​ ಬಾಸ್​’ ಎಂದು ಸಲ್ಲು ಕೇಳ್ತಾರೆ. ‘ಯಾರಿಗೆ ಗುಂಡಿಗೆಯಲ್ಲಿ ಧೈರ್ಯ ಇದೆಯೋ ಅಂಥವರಿಗೆ ಬಿಗ್​ ಬಾಸ್​ ಮನೆಯೊಳಗೆ ಸ್ವಾಗತ’ ಎಂದು ಬಿಗ್​ ಬಾಸ್​ ಹೇಳುತ್ತಾರೆ. ‘ಈ ಬಾರಿ ಹೃದಯ, ಬುದ್ಧಿ ಮತ್ತು ಶಕ್ತಿಯ ಆಟ ನಡೆಯುತ್ತದೆ’ ಎಂಬ ಕ್ಯಾಪ್ಷನ್​ ಗಮನ ಸೆಳೆಯುತ್ತಿದೆ. ಒಂದಷ್ಟು ಹೊಸ ಟ್ವಿಸ್ಟ್​ಗಳನ್ನು ಹೊಸ ಸೀಸನ್​ನಲ್ಲಿ ಪರಿಚಯಿಸಲಾಗುತ್ತಿದೆ.

ಹಲವು ವರ್ಷಗಳಿಂದ ಸಲ್ಮಾನ್​ ಖಾನ್ ಅವರು ಬಿಗ್​ ಬಾಸ್​ ಶೋ ನಿರೂಪಣೆ ಮಾಡುತ್ತಾ ಬಂದಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಪ್ರತಿ ವೀಕೆಂಡ್​ನಲ್ಲಿ ಅವರು ನಡೆಸಿಕೊಡುವ ಎಪಿಸೋಡ್​ಗಳನ್ನು ನೋಡಲು ಫ್ಯಾನ್ಸ್​ ಕಾಯುತ್ತಿದ್ದಾರೆ. ಇದರ ಜೊತೆಗೆ ‘ಟೈಗರ್​ 3’ ಸಿನಿಮಾದ ಕೆಲಸಗಳಲ್ಲೂ ಸಲ್ಲು ಬ್ಯುಸಿ ಆಗಿದ್ದಾರೆ. ಈ ವರ್ಷ ದೀಪಾವಳಿ ಹಬ್ಬದ ಸಮಯದಲ್ಲಿ ಆ ಚಿತ್ರ ಬಿಡುಗಡೆ ಆಗಲಿದೆ. ಶೀಘ್ರದಲ್ಲೇ ಟೀಸರ್​ ಬರಲಿದ್ದು, ಆ ಬಳಿಕ ಟ್ರೇಲರ್​ ರಿಲೀಸ್​ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?
40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?
ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬಸವರಾಜ ಬೊಮ್ಮಾಯಿ
ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬಸವರಾಜ ಬೊಮ್ಮಾಯಿ
ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ
ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ
ಡಿಕೆ ಶಿವಕುಮಾರ್​​​​​​​ ಸಿಎಂ ಆಗಲು ಈಕೆಯೇ ಕಾರಣ!
ಡಿಕೆ ಶಿವಕುಮಾರ್​​​​​​​ ಸಿಎಂ ಆಗಲು ಈಕೆಯೇ ಕಾರಣ!