AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾ ಸಿಎಂ ಮನೆಯ ಗಣಪತಿ ಪೂಜೆಯಲ್ಲಿ ಶಾರುಖ್; ಕೇಸರಿ ಶಾಲು ಹೊದ್ದು ಪೋಸ್ ಕೊಟ್ಟ ನಟ

ಮಹಾರಾಷ್ಟ್ರದಲ್ಲಿ ಗಣೇಶೋತ್ಸವ ಸಖತ್ ಅದ್ದೂರಿಯಾಗಿರುತ್ತದೆ. ಶಾರುಖ್ ಖಾನ್ ಅವರು ನೀಲಿ ಬಣ್ಣದ ಕುರ್ತಾ ಧರಿಸಿ ಬಂದಿದ್ದಾರೆ. ಅವರು ಆಗಮಿಸುತ್ತಿದ್ದಂತೆ ಏಕ್​ನಾಥ್ ಶಿಂಧೆ ಅವರು ಕೇಸರಿ ಬಣ್ಣದ ಶಾಲು ಹೊದಿಸಿದ್ದಾರೆ. ಆ ಬಳಿಕ ಹೂಗುಚ್ಛ ಹಾಗೂ ಗಣಪತಿ ಮೂರ್ತಿ ನೀಡಲಾಯಿತು.

ಮಹಾ ಸಿಎಂ ಮನೆಯ ಗಣಪತಿ ಪೂಜೆಯಲ್ಲಿ ಶಾರುಖ್; ಕೇಸರಿ ಶಾಲು ಹೊದ್ದು ಪೋಸ್ ಕೊಟ್ಟ ನಟ
ಶಾರುಖ್ ಖಾನ್
ರಾಜೇಶ್ ದುಗ್ಗುಮನೆ
|

Updated on:Sep 25, 2023 | 9:30 AM

Share

ಶಾರುಖ್ ಖಾನ್ (Shah Rukh Khan) ಅವರಿಗೆ ಹಿಂಶದೂ ಧರ್ಮದ ಬಗ್ಗೆ ಅಪಾರ ಗೌರವ ಇದೆ. ಅವರ ಪತ್ನಿ ಗೌರಿ ಖಾನ್ ಹಿಂದೂ. ಈ ಕಾರಣದಿಂದ ಅವರು ಈ ಧರ್ಮದ ಆಚರಣೆಗಳನ್ನು ಮಾಡುತ್ತಾರೆ. ಇತ್ತೀಚೆಗೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕ್​ನಾಥ್ ಶಿಂಧೆ ಅವರ ಮನೆಯ ಗಣಪತಿ ಪೂಜೆಗೆ ತೆರಳಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಾರುಖ್ ಖಾನ್ ಅವರಿಗೆ ಕೇಸರಿ ಶಾಲು ಹೊದಿಸಲಾಗಿದೆ. ಅವರು ಗಣಪತಿ ಮೂರ್ತಿ ಹಿಡಿದು ಪೋಸ್ ಕೊಟ್ಟಿದ್ದಾರೆ. ಈ ವಿಡಿಯೋಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಗಣೇಶೋತ್ಸವ ಸಖತ್ ಅದ್ದೂರಿಯಾಗಿರುತ್ತದೆ. ಶಾರುಖ್ ಖಾನ್ ಅವರು ನೀಲಿ ಬಣ್ಣದ ಕುರ್ತಾ ಧರಿಸಿ ಬಂದಿದ್ದಾರೆ. ಅವರು ಆಗಮಿಸುತ್ತಿದ್ದಂತೆ ಏಕ್​ನಾಥ್ ಶಿಂಧೆ ಅವರು ಕೇಸರಿ ಬಣ್ಣದ ಶಾಲು ಹೊದಿಸಿದ್ದಾರೆ. ಆ ಬಳಿಕ ಹೂಗುಚ್ಛ ಹಾಗೂ ಗಣಪತಿ ಮೂರ್ತಿ ನೀಡಲಾಯಿತು. ಶಾರುಖ್ ಖಾನ್ ಅವರನ್ನು ಅನೇಕರು ಶ್ಲಾಘಿಸಿದ್ದಾರೆ.

‘ಈ ವ್ಯಕ್ತಿಯನ್ನು ನೋಡಿ ಕಲಿತುಕೊಳ್ಳಿ. ಇವರದ್ದು ಮುಸ್ಲಿಂ ಧರ್ಮ. ಆದರೆ, ಎಲ್ಲಾ ಹಿಂದೂ ಹಬ್ಬಗಳ ಪೂಜೆಗಳಲ್ಲಿ ಭಯವಿಲ್ಲದೆ ಭಾಗಿ ಆಗುತ್ತಾರೆ. ಇವರು ಅನೇಕರಿಗೆ ಮಾದರಿ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಶಾರುಖ್ ಖಾನ್ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಶಾರುಖ್ ಖಾನ್ ಅವರು ತಮ್ಮ ಮನೆಯಲ್ಲಿ ಎಲ್ಲಾ ಹಬ್ಬಗಳನ್ನು ಆಚರಿಸುತ್ತಾರೆ. ಇದಕ್ಕೆ ಅವರು ಎಂದಿಗೂ ಸ್ಪಷ್ಟನೆ ನೀಡುವ ಕೆಲಸ ಮಾಡಿಲ್ಲ.

ಇದನ್ನೂ ಓದಿ: ‘ಜವಾನ್​’ ತಂಡದಲ್ಲಿ ಕಿರಿಕ್​? ನಯನತಾರಾ ಮುನಿಸಿಗೆ ಪ್ರತಿಕ್ರಿಯೆ ನೀಡಿದ ಶಾರುಖ್​ ಖಾನ್​

‘ಜವಾನ್’ ಸಿನಿಮಾ ಯಶಸ್ಸಿನಿಂದ ಶಾರುಖ್ ಖಾನ್ ಖ್ಯಾತಿ ಹೆಚ್ಚಿದೆ. ಈ ಚಿತ್ರ ಭಾರತದ ಬಾಕ್ಸ್ ಆಫೀಸ್​ನಲ್ಲಿ 500+ ಕೋಟಿ ರೂಪಾಯಿ ಬಾಚಿಕೊಂಡಿದೆ. ತಮಿಳು ನಿರ್ದೇಶಕ ಅಟ್ಲಿ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್  ಹೇಳಿದ್ದಾರೆ. ಅಟ್ಲಿ ನಿರ್ದೇಶನ ಮಾಡಿದ ಮೊದಲ ಬಾಲಿವುಡ್ ಸಿನಿಮಾ ಇದು. ವಿಜಯ್ ಸೇತುಪತಿ, ನಯನತಾರಾ, ಪ್ರಿಯಾಮಣಿ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ‘ಡಂಕಿ’ ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:29 am, Mon, 25 September 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್