Salman Khan: 100 ಕೋಟಿ ರೂಪಾಯಿ ಕ್ಲಬ್​ ಸೇರಿವೆ ಸಲ್ಮಾನ್​ ಖಾನ್​ ನಟನೆಯ 16 ಚಿತ್ರಗಳು; ಇಲ್ಲಿದೆ ಪಟ್ಟಿ

Salman Khan 100 Cr Movies List: ಇತ್ತೀಚಿನ ವರ್ಷಗಳಲ್ಲಿ ಸಲ್ಮಾನ್​ ಖಾನ್​ ಖ್ಯಾತಿ ಹೆಚ್ಚಿದೆ. ಈವರೆಗೆ ಅವರ 16 ಸಿನಿಮಾಗಳು 100 ಕೋಟಿ ರೂಪಾಯಿ ಕ್ಲಬ್​ ಸೇರಿವೆ ಎಂಬುದು ಗಮನಿಸಬೇಕಾದ ವಿಷಯ.

Salman Khan: 100 ಕೋಟಿ ರೂಪಾಯಿ ಕ್ಲಬ್​ ಸೇರಿವೆ ಸಲ್ಮಾನ್​ ಖಾನ್​ ನಟನೆಯ 16 ಚಿತ್ರಗಳು; ಇಲ್ಲಿದೆ ಪಟ್ಟಿ
ಸಲ್ಮಾನ್ ಖಾನ್

Updated on: May 02, 2023 | 7:15 AM

ನಟ ಸಲ್ಮಾನ್​ ಖಾನ್​ (Salman Khan) ಅವರಿಗೆ ದೊಡ್ಡ ಫ್ಯಾನ್​ ಫಾಲೋಯಿಂಗ್​ ಇದೆ. ಅವರನ್ನು ಆರಾಧಿಸುವ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಸಲ್ಲು ನಟನೆಯ ಸಿನಿಮಾಗಳು (Salman Khan Movies) ಬಾಕ್ಸ್​ ಆಫೀಸ್​ನಲ್ಲಿ ನೂರಾರು ಕೋಟಿ ರೂಪಾಯಿ ಕಮಾಯಿ ಮಾಡುತ್ತವೆ. ನಟನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿ ಕೂಡ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಸಲ್ಮಾನ್​ ಖಾನ್​ ನಟಿಸಿದ ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ (Kisi Ka Bhai Kisi Ki Jaan) ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ಒಂದು ವಾರಗಳ ಕಾಲ ಪ್ರದರ್ಶನ ಕಂಡ ಬಳಿಕ ಈ ಸಿನಿಮಾ 100 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಸ್ಟಾರ್​ ನಟರ ಸಿನಿಮಾಗಳ ಬಜೆಟ್​ ಅನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ 100 ಕೋಟಿ ರೂಪಾಯಿ ಕಲೆಕ್ಷನ್​ ಎಂಬುದು ಸಮಾಧಾನಕರ ಸಂಗತಿ ಅಲ್ಲ. ಆದರೆ ಇದು ಸಣ್ಣ ಮೊತ್ತ ಕೂಡ ಅಲ್ಲ. ಒಟ್ಟಿನಲ್ಲಿ ಯಾವುದೇ ಸಿನಿಮಾ ಶತಕೋಟಿ ಕ್ಲಬ್​ ಸೇರಿದರೆ ಆ ಚಿತ್ರತಂಡಕ್ಕೆ ಒಂದು ರೀತಿಯ ಹೆಮ್ಮೆ.

ಚಿತ್ರರಂಗದಲ್ಲಿ ಸಲ್ಮಾನ್​ ಖಾನ್​ ಅವರು ಏಳು-ಬೀಳುಗಳನ್ನು ಕಂಡಿದ್ದಾರೆ. ಆರಂಭದ ದಿನಗಳಲ್ಲಿ ತಮಗೆ ಅವಕಾಶ ಕೊಟ್ಟವರನ್ನು ಅವರು ಈಗಲೂ ಸ್ಮರಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಅವರ ಖ್ಯಾತಿ ಹೆಚ್ಚಿದೆ. ವೃತ್ತಿ ಜೀವನದಲ್ಲಿ ಈವರೆಗೆ ಸಲ್ಮಾನ್​ ಖಾನ್​ ಅವರು ನಟಿಸಿದ 16 ಸಿನಿಮಾಗಳು 100 ಕೋಟಿ ರೂಪಾಯಿ ಕ್ಲಬ್​ ಸೇರಿವೆ ಎಂಬುದು ಗಮನಿಸಬೇಕಾದ ವಿಷಯ.

ಶತಕೋಟಿ ರೂ. ಕ್ಲಬ್​ ಸೇರಿದ ಸಲ್ಮಾನ್​ ಖಾನ್​ ಅವರ 16 ಸಿನಿಮಾಗಳ ಪಟ್ಟಿ ಹೀಗಿದೆ:

  1. ಕಿಸಿ ಕ ಭಾಯ್​ ಕಿಸಿ ಕಿ ಜಾನ್​
  2. ದಬಂಗ್​ 3
  3. ಭಾರತ್​
  4. ರೇಸ್​ 3
  5. ಟೈಗರ್​ ಜಿಂದಾ ಹೈ
  6. ಟ್ಯೂಬ್​ ಲೈಟ್​
  7. ಸುಲ್ತಾನ್​
  8. ಪ್ರೇಮ್​ ರತನ್​ ಧನ್​ ಪಾಯೋ
  9. ಬಜರಂಗಿ ಭಾಯ್​ಜಾನ್​
  10. ಕಿಕ್​
  11. ಜೈ ಹೋ
  12. ದಬಂಗ್​ 2
  13. ಏಕ್​ ಥ ಟೈಗರ್​
  14. ಬಾಡಿ ಗಾರ್ಡ್​
  15. ರೆಡಿ
  16. ದಬಂಗ್​

ಸಲ್ಮಾನ್​ ಖಾನ್​ ಅವರು ಈಗ ‘ಟೈಗರ್​ 3’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ವರ್ಷ ದೀಪಾವಳಿ ಸಂದರ್ಭದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಸಲ್ಲು ಅಭಿಮಾನಿಗಳು ‘ಟೈಗರ್​ 3’ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ಬಳಿಕ ‘ಟೈಗರ್​ ವರ್ಸಸ್​ ಪಠಾಣ್​’ ಚಿತ್ರದಲ್ಲಿ ಸಲ್ಮಾನ್​ ಖಾನ್​ ನಟಿಸಲಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಆ ಸಿನಿಮಾ ನಿರ್ಮಾಣ ಆಗಲಿದೆ. ಈ ಚಿತ್ರದ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಿದೆ.

ಇದನ್ನೂ ಓದಿ
ಸೆಟ್​​ನಲ್ಲಿ ಸಲ್ಲುನ ಭೇಟಿ ಮಾಡೋಕೆ ಬಂದ ರಾಮ್​ ಚರಣ್​ಗೆ ಸಿಕ್ತು ಹಿಂದಿ ಸಿನಿಮಾ ಆಫರ್
ತಂಗಿ ಗಂಡನ ಜೊತೆಗೆ ಸಲ್ಮಾನ್​ ಖಾನ್​ ಕಿರಿಕ್​; ಭಾವನ ಸಿನಿಮಾದಿಂದಲೇ ಹೊರನಡೆದ ಆಯುಷ್​ ಶರ್ಮಾ?
ಬಹಿರಂಗ ವೇದಿಕೆಯಲ್ಲಿ ಸಲ್ಲು ಇದೆಂಥಾ ಕೆಲಸ; ಪೂಜಾ ಹೆಗ್ಡೆ ವಿಚಾರದಲ್ಲಿ ಸಿಕ್ಕಾಪಟ್ಟೆ ಮುಜುಗರ
ಸಲ್ಮಾನ್​ ಖಾನ್ ಫಾರ್ಮ್​ಹೌಸ್​ ಬೆಲೆ 80 ಕೋಟಿ ರೂ.! ಸಲ್ಲು ಮೆಚ್ಚಿನ ಈ ಸ್ಥಳದಲ್ಲಿ ಏನೆಲ್ಲ ಇದೆ?

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us