AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆ.27ಕ್ಕೆ ದೊಡ್ಡ ಮೆಸೇಜ್​ ನೀಡ್ತಾರೆ ಸಲ್ಮಾನ್​ ಖಾನ್​; ‘ಟೈಗರ್​ 3’ ಚಿತ್ರದಿಂದ ಬಿಗ್​ ಅಪ್​ಡೇಟ್​

‘ಟೈಗರ್ 3’ ಚಿತ್ರಕ್ಕೆ ಯಶ್​ ರಾಜ್​ ಫಿಲ್ಮ್ಸ್​ ಬಂಡವಾಳ ಹೂಡುತ್ತಿದೆ. ಸೆಪ್ಟೆಂಬರ್​ 17ರಂದು ಈ ಸಂಸ್ಥೆಗೆ ವಿಶೇಷ ದಿನ. ಆ ಪ್ರಯುಕ್ತ ‘ಟೈಗರ್​ 3’ ಸಿನಿಮಾದ ಟೀಸರ್​ ಅನಾವರಣ ಆಗಲಿದೆ. ಅದರಲ್ಲಿ ಸಲ್ಮಾನ್​ ಖಾನ್​ ಅವರ ಒಂದು ಪ್ರಮುಖ ಸಂದೇಶ ನೀಡಲಿದ್ದಾರೆ. ಅದ್ದೂರಿ ಬಜೆಟ್​​ನ ಈ ಸಿನಿಮಾದಲ್ಲಿ ಕತ್ರಿನಾ ಕೈಫ್​ ಕೂಡ ನಟಿಸಿದ್ದಾರೆ.

ಸೆ.27ಕ್ಕೆ ದೊಡ್ಡ ಮೆಸೇಜ್​ ನೀಡ್ತಾರೆ ಸಲ್ಮಾನ್​ ಖಾನ್​; ‘ಟೈಗರ್​ 3’ ಚಿತ್ರದಿಂದ ಬಿಗ್​ ಅಪ್​ಡೇಟ್​
ಸಲ್ಮಾನ್​ ಖಾನ್​
ಮದನ್​ ಕುಮಾರ್​
|

Updated on: Sep 25, 2023 | 2:46 PM

Share

ಹಿಂದಿ ಚಿತ್ರರಂಗಕ್ಕೀಗ ಸುವರ್ಣ ಕಾಲ. ಬಾಲಿವುಡ್​ನ (Bollywood) ಸಾಲು ಸಾಲು ಸಿನಿಮಾಗಳು ಸೂಪರ್​ ಹಿಟ್​ ಆಗುತ್ತಿವೆ. ಭಾರತದ ಬಾಕ್ಸ್​ ಆಫೀಸ್​ನಲ್ಲಿ ಈ ವರ್ಷ ‘ಪಠಾಣ್​’, ‘ಗದರ್​ 2’, ‘ಜವಾನ್​’ ಮುಂತಾದ ಸಿನಿಮಾಗಳು 500 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿ ಸೈ ಎನಿಸಿಕೊಂಡಿವೆ. 2023ರಲ್ಲಿ ಸಲ್ಮಾನ್​ ಖಾನ್​ (Salman Khan) ಅವರು ಇನ್ನೂ ಖಾತೆ ತೆರೆದಿಲ್ಲ. ಈ ವರ್ಷ ದೀಪಾವಳಿ ಪ್ರಯುಕ್ತ ಅವರ ಅಭಿನಯದ ‘ಟೈಗರ್​ 3’ ಸಿನಿಮಾ (Tiger 3 Movie) ಬಿಡುಗಡೆ ಆಗಲಿದೆ. ಈ ಸಿನಿಮಾ ಬಗ್ಗೆ ಅಪ್​ಡೇಟ್​ ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ. ಅಂಥವರಿಗೆ ಗುಡ್​ ನ್ಯೂಸ್​ ಸಿಕ್ಕಿದೆ. ಬುಧವಾರ (ಸೆಪ್ಟೆಂಬರ್​ 27) ಸಲ್ಮಾನ್​ ಖಾನ್​ ಕಡೆಯಿಂದ ದೊಡ್ಡ ಮೆಸೇಜ್​ ಸಿಗಲಿದೆ. ಆ ಬಗ್ಗೆ ಈಗಲೇ ಹೈಪ್​ ಸೃಷ್ಟಿ ಆಗಿದೆ.

‘ಟೈಗರ್ 3’ ಚಿತ್ರಕ್ಕೆ ಯಶ್​ ರಾಜ್​ ಫಿಲ್ಮ್ಸ್​ ಬಂಡವಾಳ ಹೂಡುತ್ತಿದೆ. ಸೆಪ್ಟೆಂಬರ್​ 17ರಂದು ಈ ಸಂಸ್ಥೆಗೆ ವಿಶೇಷ ದಿನ. ಯಾಕೆಂದರೆ, ಅಂದು ಯಶ್​ ರಾಜ್​ ಫಿಲ್ಮ್ಸ್​ ಸಂಸ್ಥಾಪಕ ಯಶ್​ ಚೋಪ್ರಾ ಅವರ ಜನ್ಮದಿನ. ಆ ವಿಶೇಷ ದಿನದ ಪ್ರಯುಕ್ತ ‘ಟೈಗರ್​ 3’ ಸಿನಿಮಾದ ಟೀಸರ್​ ಅನಾವರಣ ಆಗಲಿದೆ. ಅದರಲ್ಲಿ ಸಲ್ಮಾನ್​ ಖಾನ್​ ಅವರ ಒಂದು ಪ್ರಮುಖ ಸಂದೇಶ ನೀಡಲಿದ್ದಾರೆ. ಅದೇನು ಎಂಬುದನ್ನು ತಿಳಿಯಲು ಫ್ಯಾನ್ಸ್​ ಕಾತರರಾಗಿದ್ದಾರೆ. ಅದ್ದೂರಿ ಬಜೆಟ್​​ನಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಮತ್ತು ಕತ್ರಿನಾ ಕೈಫ್​ ಅವರು ಜೋಡಿಯಾಗಿ ಅಭಿನಯಿಸುತ್ತಿದ್ದಾರೆ.

‘ಈ ಟೀಸರ್​ನಲ್ಲಿ ಸಲ್ಮಾನ್​ ಖಾನ್​ ಅವರು ಟೈಗರ್​ ಪಾತ್ರದ ಮೂಲಕ ಅತಿ ಮುಖ್ಯವಾದ ಸಂದೇಶ ನೀಡಲಿದ್ದಾರೆ. ಚಿತ್ರದ ಟ್ರೇಲರ್​ ಬಗ್ಗೆ ಈ ಸಿನಿಮಾದಲ್ಲಿ ಸುಳಿವು ಇರಲಿದೆ’ ಎಂದು ಯಶ್​ ರಾಜ್​ ಫಿಲ್ಮ್ಸ್​ ಸಂಸ್ಥೆಯ ಆಪ್ತ ಮೂಲಗಳು ತಿಳಿಸಿರುವುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ. ‘ಏಕ್​ ಥ ಟೈಗರ್​’, ‘ಟೈಗರ್​ ಜಿಂದಾ ಹೈ’ ಸಿನಿಮಾದ ಬಳಿಕ ಸೀಕ್ವೆಲ್​ ಆಗಿ ‘ಟೈಗರ್​ 3’ ಸಿನಿಮಾ ಮೂಡುತ್ತಿದೆ. ಮನೀಶ್​ ಶರ್ಮಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ಜನ ಜಂಗುಳಿ ನಡುವೆಯೂ ರಣವೀರ್​ ಸಿಂಗ್​ಗೆ ಪ್ರೀತಿಯ ಅಪ್ಪುಗೆ ನೀಡಿದ ಸಲ್ಮಾನ್​ ಖಾನ್​; ವಿಡಿಯೋ ವೈರಲ್​

ಈ ವರ್ಷ ದೀಪಾವಳಿ ಪ್ರಯುಕ್ತ ‘ಟೈಗರ್​ 3’ ಸಿನಿಮಾ ಬಿಡುಗಡೆ ಆಗಲಿದೆ. ಇಮ್ರಾನ್​ ಹಷ್ಮಿ ಅವರು ಈ ಸಿನಿಮಾದಲ್ಲಿ ವಿಲನ್​ ಪಾತ್ರ ಮಾಡಿದ್ದಾರೆ ಎಂಬುದು ವಿಶೇಷ. ಸಲ್ಮಾನ್​ ಖಾನ್​ ಮತ್ತು ಇಮ್ರಾನ್ ಹಷ್ಮಿ ನಡುವಿನ ಫೈಟಿಂಗ್​ ನೋಡಲು ಫ್ಯಾನ್ಸ್​ ಕಾದಿದ್ದಾರೆ. ಟೀಸರ್​ ಬಿಡುಗಡೆ ಮೂಲಕ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಇದರ ನಡುವೆ ಸಲ್ಮಾನ್​ ಖಾನ್​ ಅವರು ‘ಬಿಗ್​ ಬಾಸ್​’ ರಿಯಾಲಿಟಿ ಶೋ ನಿರೂಪಣೆಯಲ್ಲಿ ಬ್ಯುಸಿ ಆಗಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್